ಕಡಿಮೆ ಬೆಲೆಯ ಪುಟ್ಟ Window AC!ಬಿಸಿಲಿನಲ್ಲಿ ತಂಪಾಗಿಸುತ್ತದೆ, ಚಳಿಯಲ್ಲಿ ಬೆಚ್ಚಗಿಡುತ್ತದೆ

ComfyAir ಬಿಸಿಲಿನ ಕಾಲಕ್ಕೆ  ಕೋಣೆ ತಂಪಾಗಿಸಲು ಮತ್ತು ಚಳಿಗೆ ಕೋಣೆಯನ್ನು  ಬಿಸಿಯಾಗಿಡಲು ಸೂಕ್ತವಾದ ಹವಾನಿಯಂತ್ರಣ ಘಟಕವಾಗಿದೆ.

Written by - Ranjitha R K | Last Updated : Jul 3, 2023, 12:34 PM IST
  • ಮಾರುಕಟ್ಟೆಗೆ ಬಂದಿದೆ ಅಗ್ಗದ ಬೆಲೆಯ ComfyAir ಎಸಿ
  • ವಿವಿಧ ಹಂತದ ಕೂಲಿಂಗ್ ಮತ್ತು ಹೀಟಿಂಗ್ ಪವರ್ ನೊಂದಿಗೆ ಲಭ್ಯ
  • ಈ ವಿಂಡೋ ಎಸಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಡಿಮೆ ಬೆಲೆಯ ಪುಟ್ಟ Window AC!ಬಿಸಿಲಿನಲ್ಲಿ ತಂಪಾಗಿಸುತ್ತದೆ, ಚಳಿಯಲ್ಲಿ ಬೆಚ್ಚಗಿಡುತ್ತದೆ  title=

ಬೆಂಗಳೂರು : ComfyAir ತನ್ನ ವಿಂಡೋ ಏರ್ ಕಂಡಿಷನರ್‌ಗಾಗಿ  ಕಿಕ್‌ಸ್ಟಾರ್ಟರ್ ಕ್ರೌಡ್‌ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸಿದೆ.  ವಿವಿಧ ಹಂತದ  ಕೂಲಿಂಗ್ ಮತ್ತು ಹೀಟಿಂಗ್ ಪವರ್ ನೊಂದಿಗೆ ಮೂರು ಮಾದರಿಗಳಲ್ಲಿ ಈ ಎಸಿ ಕಾರ್ಯ ನಿರ್ವಹಿಸುತ್ತದೆ. ಈ ಎಸಿಯನ್ನು ಅಳವಡಿಸಿದರೂ ನಿಮಗೆ ಬೇಕಾದ ರೀತಿಯಲ್ಲಿ ಕಿಟಕಿಯನ್ನು ತೆರೆಯಬಹುದು ಅಥವಾ ಮುಚ್ಚಬಹುದು ಎನ್ನುವುದು ಈ ಎಸಿಯ ವಿಶೇಷತೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಎಸಿಗೆ ಹೋಲಿಸಿದರೆ ಇದರ ಬೆಲೆ ಕೂಡಾ ಅತ್ಯಂತ ಕಡಿಮೆ. ಈ ವಿಂಡೋ ಎಸಿ ಬಗ್ಗೆ  ಸಂಪೂರ್ಣ ಮಾಹಿತಿ ಇಲ್ಲಿದೆ. 

ವಿಂಡೋ ಎಸಿ : 
ComfyAir ಬಿಸಿಲಿನ ಕಾಲಕ್ಕೆ  ಕೋಣೆ ತಂಪಾಗಿಸಲು ಮತ್ತು ಚಳಿಗೆ  ಕೋಣೆಯನ್ನು  ಬಿಸಿಯಾಗಿಡಲು ಸೂಕ್ತವಾದ ಹವಾನಿಯಂತ್ರಣ ಘಟಕವಾಗಿದೆ. ಈ ಘಟಕವನ್ನು ಅಡುಗೆಮನೆ,  ಮಲಗುವ ಕೋಣೆಯಂತಹ ಸಣ್ಣ ಕೋಣೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ವಿಶೇಷತೆ ಏನೆಂದರೆ ಈ ವಿಂಡೋ ಏಸಿಯನ್ನು ಅಳವಡಿಸಿದರೂ ನಿಮ್ಮ ಆಯ್ಕೆಯ ಪ್ರಕಾರ ಕಿಟಕಿಯನ್ನು ತೆರೆಯಬಹುದು ಅಥವಾ ಮುಚ್ಚಬಹುದು. ಈ ಘಟಕವು  ಟೂ  ವಿಂಡೋ ಸ್ಪೀಡ್  ಸೆಟ್ಟಿಂಗ್‌ಗಳೊಂದಿಗೆ ನಿಮ್ಮ ಕೋಣೆಗೆ 16 ರಿಂದ 30° C ತಾಪಮಾನವನ್ನು ಒದಗಿಸುತ್ತದೆ.

