Twitter new logo: ಟ್ವಿಟ್ಟರ್ ಲೋಗೋ ಬದಲಾಯಿಸಿದ ಎಲಾನ್ ಮಸ್ಕ್​: ನೀಲಿ ಹಕ್ಕಿ ಬದಲು ನಾಯಿ ಚಿತ್ರ

 Twitter new logo: ಟ್ವಿಟರ್‌ ಮಾಲೀಕ ಎಲೋನ್ ಮಸ್ಕ್ ಟ್ವಿಟರ್‌ನ ನೀಲಿ ಪಕ್ಷಿ ಲೋಗೋ ಬದಲಾಗಿ ನಾಯಿ ಚಿತ್ರವಾಗಿ  ಬದಲಾಯಿಸಿದ್ದಾರೆ. ಸ್ವಯಂ ಘೋಷಿತ ಲೋಗೋ ನಿರ್ಧಾರವನ್ನು ಟ್ವಿಟರ್‌ ಮಾಲೀಕ ಎಲೋನ್ ಮಸ್ಕ್ ಖಚಿತ ಪಡಿಸಿದ್ದಾರೆ.  

Written by - Zee Kannada News Desk | Last Updated : Apr 4, 2023, 10:27 AM IST
  • ಟ್ವಿಟರ್‌ನ ನೀಲಿ ಪಕ್ಷಿ ಲೋಗೋ ಬದಲಾವಣೆ
  • ಲೋಗೋ ಬದಲಾವಣೆ ಖಚಿತ ಪಡಿಸಿದ ಟ್ವಿಟರ್‌ ಮಾಲೀಕ ಎಲೋನ್ ಮಸ್ಕ್
  • ಉತ್ತಮ ಬದಲಾವಣೆಗೆ ಕಾರಣವಾದ ಮಸ್ಕ್ ಅವರ ಹೊಸ ನಿರ್ಧಾರ
Twitter new logo: ಟ್ವಿಟ್ಟರ್ ಲೋಗೋ ಬದಲಾಯಿಸಿದ ಎಲಾನ್ ಮಸ್ಕ್​: ನೀಲಿ ಹಕ್ಕಿ ಬದಲು ನಾಯಿ ಚಿತ್ರ title=

Twitter new logo: ಟ್ವಿಟರ್‌ ಮಾಲೀಕ ಎಲೋನ್ ಮಸ್ಕ್ ಟ್ವಿಟರ್‌ನ ನೀಲಿ ಪಕ್ಷಿ ಲೋಗೋವನ್ನು ಬದಲಾಯಿಸಿದ್ದಾರೆ. ಕೆಲವು ದಿನಗಳ ಹಿಂದೆಯೇ ಬದಲಾವಣೆ ನಿರ್ಧಾರ ಮಾಡಲಾಗಿತ್ತು. ಬಿಲಿಯನೇರ್  ಶತಕೋಟಿ ಬೆಲೆಬಾಳುವ ಟ್ವಿಟ್ಟರ್ ಮೈಕ್ರೋಬ್ಲಾಗಿಂಗ್ ಸೈಟ್‌ನ ನೀಲಿ ಹಕ್ಕಿಯ ಲೋಗೋವನ್ನು ನಾಯಿ ಚಿತ್ರ (ಶಿಬಾ) ವಾಗಿ ಬದಲಾಯಿಸಲಾಯಿತು.  

