‘ನಾನು ಮೋದಿಯ ದೊಡ್ಡ ಅಭಿಮಾನಿ’: ಪ್ರಧಾನಿ ಭೇಟಿ ಬಳಿಕ ಎಲಾನ್ ಮಸ್ಕ್ ಹೇಳಿಕೆ

Elon Musk Met Narendra Modi: ಪ್ರಧಾನಿ ಮೋದಿ ಭೇಟಿಯಾದ ಬಳಿಕ ಮಾತನಾಡಿದ ಎಲಾನ್ ಮಸ್ಕ್, ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಯೋಜನೆ ಇದೆ. ಆದಷ್ಟು ಬೇಗ ಟೆಸ್ಲಾ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರ ಬೆಂಬಲಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ ಅಂತಾ ಇದೇ ವೇಳೆ ಅವರು ಹೇಳಿದ್ದಾರೆ.

Written by - Puttaraj K Alur | Last Updated : Jun 21, 2023, 03:18 PM IST
  • ಪ್ರಧಾನಿ ಮೋದಿ ಭೇಟಿಯಾಗಿ ಖುಷಿ ವ್ಯಕ್ತಪಡಿಸಿದ ಟೆಸ್ಲಾ ಸಿಇಒ ಎಲಾನ್ ಮಸ್ಕ್
  • ನಾನೂ ಸಹ ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ ಎಂದ ಟ್ವಿಟರ್ ಮಾಲೀಕ
  • ಶೀಘ್ರವೇ ಭಾರತದಲ್ಲಿ ಟೆಸ್ಲಾ ಕಾರ್ಯಾಚರಣೆ ಆರಂಭಿಸಲಿದೆ ಎಂದ ಮಸ್ಕ್
‘ನಾನು ಮೋದಿಯ ದೊಡ್ಡ ಅಭಿಮಾನಿ’: ಪ್ರಧಾನಿ ಭೇಟಿ ಬಳಿಕ ಎಲಾನ್ ಮಸ್ಕ್ ಹೇಳಿಕೆ  title=
ಪ್ರಧಾನಿ ಮೋದಿ ಭೇಟಿಯಾದ ಮಸ್ಕ್!

ನ್ಯೂಯಾರ್ಕ್: ಟೆಸ್ಲಾ ಸಿಇಒ ಮತ್ತು ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಮಂಗಳವಾರ ನ್ಯೂಯಾರ್ಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಪ್ರಧಾನಿ ಮೋದಿಯವರು 3 ದಿನಗಳ ಪ್ರವಾಸದ ನಿಮಿತ್ತ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಹಲವಾರು ದಿಗ್ಗಜ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಮೋದಿ ಭೇಟಿ ಬಳಿಕ ಎಲಾನ್ ಮಸ್ಕ್ ಹರ್ಷ ವ್ಯಕ್ತಪಡಿಸಿದ್ದಾರೆ. ನಾನೂ ಸಹ ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.   

ಇದನ್ನೂಓದಿ: United Nations ನಲ್ಲಿ ಭಾರತ-ಅಮೆರಿಕಾದ ಶತ್ರು ಮತ್ತು ಲಷ್ಕರ್ ಉಗ್ರನನ್ನು ರಕ್ಷಿಸಲು ವೀಟೋ ಬಳಸಿದ ಚೀನಾ

