Viral Video: KKR vs SRH IPL ಪಂದ್ಯದ ವೇಳೆ ಸಿಗರೇಟ್ ಸೇದುವಾಗ ಸಿಕ್ಕಿಬಿದ್ದ ನಟ ಶಾರುಖ್ ಖಾನ್.!

Viral Video: ವೈರಲ್ ಆಗಿರುವ ಶಾರುಖ್ ಖಾನ್ ಅವರ ವೀಡಿಯೊದಲ್ಲಿ, ಅವರು ಕೆಕೆಆರ್ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ, ಅವರು ನಿಂತಿರುವಂತೆ ಕಾಣುತ್ತಿದ್ದು ಈ ವೇಳೆ ಅವರು ಸಿಗರೇಟ್ ಸೇದುತ್ತಿದ್ದಾರೆ.

Written by - Manjunath N | Last Updated : Mar 24, 2024, 06:53 PM IST
  • ವೈರಲ್ ಆಗಿರುವ ಶಾರುಖ್ ಖಾನ್ ಅವರ ವೀಡಿಯೊದಲ್ಲಿ, ಅವರು ಕೆಕೆಆರ್ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ.
  • ಈ ಸಮಯದಲ್ಲಿ, ಅವರು ನಿಂತಿರುವಂತೆ ಕಾಣುತ್ತಿದ್ದು ಈ ವೇಳೆ ಅವರು ಸಿಗರೇಟ್ ಸೇದುತ್ತಿದ್ದಾರೆ.
  • ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,
 Viral Video: KKR vs SRH IPL ಪಂದ್ಯದ ವೇಳೆ ಸಿಗರೇಟ್ ಸೇದುವಾಗ ಸಿಕ್ಕಿಬಿದ್ದ ನಟ ಶಾರುಖ್ ಖಾನ್.! title=

ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಈಗ ಐಪಿಎಲ್ 2024 ರ ಯಾನವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಕೆಕೆಆರ್ ತನ್ನ ಮೊದಲ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿದೆ.

ಈ ಪಂದ್ಯ ವೀಕ್ಷಿಸಲು ಶಾರುಖ್ ಖಾನ್ ಕೂಡ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಉಪಸ್ಥಿತರಿದ್ದರು ಎನ್ನಲಾಗಿದೆ.ಕಾರ್ಪೊರೇಟ್ ಬಾಕ್ಸ್‌ನಲ್ಲಿ ಕುಳಿತು ಪಂದ್ಯವನ್ನು ಆನಂದಿಸುತ್ತಿದ್ದ ಸಂದರ್ಭದಲ್ಲಿ. ಶಾರುಖ್ ಸಿಗರೇಟ್ ಸೇದುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ವಿಡಿಯೋ KKR vs SRH ಪಂದ್ಯದ ಸಮಯದ್ದು ಎಂದು ಹೇಳಲಾಗುತ್ತಿದೆ.ಸೋಷಿಯಲ್ ಮೀಡಿಯಾದಲ್ಲಿ ಜನರು ಅವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ. ಯುವಕರಿಗೆ ಮಾದರಿಯಾಗಿರುವ ವ್ಯಕ್ತಿ ಸಾರ್ವಜನಿಕವಾಗಿ ಇಂತಹ ಕೃತ್ಯ ಎಸಗಿದರೆ ಹೇಗೆ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ವೈರಲ್ ಆಗಿರುವ ಶಾರುಖ್ ಖಾನ್ ಅವರ ವೀಡಿಯೊದಲ್ಲಿ, ಅವರು ಕೆಕೆಆರ್ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ, ಅವರು ನಿಂತಿರುವಂತೆ ಕಾಣುತ್ತಿದ್ದು ಈ ವೇಳೆ ಅವರು ಸಿಗರೇಟ್ ಸೇದುತ್ತಿದ್ದಾರೆ.ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೈದಾನದಲ್ಲಿ ಇದಕ್ಕೆ ಅವಕಾಶವಿದೆಯೇ ಎಂದು ಜನರು ಬಿಸಿಸಿಐಗೆ ಪ್ರಶ್ನೆಗಳನ್ನು ಕೇಳುತ್ತಿರುವುದಲ್ಲದೆ. ಇದರಿಂದ ಯುವಕರ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಕಿಡಿ ಕಾರಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News