ಸ್ವಯಂ ಘೋಷಿತ ಲೋಗೋ ನಿರ್ಧಾರವನ್ನು ಟ್ವಿಟರ್‌ ಮಾಲೀಕ ಎಲೋನ್ ಮಸ್ಕ್ ಖಚಿತ ಪಡಿಸಿದ್ದಾರೆ. ಇದಲ್ಲದೆ ಎಲೋನ್ ಮಸ್ಕ್ ಅವರ ಈ ಹೊಸ ನಿರ್ಧಾರವು ಉತ್ತಮ ಬದಲಾವಣೆಗೆ ಕಾರಣವಾಗಿದೆ. ಏಕೆಂದರೆ ಲೋಗೋವನ್ನು ಡೋಜ್ ಮೆಮೆಗೆ ಬದಲಾಯಿಸಿದ ಸ್ವಲ್ಪ ಸಮಯದ ನಂತರ,  ಕ್ರಿಪ್ಟೋಕರೆನ್ಸಿಯ ಮೌಲ್ಯವು 30 ಪ್ರತಿಶತದಷ್ಟು ಸೇರ್ಪಡೆಯಾಗಿದೆ..

ಇದನ್ನೂ ಓದಿ: ಆರ್‌ಎಲ್‌ವಿ-ಎಲ್ಇಎಕ್ಸ್ ಯಶಸ್ವಿ ಪರೀಕ್ಷೆ ನಡೆಸಿದ ಇಸ್ರೋ, ಡಿಆರ್‌ಡಿಓ, ಭಾರತೀಯ ವಾಯುಸೇನೆ

ಅನೇಕ ನೆಟಿಜನ್‌ಗಳು ಮತ್ತು ಮಾಧ್ಯಮಗಳು ಡಾಗ್‌ಕಾಯಿನ್ ಲೋಗೋವನ್ನು ಬದಲಾಯಿಸಿದ ಅವಧಿಯಲ್ಲಿ USD 4 ಶತಕೋಟಿಗಿಂತ ಹೆಚ್ಚು ಗಳಿಸಿದೆ ಎಂದು ಸೂಚಿಸಿದ್ದಾರೆ. ನೀಲಿ ಹಕ್ಕಿಯ ಲೋಗೋವನ್ನು ಶಿಬಾ ಇನು ನಾಯಿಯೊಂದಿಗೆ ಬದಲಾಯಿಸಿದ ನಂತರ, ಎಲೋನ್ ಮಸ್ಕ್ ತನ್ನ ಬಗ್ಗೆ ಮೀಮ್‌ಗಳನ್ನು ಹಂಚಿಕೊಂಡಿದ್ದಾರೆ,  ಲೋಗೋ ಬದಲಾವಣೆ ಖಚಿತತೆಯಲ್ಲಿ ಮಸ್ಕ್ ಹಾಗೂ ನೆಟಿಜನ್ ನಡುವೆ  ಸಂವಹನ ನಡೆಸಿದ್ದಾರೆ.   

ಈ ವಿಚಾರವನ್ನು ಮಸ್ಕ್​ ಅವರೇ  ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್​ ಇದೆ. ಟ್ವಿಟ್ಟರ್ ಬದಲಾವಣೆ ಕೇವಲ ವೆಬ್​ ಆವೃತ್ತಿಗೆ ಮಾತ್ರ ಸೀಮಿತವಾಗಿದೆ, ಮೊಬೈಲ್​ನಲ್ಲಿ ಪಕ್ಷಿಯ ಲೋಗೋನೆ ಕಾಣಿಸಲಿದೆ. 'ಡಾಜ್' ಮೆಮೆ ಮತ್ತು ಜನಪ್ರಿಯ ಕ್ರಿಪ್ಟೋಕರೆನ್ಸಿ ಡಾಗ್‌ಕಾಯಿನ್‌ನ ಲೋಗೋ ಆಗಿದ್ದು, ಇದನ್ನು ಸ್ವತಃ ಮಸ್ಕ್ ಸ್ವತಃ ಪ್ರಚಾರ ಮಾಡಿದ್ದಾರೆ.

ಇದನ್ನೂ ಓದಿ: WhatsApp New Feature: ಈಗ ಬೇರೆಯವರು ನಿಮ್ಮ ಮೇಲೆ ಕಣ್ಣಿಡುವುದು ಅಷ್ಟು ಸುಲಭವಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News