ಹೀಗೆ ಮಾಡಿದರೆ ನೀವು ಬುಕ್ ಮಾಡುವ ರೈಲು ಟಿಕೆಟ್ ಕನ್ಫರ್ಮ್ ಆಗುವುದು ಪಕ್ಕಾ !

ರೈಲು ಪ್ರಯಾಣ ಹೆಚ್ಚು ಆರಾಮದಾಯಕವಾಗಿರುತ್ತದೆ ಎನ್ನುವ ಕಾರಣಕ್ಕೆ ಅನೇಕ ಜನರು ಬಸ್ ಮತ್ತು ವಿಮಾನಕ್ಕಿಂತ ರೈಲಿನಲ್ಲಿ ಪ್ರಯಾಣ ಬೆಳೆಸಲು ಬಯಸುತ್ತಾರೆ.

Written by - Ranjitha R K | Last Updated : Jul 4, 2023, 03:00 PM IST
  • ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಮಂದಿ ರೈಲುಗಳಲ್ಲಿ ಪ್ರಯಾಣಿಸುತ್ತಾರೆ.
  • ಒಂದು ತಿಂಗಳು ಅಥವಾ ಎರಡು ತಿಂಗಳು ಮುಂಚಿತವಾಗಿ ಟಿಕೆಟ್‌ ಬುಕ್ ಮಾಡಬೇಕು
  • ರೈಲಿನಲ್ಲಿ ಕನ್ಫರ್ಮ್ ಟಿಕೆಟ್ ಸಿಗುವುದು ಸುಲಭವಲ್ಲ
ಹೀಗೆ ಮಾಡಿದರೆ ನೀವು ಬುಕ್ ಮಾಡುವ ರೈಲು ಟಿಕೆಟ್ ಕನ್ಫರ್ಮ್ ಆಗುವುದು ಪಕ್ಕಾ !  title=

ಬೆಂಗಳೂರು : ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಮಂದಿ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ನಮ್ಮಲ್ಲಿ ಬಹುತೇಕ ಮಂದಿ ರೈಲು ಪ್ರಯಾಣವನ್ನೇ ನೆಚ್ಚಿಕೊಳ್ಳುತ್ತಾರೆ. ರೈಲು ಪ್ರಯಾಣ ಹೆಚ್ಚು ಆರಾಮದಾಯಕವಾಗಿರುತ್ತದೆ ಎನ್ನುವ ಕಾರಣಕ್ಕೆ ಅನೇಕ ಜನರು ಬಸ್ ಮತ್ತು ವಿಮಾನಕ್ಕಿಂತ ರೈಲಿನಲ್ಲಿ ಪ್ರಯಾಣ ಬೆಳೆಸಲು ಬಯಸುತ್ತಾರೆ. ಅಲ್ಲದೆ, ರೈಲು ಪ್ರಯಾಣ ಸುರಕ್ಷಿತ ಮತ್ತು ವೇಗವಾಗಿರುತ್ತದೆ. ಇನ್ನು ರೈಲಿನಲ್ಲಿ ಸಂಚರಿಸುವಾಗ ಮುಂಗಡವಾಗಿ ಟಿಕೆಟ್ ಸಿಗದಿದ್ದರೂ ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಸೌಲಭ್ಯಗಳ ಮೂಲಕ ಕನ್ಫರ್ಮ್ ಟಿಕೆಟ್ ಪಡೆಯುವ ಅವಕಾಶ ಕೂಡಾ ಇರುತ್ತದೆ. ಆದರೂ ರೈಲಿನಲ್ಲಿ ಕನ್ಫರ್ಮ್ ಟಿಕೆಟ್ ಸಿಗುವುದು ಕಷ್ಟ. 

ಸಾಮಾನ್ಯವಾಗಿ, ರೈಲಿನಲ್ಲಿ ಕನ್‌ಫರ್ಮ್ ಟಿಕೆಟ್ ಸಿಗಬೇಕಾದರೆ ಒಂದು ತಿಂಗಳು ಅಥವಾ ಎರಡು ತಿಂಗಳು ಮುಂಚಿತವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಬೇಕಾಗುತ್ತದೆ. ಇನ್ನು ರಜೆ, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಕನ್ಫರ್ಮ್ ಟಿಕೆಟ್ ಪಡೆಯುವುದು ಬಹಳ ಕಷ್ಟ. ಆದರೆ ಈಗ ಕನ್ಫರ್ಮ್  ಟಿಕೆಟ್ ಪಡೆಯಲು ಬಹಳ ಕಷ್ಟ ಪಡಬೇಕಾಗಿಲ್ಲ. 

