Pleasure Plus Xtec Sports ಸ್ಕೂಟರ್ ಬಿಡುಗಡೆ ಮಾಡಿದ Hero! ಅದು ಕೂಡಾ ಕಡಿಮೆ ಬೆಲೆಯಲ್ಲಿ !

Hero Pleasure Plus Xtec Sports:ಹೀರೋ ಮೋಟೋಕಾರ್ಪ್ ಪ್ಲೆಷರ್ ಪ್ಲಸ್ ಸ್ಕೂಟರ್‌ನ ಹೊಸ ರೂಪಾಂತರ ಬಿಡುಗಡೆಯಾಗಿದೆ.ಹೊಸ Xtec ಸ್ಪೋರ್ಟ್ಸ್ ರೂಪಾಂತರ  ಮತ್ತು ಇತರ ಟ್ರಿಮ್‌ಗಳ ನಡುವೆ ಇರುವ ದೊಡ್ಡ ವ್ಯತ್ಯಾಸವೆಂದರೆ ಗ್ರಾಫಿಕ್ಸ್ ಮತ್ತು ಪೇಂಟ್ ಸ್ಕೀಮ್.

Written by - Ranjitha R K | Last Updated : Mar 27, 2024, 11:58 AM IST
  • ಹೀರೋ ಮೋಟೋಕಾರ್ಪ್ ಪ್ಲೆಷರ್ ಪ್ಲಸ್ ಸ್ಕೂಟರ್‌ನ ಹೊಸ ರೂಪಾಂತರ ಬಿಡುಗಡೆ
  • ಈ ಹೊಸ ಸ್ಕೂಟರ್ ನ ಹೆಸರು ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಪೋರ್ಟ್ಸ್
  • ಇದರ ಎಕ್ಸ್ ಶೋ ರೂಂ ಬೆಲೆ 79,738 ರೂ.
Pleasure Plus Xtec Sports ಸ್ಕೂಟರ್ ಬಿಡುಗಡೆ ಮಾಡಿದ Hero! ಅದು ಕೂಡಾ ಕಡಿಮೆ ಬೆಲೆಯಲ್ಲಿ !  title=

Hero Pleasure Plus Xtec Sports : ಹೀರೋ ಮೋಟೋಕಾರ್ಪ್ ಪ್ಲೆಷರ್ ಪ್ಲಸ್ ಸ್ಕೂಟರ್‌ನ ಹೊಸ ರೂಪಾಂತರ ಬಿಡುಗಡೆಯಾಗಿದೆ. ಈ ಹೊಸ ಸ್ಕೂಟರ್ ನ ಹೆಸರು ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಪೋರ್ಟ್ಸ್ (Hero Pleasure Plus Xtec Sports). ಇದರ ಎಕ್ಸ್ ಶೋ ರೂಂ ಬೆಲೆ 79,738 ರೂ. ಹೊಸ ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಪೋರ್ಟ್ಸ್ ರೂಪಾಂತರವು ಸ್ಕೂಟರ್ ಲೈನ್‌ಅಪ್‌ನಲ್ಲಿ ಎಕ್ಸ್‌ಟೆಕ್ ಕನೆಕ್ಟೆಡ್ ಮತ್ತು ಎಕ್ಸ್‌ಟೆಕ್ ಸ್ಟ್ಯಾಂಡರ್ಡ್ ಟ್ರಿಮ್‌ಗಳ ನಡುವೆ ಇರುತ್ತದೆ. ಹೊಸ Xtec ಸ್ಪೋರ್ಟ್ಸ್ ರೂಪಾಂತರ  ಮತ್ತು  ಇತರ ಟ್ರಿಮ್‌ಗಳ ನಡುವೆ ಇರುವ ದೊಡ್ಡ ವ್ಯತ್ಯಾಸವೆಂದರೆ ಗ್ರಾಫಿಕ್ಸ್ ಮತ್ತು ಪೇಂಟ್ ಸ್ಕೀಮ್. 

