Motorola G32: 17 ಸಾವಿರ ಮೌಲ್ಯದ ಸ್ಮಾರ್ಟ್‌ಫೋನ್ 2 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯ

MOTOROLA G32 Smartphone: ಈ ಸ್ಮಾರ್ಟ್‌ಫೋನ್‌ 4 GB RAM ಮತ್ತು 64 GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. 50MP Quad Pixel ಕ್ಯಾಮೆರಾ ಜೊತೆಗೆ ಶಕ್ತಿಯುತ 5000 mAh ಬ್ಯಾಟರಿಯನ್ನು ಸಹ ಪಡೆಯುತ್ತೀರಿ.

Written by - Puttaraj K Alur | Last Updated : Nov 27, 2022, 11:51 AM IST
  • MOTOROLA G32 ಸ್ಮಾರ್ಟ್‍ಫೋನ್‍ ಮೇಲೆ ಭರ್ಜರಿ ರಿಯಾಯಿತಿ
  • ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‍ಫೋನ್‍ ಮೇಲೆ ಶೇ.38ರಷ್ಟು ಡಿಸ್ಕೌಂಟ್
  • ಕೇವಲ 799 ರೂ.ಗೆ ಖರೀದಿಸಿ 16,999 ರೂ. ಬೆಲೆಯ ಸ್ಮಾರ್ಟ್‍ಫೋನ್‍
Motorola G32: 17 ಸಾವಿರ ಮೌಲ್ಯದ ಸ್ಮಾರ್ಟ್‌ಫೋನ್ 2 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯ title=
MOTOROLA G32 ಸ್ಮಾರ್ಟ್‍ಫೋನ್‍

ನವದೆಹಲಿ: MOTOROLA G32 ಸ್ಮಾರ್ಟ್‌ಫೋನ್ ಭಾರತೀಯ ಗ್ರಾಹಕರಿಗೆ ತುಂಬಾ ಇಷ್ಟವಾಗಿದೆ. ಈ ಸ್ಮಾರ್ಟ್‌ಫೋನ್ ಮಿತವ್ಯಯ ಮಾತ್ರವಲ್ಲದೆ ಶಕ್ತಿಯುತವಾಗಿದೆ. ಉತ್ತಮ ವಿಶೇಷಣಗಳು ಸಹ ಇದರಲ್ಲಿ ಲಭ್ಯವಿದೆ. ಒಳ್ಳೆಯ ವಿಷಯವೆಂದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ದೊಡ್ಡ ರಿಯಾಯಿತಿ ನೀಡಲಾಗುತ್ತಿದೆ. ಗ್ರಾಹಕರು ಊಹಿಸಲೂ ಸಾಧ್ಯವಾಗದಷ್ಟು ಉಳಿತಾಯ ಮಾಡಬಹುದು. ಹಾಗಾದರೆ ಈ ಆಫರ್ ಏನೆಂದು ತಿಳಿಯಿರಿ.

ಇದನ್ನೂ ಓದಿ: Apple iPhone: ಎಲ್ಲಾ ಐಫೋನ್‌ಗಳನ್ನು ವಶಪಡಿಸಿಕೊಳ್ಳಲು ಮುಂದಾದ ಸರ್ಕಾರ! ಕಾರಣವೇನು?

ರಿಯಾಯಿತಿ ಎಷ್ಟು?

ಸ್ಮಾರ್ಟ್‌ಫೋನ್‌ನ ಮೂಲ ಬೆಲೆ 16,999 ರೂ. ಇದೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಶೇ.38ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇದರ ನಂತರ ನಿಮಗೆ 10,499 ರೂ.ಗೆ ಫೋನ್ ಸಿಗುತ್ತದೆ. ಅದ್ಭುತವಾದ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಮಾರ್ಟ್‍ಫೋನ್‍ ನಿಮ್ಮ ಬಜೆಟ್‍ಗೆ ತಕ್ಕ ಬೆಲೆಗೆ ದೊರೆಯಲಿದೆ.

ಇದನ್ನೂ ಓದಿ: Amazing offer! ₹14,999 ಬೆಲೆಯ ಸ್ಮಾರ್ಟ್‌ಫೋನ್‌ ಕೇವಲ ₹549 ಗೆ ಲಭ್ಯ

Exchange Bonus ಸಹ ಲಭ್ಯ

ಶೇ.38ರಷ್ಟು ರಿಯಾಯಿತಿ ಮಾತ್ರವಲ್ಲದೆ ಈ ಸ್ಮಾರ್ಟ್‌ಫೋನ್‌ ಮೇಲೆ ಅದ್ಭುತವಾದ Exchange Bonus ಸಹ ಲಭ್ಯವಿದೆ. ಫ್ಲಿಪ್‌ಕಾರ್ಟ್‍ನಲ್ಲಿ ಬರೋಬ್ಬರಿ 9,700 ರೂ. ಮೌಲ್ಯದ Exchange Bonus ನಿಮಗೆ ಸಿಗುತ್ತದೆ. ಈ ಆಫರ್ ನ ಲಾಭ ಪಡೆಯಲು ನೀವು ನಿಮ್ಮ ಹಳೆಯ ಫೋನ್‍ಅನ್ನು ಹೊಸ ಸ್ಮಾರ್ಟ್‍ಫೋನ್‍ ಜೊತೆಗೆ ಬದಲಾಯಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಹಳೆಯ ಫೋನ್‍ನ ಸ್ಥಿತಿ ಉತ್ತಮವಾಗಿದ್ದರೆ ನಿಮಗೆ ಎಕ್ಸ್‍ಚೇಂಜ್‍ ಬೋನಸ್‍ನ ಸಂಪೂರ್ಣ ಲಾಭ ದೊರೆಯುತ್ತದೆ. ಡಿಸ್ಕೌಂಟ್ ಮತ್ತು ವಿನಿಮಯ ಬೋನಸ್‍ನ ಪ್ರಯೋಜನ ಪಡೆದ ಬಳಿಕ ನಿಮಗೆ ಈ ಸ್ಮಾರ್ಟ್‍ಫೋನ್ ಕೇವಲ 799 ರೂ. ಪಾವತಿಸಬೇಕಾಗುತ್ತದೆ.

ಸ್ಮಾರ್ಟ್‍ಫೋನ್‍ನ ಪ್ರಮುಖ ವೈಶಿಷ್ಟ್ಯಗಳು

ಸ್ಮಾರ್ಟ್‌ಫೋನ್‌ 4 GB RAM ಮತ್ತು 64 GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. 50MP Quad Pixel ಕ್ಯಾಮೆರಾ ಜೊತೆಗೆ ಶಕ್ತಿಯುತ 5000 mAh ಬ್ಯಾಟರಿಯನ್ನು ಸಹ ಪಡೆಯುತ್ತೀರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News