ಇದನ್ನೂ ಓದಿ : JioBharat phone: ಕೇವಲ 999 ರೂ.ಗೆ ರಿಲಯನ್ಸ್ ಜಿಯೋ 4G ಮೊಬೈಲ್

ಥರ್ಡ್ ಪಾರ್ಟಿ ಅಪ್ಲಿಕೇಶನ್‌ ಬಳಸಿ : 
ನೀವು ಇಲ್ಲಿಯವರೆಗೆ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಿರದಿದ್ದರೆ  ಈ ವಿಧಾನವು ಹೆಚ್ಚು ಉಪಯುಕ್ತವಾಗಿರಲಿದೆ. ಈ ವಿಧನಾವನ್ನು ಬಳಸುವ ಮೂಲಕ ಕನ್ಫರ್ಮ್ ರೈಲು ಟಿಕೆಟ್ ಪಡೆಯುವುದು ಸಾಧ್ಯವಾಗುತ್ತದೆ. ಇದಕ್ಕಾಗಿ, ನೀವು Google Play Storeಗೆ ಹೋಗಬೇಕು. ಅಲ್ಲಿ ಉತ್ತಮ ರೇಟಿಂಗ್ ಹೊಂದಿರುವ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಇದು ಕನ್ಫರ್ಮ್ ರೈಲು ಟಿಕೆಟ್ ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ವಿಧಾನವು ತುಂಬಾ ಪರಿಣಾಮಕಾರಿಯಾಗಿ ಮತ್ತು ಹೆಚ್ಚು ಉಪಯುಕ್ತವಾಗಿದೆ. 

ಹೈ ಸ್ಪೀಡ್ ಇಂಟರ್ನೆಟ್ ಬಳಸಿ:
ಹೈ ಸ್ಪೀಡ್ ಇಂಟರ್ನೆಟ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಿದರೆ,  ಕನ್ಫರ್ಮ್ ಟಿಕೆಟ್ ಪಡೆಯುವ ಅವಕಾಶ ಕೂಡಾ ಹೆಚ್ಚಾಗಿರುತ್ತದೆ. ನೀವು ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ನಿಧಾನಗತಿಯ ಇಂಟರ್ನೆಟ್ ಸಂಪರ್ಕವನ್ನು ಬಳಸುತ್ತಿದ್ದರೆ, ಹಲವು ಬಾರಿ ಪ್ರಕ್ರಿಯೆಯು ಮಧ್ಯದಲ್ಲಿ ಸ್ಥಗಿತಗೊಳ್ಳುತ್ತದೆ. ಹೀಗಾದಾಗ ಟಿಕೆಟ್‌ ಬುಕ್ ಮಾಡುವುದು ಕಷ್ಟವಾಗುತ್ತದೆ. 

ಇದನ್ನೂ ಓದಿ : Science Report: ಈ ಜನರಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚು! ಅಧ್ಯಯನ ವರದಿ ಹೇಳಿದ್ದೇನು?

IRCTC ನಲ್ಲಿ ಲಾಗಿನ್  ಆಗಬೇಕಾಗುತ್ತದೆ : 
ನೀವು  ಕನ್ಫರ್ಮ್ ರೈಲು ಟಿಕೆಟ್ ಬಯಸಿದರೆ, IRCTC ಯ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು. ಅಂದರೆ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ರಚಿಸಬೇಕು. ಇಲ್ಲಿಂದ ನೀವು ಸುಲಭವಾಗಿ  ರೈಲ್ವೆ ಟಿಕೆಟ್ ಅನ್ನು ಬುಕ್ ಮಾಡಬಹುದು. ಇಲ್ಲಿ ರೈಲು ಟಿಕೆಟ್ ಬುಕ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News