Trump faces arrest: ಬ್ಲೂ ಫಿಲಂಗೆ ಹಣ ಪಾವತಿ: ಡೊನಾಲ್ಡ್ ಟ್ರಂಪ್ ಗೆ  ಬಂಧನದ ಭೀತಿ 

THE CASE AGAINST TRUMP: ಡೊನಾಲ್ಡ್ ಟ್ರಂಪ್ ಬ್ಲೂ ಫೀಲಂಗೆ ಹಣ ಪಾವತಿ ಮಾಡಿದ್ದಾರೆಂಬ ಆರೋಪದಲ್ಲಿ ಯುಎಸ್ ಮಾಜಿ ಅಧ್ಯಕ್ಷನಿಗೆ  ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ  ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಅವರನ್ನು ಮಾರ್ಚ್ 30 ರಂದು ಮ್ಯಾನ್‌ಹ್ಯಾಟನ್ ಗ್ರ್ಯಾಂಡ್ ಜ್ಯೂರಿ ದೋಷಾರೋಪಣೆ ಮಾಡಿತು.

Written by - Zee Kannada News Desk | Last Updated : Apr 4, 2023, 06:24 PM IST
  • ಡೊನಾಲ್ಡ್ ಟ್ರಂಪ್ ಬ್ಲೂ ಫೀಲಂಗೆ ಹಣ ಪಾವತಿ ಮಾಡಿದ್ದಾರೆಂಬ ಆರೋಪ
  • ಪ್ರಕರಣವು 2016 ರ ಅಕ್ಟೋಬರ್‌ನಲ್ಲಿ ಪ್ರಕರಣ ದಾಖಲು
  • ಟ್ರಂಪ್ ಅವರ ವಿಚಾರಣೆಯನ್ನು ಪ್ರಸಾರ ಮಾಡಲು ಮಾಧ್ಯಮಗಳಿಗೆ ಅನುಮತಿ ಇಲ್ಲ
Trump faces arrest: ಬ್ಲೂ ಫಿಲಂಗೆ ಹಣ ಪಾವತಿ: ಡೊನಾಲ್ಡ್ ಟ್ರಂಪ್ ಗೆ  ಬಂಧನದ ಭೀತಿ  title=

ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್ ಬ್ಲೂ ಫೀಲಂಗೆ ಹಣ ಪಾವತಿ ಮಾಡಿದ್ದಾರೆಂಬ ಆರೋಪದಲ್ಲಿ ಯುಎಸ್ ಮಾಜಿ ಅಧ್ಯಕ್ಷನಿಗೆ ಭೀತಿ ಎದುರಾಗಿದೆ. ಅಶ್ಲೀಲ ತಾರೆಯೊಬ್ಬಳೊಂದಿಗೆ ಟ್ರಂಪ್ ಲೈಂಗಿಕ ಸಂಪರ್ಕ ಹೊಂದಿದ್ದರು ಎಂಬ ಆರೋಪ ಕೇಳಿ ಬರುತ್ತಿದೆ. ಲೈಂಗಿಕ ಸಂಬಂಧ ಹೊಂದಿರುವ ಆರೋಪಕ್ಕೆ ಬ್ರೇಕ್‌ ಹಾಕಲು ಟ್ರಂಪ್ ನ್ಯಾಯಾಲಯದ ಮುಂದೆ ಹಾಜರಾಗಲು ಸಿದ್ಧರಾಗಿದ್ದಾರೆ. 

2016ರ ಅಮೆರಿಕ ಚುನಾವಣೆಗೂ ಮುನ್ನ ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರಿಗೆ ಗುಟ್ಟಾಗಿ ಹಣ ನೀಡಿದ್ದಾರೆಂಬ ಆರೋಪ ಗೊರ ಬಿದ್ದಿದೆ. ತಮ್ಮ ಹಗರಣವೊಂದರಿಂದ ಬಚಾವಾಗಲು ಟ್ರಂಪ್ ಅವರು ಸ್ಟಾರ್ಮಿ ಅವರಿಗೆ ಗೋಪ್ಯವಾಗಿ ದುಡ್ಡು ಕೊಟ್ಟಿದ್ದರು ಎಂದು ವಂದಂತಿಗಳು ಹೇಳುತ್ತಿವೆ. ಹಣ ಪಾವತಿಸಿದ  ವಿಚಾರಣೆ ಸಲುವಾಗಿ ಮಾರ್ಚ್ 30 ರಂದು ವಿಚಾರಣೆ ಕರೆಯಲಾಗಿತ್ತು. 

