ಈ ಬಾರಿ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವುದು ಈ SUV!ಗ್ರಾಹಕರು ಮುಗಿ ಬಿದ್ದು ಖರೀದಿಸಿರುವ ಕಾರು ಇದು

Top-5 Best Selling SUV:ಸೆಪ್ಟೆಂಬರ್ ತಿಂಗಳ ಮಾರಾಟದ ಬಗ್ಗೆ ಹೇಳುವುದಾದರೆ  ಈ  SUV ಅಗ್ರಸ್ಥಾನದಲ್ಲಿದೆ. ಇದು ಬ್ರೆಝಾ, ಪಂಚ್ ಮತ್ತು ಕ್ರೆಟಾದಂತಹ ಎಲ್ಲಾ SUV ಗಳನ್ನು ಮಾರುಕಟ್ಟೆಯಲ್ಲಿ ಹಿಂದಿಕ್ಕಿದೆ. 

Written by - Ranjitha R K | Last Updated : Nov 1, 2023, 03:12 PM IST
  • ಭಾರತದಲ್ಲಿ ಎಸ್‌ಯುವಿ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದೆ.
  • ಮುಂಬರುವ ವರ್ಷಗಳಲ್ಲಿಯೂ ಹೆಚ್ಚಾಗುವ ನಿರೀಕ್ಷೆಯಿದೆ.
  • ಟಾಟಾ ನೆಕ್ಸಾನ್ SUV ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ.
ಈ ಬಾರಿ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವುದು ಈ SUV!ಗ್ರಾಹಕರು ಮುಗಿ ಬಿದ್ದು ಖರೀದಿಸಿರುವ ಕಾರು ಇದು  title=

Top-5 Best Selling SUV: ಭಾರತದಲ್ಲಿ ಎಸ್‌ಯುವಿ (ಸ್ಪೋರ್ಟ್ ಯುಟಿಲಿಟಿ ವೆಹಿಕಲ್) ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದೆ.  ಇದು ಮುಂಬರುವ ವರ್ಷಗಳಲ್ಲಿಯೂ ಹೆಚ್ಚಾಗುವ ನಿರೀಕ್ಷೆಯಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯುವಿಗಳು ಹೆಚ್ಚು ಮಾರಾಟವಾಗುತ್ತಿವೆ. ಸೆಪ್ಟೆಂಬರ್ ತಿಂಗಳ ಮಾರಾಟದ ಬಗ್ಗೆ ಹೇಳುವುದಾದರೆ ಟಾಟಾ ನೆಕ್ಸಾನ್ SUV ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ಇದು ಬ್ರೆಝಾ, ಪಂಚ್ ಮತ್ತು ಕ್ರೆಟಾದಂತಹ ಎಲ್ಲಾ SUV ಗಳನ್ನು ಮಾರುಕಟ್ಟೆಯಲ್ಲಿ ಹಿಂದಿಕ್ಕಿದೆ. ಟಾಟಾ ನೆಕ್ಸಾನ್ ಸೆಪ್ಟೆಂಬರ್‌ನಲ್ಲಿ ಒಟ್ಟು 15,325 ಯುನಿಟ್‌ಗಳು ಮಾರಾಟವಾಗುವುದರೊಂದಿಗೆ ದೇಶದ ಅತಿ ಹೆಚ್ಚು ಮಾರಾಟವಾದ SUV ಆಗಿದೆ. ನೆಕ್ಸಾನ್‌ನ 14,518 ಯುನಿಟ್‌ಗಳನ್ನು ಸೆಪ್ಟೆಂಬರ್ 2022 ರಲ್ಲಿ ಮಾರಾಟ ಮಾಡಲಾಗಿದೆ. ಇದರರ್ಥ ನೆಕ್ಸಾನ್ ಮಾರಾಟವು ವಾರ್ಷಿಕ ಆಧಾರದ ಮೇಲೆ 6 ಪ್ರತಿಶತದಷ್ಟು ಹೆಚ್ಚಾಗಿದೆ. 

