Corona Vaccine: ವಿದೇಶಕ್ಕೆ ಹೋಗಬಯಸುವ ಭಾರತೀಯರಿಗೆ ಶಾಕ್! WHOನಿಂದ ಕೊವ್ಯಾಕ್ಸಿನ್ ಮಾನ್ಯತೆಗೆ ವಿಳಂಬ

Corona Vaccine - ಭಾರತದಲ್ಲಿ ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಜನವರಿ ತಿಂಗಳಿನಲ್ಲಿ ಕೋವಿಶಿಲ್ದ್ (Covishield) ಜೊತೆಗೆ ಕೊವ್ಯಾಕ್ಸಿನ್ (Covaxin) ಅನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ. ಆದರೆ ಇಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತದಲ್ಲಿ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ಕೊವ್ಯಾಕ್ಸಿನ್  ತುರ್ತು ಬಳಕೆಯ ಅಧಿಕಾರವನ್ನು (EUA) ಮತ್ತಷ್ಟು ವಿಳಂಬ ಮಾಡಿದೆ. 

Written by - Nitin Tabib | Last Updated : Sep 28, 2021, 12:25 PM IST
  • ವಿದೇಶಕ್ಕೆ ಹೋಗಬಯಸುವ ಭಾರತೀಯರಿಗೆ ಶಾಕ್ ನೀಡಿದ WHO
  • ಕೊವ್ಯಾಕ್ಸಿನ್ ಅನುಮತಿ ನೀಡಲು WHO ವಿಳಂಬ ಧೋರಣೆ
  • ಅನುಮೋದನೆ ನೀಡಲು ಹೆಚ್ಚಿನ ತಾಂತ್ರಿಕ ಪ್ರಶ್ನೆಗಳನ್ನು ಕಳುಹಿಸಿದ WHO
Corona Vaccine: ವಿದೇಶಕ್ಕೆ ಹೋಗಬಯಸುವ ಭಾರತೀಯರಿಗೆ ಶಾಕ್! WHOನಿಂದ ಕೊವ್ಯಾಕ್ಸಿನ್ ಮಾನ್ಯತೆಗೆ ವಿಳಂಬ title=
Corona Vaccine (File Photo)

Corona Vaccine - ಭಾರತದಲ್ಲಿ ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಜನವರಿ ತಿಂಗಳಿನಲ್ಲಿ ಕೋವಿಶಿಲ್ದ್ (Covishield) ಜೊತೆಗೆ ಕೊವ್ಯಾಕ್ಸಿನ್ (Covaxin) ಅನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ. ಆದರೆ ಇಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತದಲ್ಲಿ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ಕೊವ್ಯಾಕ್ಸಿನ್  ತುರ್ತು ಬಳಕೆಯ ಅಧಿಕಾರವನ್ನು (EUA) ಮತ್ತಷ್ಟು ವಿಳಂಬ ಮಾಡಿದೆ. ಇದಕ್ಕಾಗಿ,  WHO ಭಾರತ್ ಬಯೋಟೆಕ್‌ಗೆ (Bharat Biotech)ಹೆಚ್ಚಿನ ತಾಂತ್ರಿಕ ಪ್ರಶ್ನೆಗಳನ್ನು ಕಳುಹಿಸಿದೆ. ಈ ವಿಳಂಬವು ಭಾರತೀಯರ, ವಿಶೇಷವಾಗಿ ವಿದ್ಯಾರ್ಥಿಗಳ ಅಂತರರಾಷ್ಟ್ರೀಯ ಪ್ರಯಾಣದ ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