ಪ್ರಧಾನಿ ಮೋದಿ ಭೇಟಿ ಬಳಿಕ ಮಸ್ಕ್ ಅವರ ಪ್ರಮುಖ ಹೇಳಿಕೆಗಳು

  1. ನಾನು ಭಾರತದ ಭವಿಷ್ಯದ ಬಗ್ಗೆ ನಂಬಲಾಗದಷ್ಟು ಉತ್ಸುಕನಾಗಿದ್ದೇನೆ. ಪ್ರಪಂಚದ ಯಾವುದೇ ದೊಡ್ಡ ದೇಶಕ್ಕಿಂತ ಭಾರತವು ಹೆಚ್ಚಿನ ಭರವಸೆಯನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ.
  2. ಪ್ರಧಾನಿ ಮೋದಿ ನಿಜವಾಗಿಯೂ ಭಾರತದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಏಕೆಂದರೆ ಅವರು ಭಾರತದಲ್ಲಿ ಗಮನಾರ್ಹ ಹೂಡಿಕೆ ಮಾಡಲು ನಮ್ಮನ್ನು ಒತ್ತಾಯಿಸುತ್ತಿದ್ದಾರೆ, ಇದು ನಾವು ಕೆಲಸ ಮಾಡಲು ಒಲವು ತೋರುವ ಸಂಗತಿಯಾಗಿದೆ. ಇದಕ್ಕಾಗಿ ನಾವು ಸರಿಯಾದ ಸಮಯವನ್ನು ಲೆಕ್ಕಾಚಾರ ಮಾಡಬೇಕಾಗಿದೆ.
  3. ಇದು ಪ್ರಧಾನಿ ಮೋದಿಯವರೊಂದಿಗಿನ ಅದ್ಭುತ ಸಭೆಯಾಗಿದ್ದು, ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ. ಅವರು ಕೆಲವು ವರ್ಷಗಳ ಹಿಂದೆ ನಮ್ಮ ಕಾರ್ಖಾನೆಗೆ ಭೇಟಿ ನೀಡಿದ್ದರು. ಆದ್ದರಿಂದ ನಾವು ಸ್ವಲ್ಪ ಸಮಯದವರೆಗೆ ಪರಸ್ಪರ ತಿಳಿದುಕೊಂಡಿದ್ದೇವೆ.
  4. ಪ್ರಧಾನಿ ಮೋದಿ ನಿಜವಾಗಿಯೂ ಭಾರತದ ಅಭಿವೃದ್ಧಿಗಾಗಿ ಸರಿಯಾದ ಕೆಲಸ ಮಾಡಲು ಬಯಸುತ್ತಾರೆ. ಅವರು ಮುಕ್ತವಾಗಿರಲು ಬಯಸುತ್ತಾರೆ, ಅವರು ಕಂಪನಿಗಳಿಗೆ ಬೆಂಬಲವಾಗಿರಲು ಬಯಸುತ್ತಾರೆ. ನಿಸ್ಸಂಶಯವಾಗಿ ಇದು ಭಾರತದ ಅಭಿವೃದ್ಧಿಗೆ ಅನುಕೂಲವಾಗಲಿದೆ
  5. ನಾನೂ ಸಹ ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ.
  6. ಸೌರಶಕ್ತಿ ಹೂಡಿಕೆಗೆ ಭಾರತ ಉತ್ತಮವಾಗಿದೆ. ನಾವು ಸ್ಟಾರ್‌ಲಿಂಕ್ ಇಂಟರ್ನೆಟ್ ಅನ್ನು ಭಾರತಕ್ಕೆ ತರಲು ಸಹ ಆಶಿಸುತ್ತಿದ್ದೇವೆ.
  7. ನಾನು ತಾತ್ಕಾಲಿಕವಾಗಿ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದೇನೆ.
  8.  ಶೀಘ್ರವೇ ಭಾರತದಲ್ಲಿ ಟೆಸ್ಲಾ ಕಾರ್ಯಾಚರಣೆ ಆರಂಭಿಸಲಿದೆ. ಸಾಧ್ಯವಾದಷ್ಟು ಬೇಗ ಈ ಕೆಲಸ ಆಗಲಿದೆ ಎಂದು ನನಗೆ ವಿಶ್ವಾಸವಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

ಇದನ್ನೂಓದಿ: ʼವಿಶ್ವ ಸಂಗೀತ ದಿನʼವನ್ನು ಏಕೆ ಆಚರಣೆ ಮಾಡ್ತಾರೆ ಗೊತ್ತೆ..! ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News