ಎರಡನೇ ಸ್ಥಾನದಲ್ಲಿ ಮಾರುತಿ ಸುಜುಕಿ ಬ್ರೆಝಾ :
ಸೆಪ್ಟೆಂಬರ್ 2023 ರಲ್ಲಿ ಬ್ರೆಜ್ಜಾದ 15,001 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇವುಗಳ ನಂತರ, ಟಾಟಾ ಪಂಚ್ ಮೂರನೇ ಸ್ಥಾನದಲ್ಲಿದ್ದು,  ಪ್ರಬಲ ಅಸ್ತಿತ್ವವನ್ನು ಕಾಯ್ದುಕೊಂಡಿದೆ. ಸೆಪ್ಟೆಂಬರ್‌ನಲ್ಲಿ ಒಟ್ಟು 13,036 ಯೂನಿಟ್ ಪಂಚ್ ಮಾರಾಟವಾಗಿದೆ. ಇದರೊಂದಿಗೆ, ಇದು ಮೂರನೇ ಹೆಚ್ಚು ಮಾರಾಟವಾದ SUV ಆಗಿ ಹೊರ ಹೊಮ್ಮಿದೆ. ವಾರ್ಷಿಕ ಆಧಾರದ ಮೇಲೆ ಇದರ ಮಾರಾಟವು 6 ಪ್ರತಿಶತದಷ್ಟು ಹೆಚ್ಚಾಗಿದೆ. 

ಇದನ್ನೂ ಓದಿ : ದುಬಾರಿಯಾಗಲಿವೆಯೇ ಜಿಯೋ 5G ಪ್ಲಾನ್‌ಗಳು: ಕಂಪನಿ ಹೇಳಿದ್ದೇನು ಗೊತ್ತೇ!

ಇದರ ನಂತರ, ಹ್ಯುಂಡೈ ಕ್ರೆಟಾ ನಾಲ್ಕನೇ ಹೆಚ್ಚು ಮಾರಾಟವಾದ SUV ಆಗಿದೆ. ಸೆಪ್ಟೆಂಬರ್ 2023ರಲ್ಲಿ, 12,717 ಯುನಿಟ್‌ಗಳು ಮಾರಾಟವಾಗಿದ್ದರೆ, ಕಳೆದ ವರ್ಷ ಇದೇ ತಿಂಗಳಲ್ಲಿ, 12,866 ಯುನಿಟ್‌ಗಳು ಮಾರಾಟವಾಗಿವೆ. ಅಂದರೆ, ವಾರ್ಷಿಕ ಆಧಾರದ ಮೇಲೆ ಅದರ ಮಾರಾಟ ಸ್ವಲ್ಪ ಕಡಿಮೆಯಾಗಿದೆ. ಇವೆಲ್ಲದರ ನಂತರ ಹ್ಯುಂಡೈ ವೆನ್ಯೂ 
ಐದನೇ ಸ್ಥಾನದಲ್ಲಿತದೆ. ಇದರ ಒಟ್ಟು 12,204 ಯೂನಿಟ್ ಗಳು ಮಾರಾಟವಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದರಲ್ಲಿ 11 ಪ್ರತಿಶತದಷ್ಟು ಬೆಳವಣಿಗೆಯಾಗಿದೆ.

ಸೆಪ್ಟೆಂಬರ್ (2023) ನಲ್ಲಿ ಹೆಚ್ಚು ಮಾರಾಟವಾದ SUV ಗಳು : 
-- ಟಾಟಾ ನೆಕ್ಸಾನ್- 15,325 ಯುನಿಟ್‌ಗಳು ಮಾರಾಟವಾಗಿವೆ
-- ಮಾರುತಿ ಬ್ರೆಝಾ- 15,001 ಯುನಿಟ್‌ಗಳು ಮಾರಾಟವಾಗಿವೆ
-- ಟಾಟಾ ಪಂಚ್- 13,036 ಯುನಿಟ್‌ಗಳು ಮಾರಾಟವಾಗಿವೆ
-- ಹ್ಯುಂಡೈ ಕ್ರೆಟಾ- 12,717 ಯುನಿಟ್‌ಗಳು ಮಾರಾಟವಾಗಿವೆ
-- ಹ್ಯುಂಡೈ ವೆನ್ಯೂ- 12,204 ಯುನಿಟ್‌ಗಳು ಮಾರಾಟವಾಗಿವೆ

ಇದನ್ನೂ ಓದಿ : ತನ್ನ ಈ ಜನಪ್ರಿಯ ಇಲೆಕ್ಟ್ರಿಕ್ ಸ್ಕೂಟರ್ ಮೇಲೆ ಜಬರ್ದಸ್ತ್ ಕೊಡುಗೆ ಪ್ರಕಟಿಸಿದ ಟಿವಿಎಸ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News