ಇದನ್ನೂ ಓದಿ: Train  accident: ಒಂದಕ್ಕೊಂದು ಡಿಕ್ಕಿ ಹೊಡೆದ ರೈಲು ಅಮಾಯಕರನ್ನು ಬಲಿ ಪಡೆದ ಟ್ರೈನ್‌

ಅಮೆರಿಕದ ಇತಿಹಾಸದಲ್ಲಿ ಮಾಜಿ ಅಧ್ಯಕ್ಷರೊಬ್ಬರ ವಿರುದ್ಧ ದಾಖಲಾದ ಮೊದಲ ಕ್ರಿಮಿನಲ್ ಮೊಕದ್ದಮೆ ಇದಾಗಿದೆ. ಈ ಪ್ರಕರಣವು 2016 ರ ಅಕ್ಟೋಬರ್‌ನಲ್ಲಿ, ಅಧ್ಯಕ್ಷೀಯ ಚುನಾವಣೆಗೆ ಒಂದು ತಿಂಗಳ ಮೊದಲು, ಟ್ರಂಪ್ ಅಧಿಕಾರಕ್ಕೆ ಬಂದ ಒಂದು ತಿಂಗಳ ಮೊದಲು, ಟ್ರಂಪ್‌ಗಾಗಿ ಈಗ ಮಾಜಿ ವಕೀಲ ಮೈಕೆಲ್ ಕೋಹೆನ್ ಅವರು ಸ್ಟ್ರೋಮಿ ಡೇನಿಯಲ್ಸ್‌ಗೆ $130,000 ಹುಶ್ ಹಣ ಪಾವತಿಗೆ ಸಂಬಂಧಿಸಿದೆ.

ಇದನ್ನೂ ಓದಿ: Twitter new logo: ಟ್ವಿಟ್ಟರ್ ಲೋಗೋ ಬದಲಾಯಿಸಿದ ಎಲಾನ್ ಮಸ್ಕ್​: ನೀಲಿ ಹಕ್ಕಿ ಬದಲು ನಾಯಿ ಚಿತ್ರ

ಅವಳು ಮಾಡಿದ ಲೈಂಗಿಕ ಎನ್‌ಕೌಂಟರ್ ಹಕ್ಕುಗಳ ಬಗ್ಗೆ ಸ್ಟ್ರೋಮಿ ಡೇನಿಯಲ್ಸ್‌ಳನ್ನು ಮೌನಗೊಳಿಸುವ ರೀತಿಯಲ್ಲಿ ಹೀಗೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.  ಈ ವಿಷಯ ಕುರಿತಾಗಿ ಟ್ರಂಪ್ ಅವರ ವಿಚಾರಣೆಯನ್ನು ಪ್ರಸಾರ ಮಾಡಲು ಮಾಧ್ಯಮಗಳಿಗೆ ಅನುಮತಿ ನೀಡಲಾಗುವುದಿಲ್ಲ. ಆದಾಗ್ಯೂ, ಪ್ರಕ್ರಿಯೆಗಳು ಔಪಚಾರಿಕವಾಗಿ ಪ್ರಾರಂಭವಾಗುವ ಮೊದಲು ಐದು ಪೂಲ್ ಛಾಯಾಗ್ರಾಹಕರಿಗೆ ಸ್ಟಿಲ್ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ನ್ಯಾಯಾಧೀಶರು ಅನುಮತಿಸುತ್ತಾರೆ ಎಂದು CNN ವರದಿ ಮಾಡಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

 

Trending News