ಇದೇನಿದು ಉರ್ಫಿ ಜಾವೇದ್ ಅವತಾರ! ಗೋಣಿಚೀಲದಲ್ಲಿ ಬಟ್ಟೆ ಮಾಡಿಕೊಂಡ ನಟಿ!

ಈ ಬಾರಿ ಉರ್ಫಿ ಜಾವೇದ್ ತಮ್ಮ ಹೊಸ ಉಡುಪನ್ನು ಗೋಣಿಚೀಲದಿಂದ ಸಿದ್ಧಪಡಿಸಿದ್ದಾರೆ. ನಟಿಯ ಈ ಲುಕ್ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉರ್ಫಿ ಶೇರ್‌ ಮಾಡಿರುವ ವೀಡಿಯೊದಲ್ಲಿ, ಮೊದಲು ಸುಂದರವಾದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

Written by - Bhavishya Shetty | Last Updated : Jun 4, 2022, 02:25 PM IST
  • ಮತ್ತೆ ಸುದ್ದಿಯಾದ ಉರ್ಫಿ ಜಾವೇದ್ ಬಟ್ಟೆ
  • ಗೋಣಿಚೀಲದಿಂದ ಬಟ್ಟೆ ತಯಾರಿಸಿದ ಉರ್ಫಿ
  • ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌
ಇದೇನಿದು ಉರ್ಫಿ ಜಾವೇದ್ ಅವತಾರ! ಗೋಣಿಚೀಲದಲ್ಲಿ ಬಟ್ಟೆ ಮಾಡಿಕೊಂಡ ನಟಿ!  title=
Urfi Javed

ಉರ್ಫಿ ಜಾವೇದ್ ತನ್ನ ಹೊಸ ಹೊಸ ಫ್ಯಾಶನ್ ಸೆನ್ಸ್‌ನಿಂದಲೇ ಪ್ರಚಲಿತದಲ್ಲಿರುತ್ತಾರೆ. ಇದೀಗ ಮತ್ತೊಮ್ಮೆ ಉರ್ಫಿ ಫ್ಯಾಷನ್ ಲೋಕದಲ್ಲಿ ದೊಡ್ಡ ಪ್ರಯೋಗವನ್ನೇ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದಾರೆ. ಪ್ರತಿದಿನ ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಉರ್ಫಿ ಜಾವೇದ್ ತನ್ನ ಬೋಲ್ಡ್‌ನೆಸ್‌ಗೆ ತುಂಬಾ ಫೇಮಸ್. ಇದೀಗ ಇವರು ಶೇರ್‌ ಮಾಡಿಕೊಂಡಿರುವ ಫೋಟೋಗಳು ಬೇಸಿಗೆಯಲ್ಲಿ ಬಿಸಿಲಿನ ತಾಪವನ್ನು ತಪ್ಪಿಸಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ ಏನೋ ಅನ್ನುವಂತೆ ಭಾಸವಾಗುತ್ತಿದೆ. 

ಇದನ್ನು ಓದಿ: Business Idea: ಇಂದೇ ಈ ಉದ್ಯಮ ಆರಂಭಿಸಿ ಸುಲಭವಾಗಿ 10 ಲಕ್ಷ ರೂ. ಸಂಪಾದಿಸಿ

ಈ ಬಾರಿ ಉರ್ಫಿ ಜಾವೇದ್ ತಮ್ಮ ಹೊಸ ಉಡುಪನ್ನು ಗೋಣಿಚೀಲದಿಂದ ಸಿದ್ಧಪಡಿಸಿದ್ದಾರೆ. ನಟಿಯ ಈ ಲುಕ್ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉರ್ಫಿ ಶೇರ್‌ ಮಾಡಿರುವ ವೀಡಿಯೊದಲ್ಲಿ, ಮೊದಲು ಸುಂದರವಾದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಬಳಿಕ ಯಾರೋ ಗೋಣಿಚೀಲವನ್ನು ಅವಳ ಕಡೆಗೆ ಎಸೆಯುತ್ತಾರೆ. ಉರ್ಫಿ ಈ ಚೀಲವನ್ನು ಹಿಡಿದು, ಬಳಿಕ ಉಡುಪನ್ನಾಗಿ ಸಿದ್ಧಪಡಿಸುತ್ತಾರೆ.

 
 
 
 

 
 
 
 
 
 
 
 
 
 
 

A post shared by Uorfi (@urf7i)

 

 

ಉರ್ಫಿಯ ಈ ಲುಕ್ ಕುರಿತು ಮಾತನಾಡೋದಾದ್ರೆ, ಗೋಣಿಯನ್ನು ಕತ್ತರಿಸುವ ಮೂಲಕ ಸ್ಲಿಟ್ ಮಿನಿ ಸ್ಕರ್ಟ್ ಮತ್ತು ಕ್ರಾಪ್ ಟಾಪ್ ಮಾಡಿದ್ದಾರೆ. ಇದರೊಂದಿಗೆ ಉರ್ಫಿ ಹೈ ಹೀಲ್ಸ್ ಮತ್ತು ಪೋನಿಯೊಂದಿಗೆ ತನ್ನ ಲುಕ್‌ನ್ನು ಮತ್ತಷ್ಟು ಹಾಟ್ ಆಗಿಸಿದ್ದಾರೆ. ಉರ್ಫಿಯ ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನು ಓದಿ: ಆಸಿಡ್‌ ದಾಳಿ ಪ್ರಕರಣ: ಸ್ಥಳ ಮಹಜರಿಗೆ ಆರೋಪಿಯನ್ನು ಕರೆದೊಯ್ದ ಪೊಲೀಸರು

ಉರ್ಫಿ ಫ್ಯಾಶನ್ ಸೆನ್ಸ್‌: 
ಉರ್ಫಿ ಜಾವೇದ್ ಅವರು ತಮ್ಮ ಫ್ಯಾಶನ್ ಸೆನ್ಸ್‌ನಿಂದಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿರುತ್ತಾರೆ. ನಟಿಯ ಚಿತ್ರ ಮತ್ತು ವೀಡಿಯೊಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಉರ್ಫಿ ತನ್ನ ಇತ್ತೀಚಿನ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡ ತಕ್ಷಣ, ಅದು ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News