46ನೇ ವಯಸ್ಸಿನಲ್ಲಿ ಖ್ಯಾತ ಕಿರುತೆರೆ ನಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಕಾಮಿಡಿ ನಟ!

Redin Kingsley Marriage: ತಮಿಳು ಚಿತ್ರರಂಗದಲ್ಲಿ ನಟ ರೆಡಿನ್ ಕಿಂಗ್ಸ್ಲಿ ಸಖತ್ ಮಿಂಚುತ್ತಿದ್ದಾರೆ. ಅಂದಹಾಗೆ ರೆಡಿನ್ ಜನಪ್ರಿಯ ಧಾರಾವಾಹಿ ನಟಿ ಸಂಗೀತಾ ಅವರನ್ನು ವಿವಾಹವಾಗಿದ್ದಾರೆ. ಸನ್ ಟಿವಿಯ ಜನಪ್ರಿಯ ಧಾರಾವಾಹಿ ನಟಿ ಸಂಗೀತಾ ಅಭಿನಯಿಸುತ್ತಿದ್ದಾರೆ

Written by - Bhavishya Shetty | Last Updated : Dec 10, 2023, 09:33 PM IST
    • ರೆಡಿನ್ ಕಿಂಗ್ಸ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ
    • ಜನಪ್ರಿಯ ಧಾರಾವಾಹಿ ನಟಿ ಸಂಗೀತಾ ಜೊತೆ ಮದುವೆ
    • ತಮಿಳು ಚಿತ್ರರಂಗದಲ್ಲಿ ನಟ ರೆಡಿನ್ ಕಿಂಗ್ಸ್ಲಿ ಸಖತ್ ಮಿಂಚುತ್ತಿದ್ದಾರೆ
46ನೇ ವಯಸ್ಸಿನಲ್ಲಿ ಖ್ಯಾತ ಕಿರುತೆರೆ ನಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಕಾಮಿಡಿ ನಟ!
Redin Kingsley Marriage

Redin Kingsley Marriage: ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರ ಡಾಕ್ಟರ್ ಮತ್ತು ಜೈಲರ್ ಚಿತ್ರಗಳಲ್ಲಿ ಹಾಸ್ಯ ನಟನಾಗಿ ನಟಿಸುವ ಮೂಲಕ ಪ್ರಖ್ಯಾತಿ ಪಡೆದಿದ್ದ ರೆಡಿನ್ ಕಿಂಗ್ಸ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Add Zee News as a Preferred Source

ಇದನ್ನೂ ಓದಿ: ಮುಂದಿನ 10 ವರ್ಷ ಕ್ರಿಕೆಟ್ ಜಗತ್ತನ್ನೇ ಆಳುತ್ತಾನೆ ಪಾಕಿಸ್ತಾನದ ಈ ಆಟಗಾರ: ಗೌತಮ್ ಗಂಭೀರ್ ಭವಿಷ್ಯ

ತಮಿಳು ಚಿತ್ರರಂಗದಲ್ಲಿ ನಟ ರೆಡಿನ್ ಕಿಂಗ್ಸ್ಲಿ ಸಖತ್ ಮಿಂಚುತ್ತಿದ್ದಾರೆ. ಅಂದಹಾಗೆ ರೆಡಿನ್ ಜನಪ್ರಿಯ ಧಾರಾವಾಹಿ ನಟಿ ಸಂಗೀತಾ ಅವರನ್ನು ವಿವಾಹವಾಗಿದ್ದಾರೆ. ಸನ್ ಟಿವಿಯ ಜನಪ್ರಿಯ ಧಾರಾವಾಹಿ ನಟಿ ಸಂಗೀತಾ ಅಭಿನಯಿಸುತ್ತಿದ್ದಾರೆ.

ರೆಡಿನ್ ಕಿಂಗ್ಸ್ಲಿ ಅವರ ಸ್ನೇಹಿತ, ಖ್ಯಾತ ನಟ ಹಾಗೂ ನೃತ್ಯಗಾರ ಸತೀಶ್ ಅಭಿನಂದನೆ ಸಲ್ಲಿಸಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮತ್ತು “ಇದು ಚಿತ್ರ ಸೆಟ್ ಅಲ್ಲ. ಇದು ನಿಜ" ಎಂದು ಅವರು ತಮ್ಮ ಪೋಸ್ಟ್‌’ನಲ್ಲಿ ಉಲ್ಲೇಖಿಸಿದ್ದಾರೆ.

ನಟ ಅಜಿತ್ ಅವರ 1998 ರ ‘ಆವಾ ವರುವಾಲಾ’ ಚಲನಚಿತ್ರದಲ್ಲಿ ಡ್ಯಾನ್ಸರ್ ಆಗಿ ಪಾದಾರ್ಪಣೆ ಮಾಡಿದ ರೆಡಿನ್ ಕಿಂಗ್ಸ್ಲಿ, ಆ ಬಳಿಕ ಚೆನ್ನೈ ಮತ್ತು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿ ಕೆಲಸ ಮಾಡಿದ್ದರು.

ಇದನ್ನೂ ಓದಿ: ಬೆತ್ತಲಾಗಿ ಕಾಡಿನಲ್ಲಿ ಸುತ್ತಾಡುತ್ತಾ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಖ್ಯಾತ ಬಾಲಿವುಡ್ ನಟ! ಫೋಟೋ

ಇದಾದ ನಂತರ ರೆಡಿನ್ ಕಿಂಗ್ಸ್ಲಿ ಎಲ್’ಕೆಜಿ, ಡಾಕ್ಟರ್, ಜೈಲರ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಅವರು ಇತ್ತೀಚೆಗೆ ನಯನತಾರಾ ಅಭಿನಯದ ಅನ್ನಪೂರಣಿ ಮತ್ತು ಸತೀಶ್ ಅವರ ಕಂಜ್ಯೂರಿಂಗ್ ಕಣ್ಣಪ್ಪನ್’ನಲ್ಲಿ ನಟಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News