Viral Video: ಶಾಲೆಗೆ ನುಗ್ಗಿದ ಕರಡಿ ಏನು ಅವಾಂತರ ಮಾಡಿದೆ ನೋಡಿ..?

Bear Attack: ಹನೂರು ತಾಲೂಕಿನ ಸಂದನಪಾಳ್ಯದ ಸಂತ ಅಂಥೋಣಿ ಗ್ರಾಮಾಂತರ ಪ್ರೌಢಶಾಲೆಗೆ ಗುರುವಾರ ಮಧ್ಯರಾತ್ರಿ ಕರಡಿಯೊಂದು ನುಗ್ಗಿದ್ದು, ಆಹಾರ ಪದಾರ್ಥಗಳನ್ನು ತಿನ್ನುವುದರ ಜೊತೆಗೆ  ಪೀಠೋಪಕರಣಗಳನ್ನು ಮುರಿದು ಹಾಕಿ ದಾಂಧಲೆ ಮಾಡಿದೆ.

Written by - Puttaraj K Alur | Last Updated : Dec 15, 2023, 01:19 PM IST
  • ಗಡಿನಾಡು ಜಿಲ್ಲೆ ಚಾಮರಾಜನಗರದಲ್ಲಿ ಕರಡಿ ಉಪಟಳ ಜೋರಾಗಿದೆ
  • ಇತ್ತೀಚೆಗಷ್ಟೇ ಮೊಟ್ಟೆ ತಿನ್ನುತ್ತಿದ್ದ ಕರಡಿ ಸೆರೆ ಹಿಡಿದ ಬಳಿಕ ಮತ್ತೊಂದು ಪ್ರತ್ಯಕ್ಷ
  • ಶಾಲೆಗೆ ನುಗ್ಗಿ ಆಹಾರ ಪದಾರ್ಥ ತಿನ್ನುವುದರ ಜೊತೆಗೆ ಪೀಠೋಪಕರಣ ಮುರಿದುಹಾಕಿದೆ
Viral Video: ಶಾಲೆಗೆ ನುಗ್ಗಿದ ಕರಡಿ ಏನು ಅವಾಂತರ ಮಾಡಿದೆ ನೋಡಿ..? title=
ಚಾಮರಾಜನಗರದಲ್ಲಿ ಕರಡಿ ಉಪಟಳ

ಚಾಮರಾಜನಗರ: ಗಡಿನಾಡು ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನಲ್ಲಿ ಈಗ ಕರಡಿ ಉಪಟಳ ಜೋರಾಗಿದೆ. ಇತ್ತೀಚೆಗೆ ಅಜ್ಜಿಪುರದಲ್ಲಿ ಮೊಟ್ಟೆಗಳನ್ನು ತಿನ್ನುತ್ತಿದ್ದ ಕರಡಿ ಸೆರೆ ಹಿಡಿದ ಬಳಿಕ ಈಗ ಮತ್ತೊಂದು ಕರಡಿ ಪ್ರತ್ಯಕ್ಷವಾಗಿದೆ. ಮಾರ್ಟಳ್ಳಿ ಸಮೀಪದ ಸಂದನಪಾಳ್ಯದ ಶಾಲೆಯೊಂದಕ್ಕೆ ಕರಡಿ ನುಗ್ಗಿ ದಾಂಧಲೆ ಮಾಡಿರುವ ಘಟನೆ ನಡೆದಿದೆ.

ಹನೂರು ತಾಲೂಕಿನ ಸಂದನಪಾಳ್ಯದ ಸಂತ ಅಂಥೋಣಿ ಗ್ರಾಮಾಂತರ ಪ್ರೌಢಶಾಲೆಗೆ ಗುರುವಾರ ಮಧ್ಯರಾತ್ರಿ ಕರಡಿಯೊಂದು ನುಗ್ಗಿದ್ದು, ಆಹಾರ ಪದಾರ್ಥಗಳನ್ನು ತಿನ್ನುವುದರ ಜೊತೆಗೆ ಪೀಠೋಪಕರಗಳಣನ್ನು ಮುರಿದು ಹಾಕಿ ದಾಂಧಲೆ ಮಾಡಿದೆ. ರಾತ್ರಿ 1 ಗಂಟೆ ಸಮಯದಲ್ಲಿ ಶಿಕ್ಷಕರ ವಿಶ್ರಾಂತಿ ಕೊಠಡಿಯ ಬಾಗಿಲನ್ನು ಮುರಿದು ಒಳನುಗ್ಗಿರುವ ಕರಡಿ, ಶಾಲೆಯ ಸ್ಟೋರ್ ರೂಂನ ಬಾಗಿಲು ಮುರಿದು ಅಡುಗೆ ಎಣ್ಣೆ, ಬೆಲ್ಲ ಮುಂತಾದ ಪದಾರ್ಥಗಳನ್ನು ಸೇವಿಸಿದೆ.

ಇದನ್ನೂ ಓದಿ: 46ನೇ ವಯಸ್ಸಿನಲ್ಲಿ ಖ್ಯಾತ ಕಿರುತೆರೆ ನಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಕಾಮಿಡಿ ನಟ!

ಕರಡಿ ಬಾಗಿಲು ಮುರಿದು ಒಳನುಗ್ಗುತ್ತಿರುವ ದೃಶ್ಯವು ಶಾಲಾ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂದು ಬೆಳಗ್ಗೆ ಮುಖ್ಯಶಿಕ್ಷಕ ಲೂಯಿಸ್ ನೇಸನ್ ಶಾಲೆಗೆ ಬರುತ್ತಿದ್ದಂತೆ ಶಿಕ್ಷಕರ ಕೊಠಡಿ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಬಳಿಕ ಒಳಗೆ ಹೋಗಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಶಾಲೆಗೆ ಎಂಟ್ರಿ ಕೊಟ್ಟ ಕರಡಿ ಪುಸ್ತಕಗಳು, ಆಹಾರ ಸಾಮಗ್ರಿಗಳೆಲ್ಲ ಚೆಲ್ಲಾಪಿಲ್ಲಿ ಮಾಡಿದೆ. ಇದನ್ನು ಕಂಡು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕರಡಿ ಒಳನುಗ್ಗಿರುವುದು ಗೊತ್ತಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಭಾಗದಲ್ಲಿ ಇತ್ತೀಚೆಗೆ ಕರಡಿಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆಯವರು ಈ ಬಗ್ಗೆ ಗಮನಹರಿಸಬೇಕೆಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಟ್ಯಾಕ್ಸಿ ಡ್ರೈವರ್‌ ಹಾಗೂ ಮಹಿಳೆಯ ಗಲಾಟೆಯ ವಿಡಿಯೋ ವೈರಲ್:‌ 5 ರೂ. ಹೆಚ್ಚು ಡಿಮ್ಯಾಂಡ್‌ ಮಾಡಿದ ಕಾರ್‌ ಚಾಲಕ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News