EUA ಇಲ್ಲದೆ, ಕೋವಾಕ್ಸಿನ್ ಅನ್ನು ವಿಶ್ವಾದ್ಯಂತ ಹೆಚ್ಚಿನ ದೇಶಗಳು ಅನುಮೋದಿಸಿದ ಲಸಿಕೆ ಎಂದು ಪರಿಗಣಿಸುವುದಿಲ್ಲ.  ಭಾರತ್ ಬಯೋಟೆಕ್ ಎಲ್ಲಾ ಅಗತ್ಯ ದಾಖಲೆಗಳನ್ನು ಕಳುಹಿಸಿದೆ ಎಂದು ಹೇಳಿಕೊಂಡಿದೆ, ಆದರೂ WHO ಈ ಪ್ರಶ್ನೆಗಳನ್ನು ಕಳುಹಿಸಿದೆ. ಡಬ್ಲ್ಯುಎಚ್‌ಒ ಇದನ್ನು ಶೀಘ್ರದಲ್ಲೇ ಅನುಮೋದಿಸುತ್ತದೆ ಎಂಬ ಸುದ್ದಿಯಿತ್ತು ಆದರೆ ಇದೀಗ ಮತ್ತಷ್ಟು ವಿಳಂಬವಾಗುವ ಲಕ್ಷಣಗಳು ಗೋಚರಿಸತೊಡಗಿವೆ.

ANI ಸುದ್ದಿ ಸಂಸ್ಥೆ ಪ್ರಕಟಿಸಿರುವ ವರದಿಯೊಂದರ ಪ್ರಕಾರ ಈ ಕುರಿತು ಕಳೆದ ಶುಕ್ರವಾರ ಹೇಳಿಕೆ ನೀಡಿದ್ದ ಕೇಂದ್ರ ಆರೋಗ್ಯ ಸಚಿವಾಲಯದ ರಾಜ್ಯ ಸಚಿವರಾದ ಡಾ. ಭಾರತಿ ಪ್ರವೀಣ್ ಪವಾರ್, "ಅನುಮೋದನೆಗಾಗಿ ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಕೊವ್ಯಾಕ್ಸಿನ್ WHO ನಿಂದ ತುರ್ತುಬಳಕೆಯ ಅಧಿಕಾರ ಪಡೆಯುವ ನಿರೀಕ್ಷೆ ಇದೆ" ಎಂದಿದ್ದರು.

ಇದನ್ನೂ ಓದಿ-ಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ: 1 ಪ್ಯೂನ್ ಹುದ್ದೆಗೆ 15 ಲಕ್ಷಕ್ಕೂ ಹೆಚ್ಚು ಅರ್ಜಿ..!

ಈ ಮೊದಲು, ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪಿನ ಅಧ್ಯಕ್ಷ ಡಾ.ವಿ.ಕೆ. ಪಾಲ್  ಕೂಡ ಕೊವಾಕ್ಸಿನ್‌ಗೆ ಡಬ್ಲ್ಯುಎಚ್‌ಒ ಅನುಮೋದನೆ ಈ ತಿಂಗಳ ಅಂತ್ಯದೊಳಗೆ ಬರುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಭಾರತ್ ಬಯೋಟೆಕ್ ಪ್ರಕಾರ, ಕೋವಾಕ್ಸಿನ್‌ನ ಹಂತ III ಕ್ಲಿನಿಕಲ್ ಪ್ರಯೋಗದಲ್ಲಿ ಶೇ. 77.8 ರಷ್ಟು ಪ್ರಭಾವಿ ಸಾಬೀತಾಗಿದೆ ಎಂದಿದೆ.

ಇದನ್ನೂ ಓದಿ-LAC ಬಳಿ 50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದ ಚೀನಾ

ಕೋವ್ಯಾಕ್ಸಿನ್, ಕೋವಿಶೀಲ್ಡ್ ಅನ್ನು ಕೋವಿಡ್ -19 (Corona Vaccination) ವಿರುದ್ಧ ಈ ವರ್ಷದ  ಜನವರಿಯಲ್ಲಿ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದಲ್ಲಿ ಶಾಮೀಳುಗೊಳಿಸಲಾಗಿದೆ  ರಷ್ಯಾ ನಿರ್ಮಿತ ಸ್ಪುಟ್ನಿಕ್ ನಂತಹ ಇತರ ಲಸಿಕೆಗಳಿವೆ ದೇಶದಲ್ಲಿ ನಂತರ ಅನುಮೋದನೆ ನೀಡಲಾಗಿದೆ.

ಇದನ್ನೂ ಓದಿ-Watch: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮೇಲೆ ಮೊಟ್ಟೆ ಎಸೆತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News