ಲಿಬಿಯಾ ಹಡಗು ದುರಂತ: 90 ಕ್ಕೂ ಹೆಚ್ಚು ವಲಸೆಗಾರರ ಧಾರುಣ ಸಾವು

    

Last Updated : Feb 2, 2018, 08:05 PM IST
ಲಿಬಿಯಾ ಹಡಗು ದುರಂತ: 90 ಕ್ಕೂ ಹೆಚ್ಚು ವಲಸೆಗಾರರ ಧಾರುಣ ಸಾವು title=

ನವದೆಹಲಿ: ಲಿಬಿಯಾದ ಕರಾವಳಿ ತೀರದದಲ್ಲಿ ಹಡಗು ಮುಳಗಿ 90ಕ್ಕೂ ಅಧಿಕ ವಲಸೆಗಾರರು ಈ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು  ಎಂದು ವಿಶ್ವಸಂಸ್ಥೆಯ ವಲಸೆ ಸಂಸ್ಥೆ ವರದಿ ಮಾಡಿದೆ.

ಅಂತರಾಷ್ಟ್ರೀಯ ವಲಸೆಗಾರರ ಸಂಸ್ಥೆಯ ಪ್ರಕಾರ (ಐಒಎಮ್)  ಹೆಚ್ಚಿನ ವಲಸಿಗರು ಪಾಕಿಸ್ತಾನಿ ಪ್ರಜೆಗಳಾಗಿದ್ದಾರೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ. ಈಗಾಗಲೇ ಸುಮಾರು 10 ಶವಗಳನ್ನು ಜುವಾರಾ ಪಟ್ಟಣದ ಲಿಬಿಯಾ ತೀರದ ಬಳಿ ದೊರೆತಿವೆ. ಅದರಲ್ಲಿ ಇಬ್ಬರು ಲಿಬಿಯನ್ನರು, ಉಳಿದ ಎಂಟು ಜನರು ಪಾಕಿಸ್ತಾನೀಯರು ಎಂದು ಐಒಎಮ್ ತಿಳಿಸಿದೆ.

ಇತ್ತೀಚಿನ ವರ್ಷಗಳಲ್ಲಿ, ಸಬ್-ಸಹರಾ ಆಫ್ರಿಕಾದ ಸಾವಿರಾರು ವಲಸೆಗಾರರನ್ನು ಮೆಡಿಟರೇನಿಯನ್ ಸಮುದ್ರದಿಂದ ರಕ್ಷಿಸಲಾಗಿದೆ. ಇದರಲ್ಲಿ  ಬಹುತೇಕ ವಲಸೆಗಾರರು ತಮ್ಮ ದೇಶಗಳಲ್ಲಿ ನಡೆಯುತ್ತಿರುವ ಯುದ್ದದಂತಹ ಘರ್ಷಣೆಗಳಿಂದ ತಪ್ಪಿಸಿಕೊಂಡು, ಜೀವನೋಪಾಯಕ್ಕಾಗಿ ಯುರೋಪ ದೇಶಗಳಿಗೆ ತೆರಳಲು ಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

With ANI inputs 

Trending News