ಇದನ್ನೂ ಓದಿ : WhatsApp 'Edit' ವೈಶಿಷ್ಟ್ಯ ಇಲ್ಲಿದೆ; ಈ ಹಂತ-ಹಂತವಾಗಿ ನಿಮ್ಮ ಮೆಸೇಜ್ ಗಳನ್ನು ಸರಿಪಡಿಸುವುದು  ಹೇಗೆ  ಎಂಬುದನ್ನು ಪರಿಶೀಲಿಸಿ

ಮೂರು ಮಾದರಿಗಳಲ್ಲಿ ಬರುತ್ತದೆ : 
ನಿಮ್ಮ ಆಯ್ಕೆಯ ಪ್ರಕಾರ, ರಿಮೋಟ್ ಅಥವಾ ಬಿಲ್ಟ್-ಇನ್ ಬಟನ್‌ಗಳ ಮೂಲಕ ಗ್ಯಾಜೆಟ್ ಅನ್ನು ನಿಯಂತ್ರಿಸುವುದು ಸಾಧ್ಯವಾಗುತ್ತದೆ. ComfyAir 3000, ComfyAir 6000 ಮತ್ತು ComfyAir 9000 ಎನ್ನುವ ಮೂರು ಮಾದರಿಗಳಲ್ಲಿ ಲಭ್ಯವಿದೆ. ಇದು ಪ್ರತಿ ಗಂಟೆಗೆ 3,000, 6,000 ಮತ್ತು 9,000 BTU ಗಳನ್ನು ಬಳಸುತ್ತದೆ. ComfyAir 3000 880W ಕೂಲಿಂಗ್ ಮತ್ತು 600W ಹೀಟಿಂಗ್ ಪವರ್ ನೀಡಲಾಗಿದೆ.   ComfyAir 6000 ದಲ್ಲಿ  1,758W ಕೂಲಿಂಗ್ ಮತ್ತು 1,500 ಹೀಟಿಂಗ್ ಪವರ್ ನೀಡಲಾಗಿದೆ. ComfyAir 9000 2,637W ಕೂಲಿಂಗ್ ಮತ್ತು 1,500W ಹೀಟಿಂಗ್ ಪವರ್ ಹೊಂದಿದೆ. ಈ ರೀತಿಯಾಗಿ ನಿಮ್ಮ ಅವಶ್ಯಕತೆ ಮತ್ತು ಕೋಣೆಯ ಗಾತ್ರಕ್ಕೆ ಅನುಗುಣವಾಗಿ ಸೂಕ್ತವಾದ ಮಾದರಿಯನ್ನು ಆಯ್ಕೆ ಮಾಡಬಹುದು.

ಬೆಲೆಯೂ ಕಡಿಮೆ :
comfyAir 3000 ವಿಂಡೋ ಏರ್ ಕಂಡಿಷನರ್ ಬೆಲೆ 199 ಡಾಲರ್ ಅಂದರೆ ರೂಪಾಯಿಗಳಿಗೆ ಹೋಲಿಸಿದರೆ ಸುಮಾರು 16 ಸಾವಿರ. ComfyAir 6000 ಮತ್ತು 9000 ಮಾದರಿಗಳ ಬೆಲೆ ಕ್ರಮವಾಗಿ  18,732 ಮತ್ತು  20,368 ರೂಪಾಯಿ. 

ಇದನ್ನೂ ಓದಿ : Twitter Down: ವಿಶ್ವಾದ್ಯಂತ ಟ್ವಿಟ್ಟರ್ ಡೌನ್! ಟೈಮ್ ಲೈನ್ ಮಾಯ, ಕಂಗಾಲಾದ ಬಳಕೆದಾರರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News