Xtec ಸ್ಪೋರ್ಟ್ಸ್ ಅನ್ನು ಆರೆಂಜ್ ಹೈಲೈಟ್‌ಗಳೊಂದಿಗೆ ಅಬ್ರಾಕ್ಸ್ ಆರೆಂಜ್ ಬ್ಲೂನಲ್ಲಿ ಪೂರ್ಣಗೊಳಿಸಲಾಗಿದೆ. ಮಿರರ್ ಮತ್ತು ಗ್ರ್ಯಾಬ್ ಹ್ಯಾಂಡಲ್‌ಗಳು ಬಾಡಿ ಬಣ್ಣವನ್ನು ಹೊಂದಿದ್ದು, ರಿಮ್‌ಗಳಿಗೆ ಆರೆಂಜ್ ಹೈಲೈಟ್ ನೀಡಲಾಗಿದೆ. ಸೈಡ್ ಪ್ಯಾನಲ್ ನಲ್ಲಿ ನಂಬರ್  '18' ಎಂದು ಬರೆಯಲಾಗಿದೆ. ಮುಂಭಾಗ ಮತ್ತು ಮುಂಭಾಗದ ಮಡ್‌ಗಾರ್ಡ್‌ನಲ್ಲಿಯೂ ಹೊಸ ಗ್ರಾಫಿಕ್ಸ್ ಇದೆ.ಈ ಬದಲಾವಣೆಗಳ ಹೊರತಾಗಿ, ಸ್ಕೂಟರ್ 10-ಇಂಚಿನ ಚಕ್ರಗಳು, ಟೆಲಿಸ್ಕೋಪಿಕ್ ಫೋರ್ಕ್‌ಗಳು, ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳು ಮತ್ತು ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ನೀಡಲಾಗಿದೆ.

ಇದನ್ನೂ ಓದಿ : ಅಂತಾರಾಷ್ಟ್ರೀಯ ಯುಪಿಐ ಪಾವತಿ: PhonePe, GPayಗೆ ಟಕ್ಕರ್ ನೀಡಿದ ವಾಟ್ಸಾಪ್

ಹೀರೋ ಪ್ಲೆಷರ್ ಪ್ಲಸ್ Xtec ಸ್ಪೋರ್ಟ್ಸ್ 110.9cc, ಏರ್-ಕೂಲ್ಡ್, 4-ಸ್ಟ್ರೋಕ್ ಸಿಂಗಲ್ ಸಿಲಿಂಡರ್ OHC ಎಂಜಿನ್ ಅನ್ನು ಹೊಂದಿದೆ. ಇದು 8bhp ಮತ್ತು 8.7Nm ಔಟ್ ಪುಟ್ ನೀಡುತ್ತದೆ. ಈ ಸ್ಕೂಟರ್‌ನ ಉದ್ದ 1769mm, ಅಗಲ 704mm, ಎತ್ತರ 1161mm ಮತ್ತು ವೀಲ್‌ಬೇಸ್ 1238mm. ಸ್ಕೂಟರ್‌ನ ಗ್ರೌಂಡ್ ಕ್ಲಿಯರೆನ್ಸ್ 155 ಎಂಎಂ. ಇದರ ಇಂಧನ ಸಾಮರ್ಥ್ಯ 4.8 ಲೀಟರ್.ಇದು ಮುಂಭಾಗ ಮತ್ತು ಹಿಂಭಾಗದಲ್ಲಿ 90/100 x 10-53 J ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ.

ಎಲ್ಲಾ ರೂಪಾಂತರಗಳ ಬೆಲೆಗಳು :
ಪ್ಲೆಶರ್+ XTEC ಕನೆಕ್ಟೆಡ್ (PLEASURE+ XTEC CONNECTED)-  82,738 ರೂ
-- ಪ್ಲೆಶರ್+ XTEC ಸ್ಪೋರ್ಟ್ಸ್ (PLEASURE+ XTEC SPORTS-)-  79,738 ರೂ
-- PLEASURE+ XTEC ZX-  78,138 ರೂ
-- ಪ್ಲೆಷರ್+ XTEC ZX ಜುಬಿಲೆಂಟ್  ಯಲ್ಲೋ  (PLEASURE+ XTEC ZX)-  79,738 ರೂ
-- ಪ್ಲೆಷರ್+  ಎಲ್ ಎಕ್ಸ್ (PLEASURE+ LX)-  70,838 ರೂ
-- ಪ್ಲೆಶರ್+ ವಿಎಕ್ಸ್ (PLEASURE+ VX-)- 74,288 ರೂ

ಇದನ್ನೂ ಓದಿ : ಮುಂದಿನ ವಾರ ಮಾರುಕಟ್ಟೆಗೆ ಬರುತ್ತಿದೆ Motorola Edge 50 Pro!ವೈಶಿಷ್ಟ್ಯ ಮತ್ತು ಬೆಲೆ ಎಷ್ಟಿದೆ ಗೊತ್ತಾ ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News