ನವದೆಹಲಿ: ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ಸರ್ಕಾರವು ಜನರಿಗೆ ಉದ್ಯೋಗ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದು ಸಾಬೀತಾಗುತ್ತಿದೆ. ಪ್ರಸ್ತುತ ಪಾಕ್ ನಲ್ಲಿ ನಿರುದ್ಯೋಗ ಸಮಸ್ಯೆ(Pakistan Unemployment) ಅತ್ಯಧಿಕವಾಗಿದೆ. 15 ಲಕ್ಷಕ್ಕೂ ಹೆಚ್ಚು ಜನರು ಅಲ್ಲಿನ ಹೈಕೋರ್ಟ್ನಲ್ಲಿ ಕೇವಲ ಒಂದೇ ಒಂದು ಪ್ಯೂನ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆಂದು ವರದಿಯಾಗಿದೆ.
ಪಾಕಿಸ್ತಾನ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಎಕನಾಮಿಕ್ಸ್ (ಪಿಐಡಿಇ) ದ ಮಾಹಿತಿಯ ಪ್ರಕಾರ, ಪಾಕಿಸ್ತಾನದಲ್ಲಿನ ನಿರುದ್ಯೋಗ ದರ(Unemployment Rate)ವು ಶೇ.16 ರಷ್ಟು ತಲುಪಿದೆ. ಆದರೆ ಇಮ್ರಾನ್ ಖಾನ್(Imran Khan) ನೇತೃತ್ವದ ಪಾಕಿಸ್ತಾನ ಸರ್ಕಾರ ಮಾತ್ರ ದೇಶದಲ್ಲಿ ಶೇ.6.5ರಷ್ಟು ನಿರುದ್ಯೋಗ ಸಮಸ್ಯೆ ಇದೆ ಎಂದು ಹೇಳಿಕೊಂಡು ಬರುತ್ತಿದೆ. ಪಿಐಡಿಇ ವರದಿಯು ಇಮ್ರಾನ್ ಖಾನ್ ಸರ್ಕಾರದ ಬಣ್ಣ ಬಯಲು ಮಾಡಿದೆ.
ಇದನ್ನೂ ಓದಿ: ಇಲ್ಲಿ ಟ್ರಕ್ ಚಾಲಕರೂ ಪಡೆಯುತ್ತಾರೆ 72 ಲಕ್ಷಕ್ಕಿಂತ ಹೆಚ್ಚು ಸಂಬಳ, 2 ದಿನ ರಜೆ ಮತ್ತು ಬೋನಸ್
ಪಾಕಿಸ್ತಾನದಲ್ಲಿ ಶೇ.24ರಷ್ಟು ವಿದ್ಯಾವಂತರು ನಿರುದ್ಯೋಗಿಗಳು
ವರದಿಯ ಪ್ರಕಾರ ಪಿಐಡಿಇ ನಿರುದ್ಯೋಗ ದರವನ್ನು ಹೆಚ್ಚಿಸುವ ಸಮಸ್ಯೆಯನ್ನು ಬಹಿರಂಗಪಡಿಸಿದೆ. ಪಿಐಡಿಇ ನೀಡಿರುವ ಮಾಹಿತಿ ಪ್ರಕಾರ ಪ್ರಸ್ತುತ ಪಾಕಿಸ್ತಾನದಲ್ಲಿ ಕನಿಷ್ಠ ಶೇ.24ರಷ್ಟು ವಿದ್ಯಾವಂತರು ನಿರುದ್ಯೋಗಿಗಳಾಗಿದ್ದಾರಂತೆ(Higher Unemployment Rate). ಯೋಜನೆ ಮತ್ತು ಅಭಿವೃದ್ಧಿಯ ಸೆನೆಟ್ ಸ್ಥಾಯಿ ಸಮಿತಿಗೆ ಪಿಐಡಿಇ ನೀಡಿದ ಮಾಹಿತಿಯಲ್ಲಿ, ದೇಶಾದ್ಯಂತ ಶೇ.40 ರಷ್ಟು ವಿದ್ಯಾವಂತ ಮಹಿಳೆಯರು (ಪದವಿಪೂರ್ವ ಅಥವಾ ಪದವೀಧರರು) ಸಹ ನಿರುದ್ಯೋಗಿಗಳಾಗಿದ್ದಾರೆ ಎಂದು ತಿಳಿಸಿದೆ.
1 ಪ್ಯೂನ್ ಹುದ್ದೆಗೆ 15 ಲಕ್ಷ ಅರ್ಜಿಗಳು
ವರದಿಗಳ ಪ್ರಕಾರ ಇತ್ತೀಚೆಗೆ 1 ಜಾಹೀರಾತನ್ನು ಪ್ರಕಟಿಸಲಾಗಿದೆ. ಇದರಲ್ಲಿ ಕನಿಷ್ಠ 15 ಲಕ್ಷ ಜನರು ಹೈಕೋರ್ಟ್ನಲ್ಲಿ ಪ್ಯೂನ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದವರಲ್ಲಿ ಎಂಫಿಲ್ ಪದವಿ ಪಡೆದವರು ಕೂಡ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಿಐಡಿಇ ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಯಾವುದೇ ಸಂಶೋಧನೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಅಂತಹ ಎಲ್ಲಾ ಅಧ್ಯಯನಗಳನ್ನು ವಿದೇಶದಿಂದ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ಅನೇಕ ಸಂಶೋಧನಾ ಸಂಸ್ಥೆಗಳು ನಡೆಯುತ್ತಿವೆ, ಆದರೆ ಸಂಶೋಧನಾ ಉದ್ದೇಶಗಳು ಮಾತ್ರ ಈಡೇರುತ್ತಿಲ್ಲ ಎಂದು ಸಮಿತಿ ಮಾಹಿತಿ ನೀಡಿದೆ.
ಇದನ್ನೂ ಓದಿ: Viral News: ಆನ್ಲೈನ್ ತರಗತಿ ತಪ್ಪಿಸಿಕೊಳ್ಳಲು ಈ ಹುಡುಗಿ ಎಂತಹ ಕೆಲಸ ಮಾಡಿದ್ದಾಳೆ ನೋಡಿ..!
ಈ ಮಧ್ಯೆ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (ಪಿಬಿಎಸ್) ಪ್ರಕಟಿಸಿದ ಲೇಬರ್ ಫೋರ್ಸ್ ಸಮೀಕ್ಷೆ (ಎಲ್ಎಫ್ಎಸ್) ಪ್ರಕಾರ, ಪಾಕಿಸ್ತಾನದ ನಿರುದ್ಯೋಗವು 2017-18ರಲ್ಲಿ ಇದ್ದ ಶೇ.5.8 ರಿಂದ 2018-19ರಲ್ಲಿ ಶೇ.6.9 ಕ್ಕೆ ಏರಿಕೆಯಾಗಿದೆ. ಸರ್ಕಾರಕ್ಕೆ ಉದ್ಯೋಗ ನೀಡುವ ಬಗ್ಗೆ ಕಾಳಜಿ ಇಲ್ಲ. ಆದಾಗ್ಯೂ, ಪಾಕಿಸ್ತಾನ(Pakistan)ದ ಯುವಕರನ್ನು ಭಯೋತ್ಪಾದಕರ ತಂಡಕ್ಕೆ ಸೇರಿಸಲು ಇಮ್ರಾನ್ ಸರ್ಕಾರ ಹೆಚ್ಚು ಆಸಕ್ತಿ ಹೊಂದಿದೆ ಅಂತಾ ಆರೋಪಿಸಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.