Free Condom : ದೇಶದ ಯುವಜನತೆಗೆ ಉಚಿತ ಕಾಂಡೋಮ್‌ ಘೋಷಿಸಿದ ಸರ್ಕಾರ

Free Condom in France : ಲೈಂಗಿಕ ರೋಗಗಳ (ಎಸ್‌ಟಿಡಿ) ಹರಡುವಿಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಮುಂದಿನ ವರ್ಷದಿಂದ ಫ್ರಾನ್ಸ್‌ನ ಯುವಜನರು ಕಾಂಡೋಮ್‌ಗಳನ್ನು ಉಚಿತವಾಗಿ ಪಡೆಯಬಹುದು ಎಂದು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಗುರುವಾರ ಹೇಳಿದ್ದಾರೆ.

Written by - Chetana Devarmani | Last Updated : Dec 9, 2022, 04:16 PM IST
  • ದೇಶದ ಯುವಜನತೆಗೆ ಉಚಿತ ಕಾಂಡೋಮ್‌
  • ಲೈಂಗಿಕ ರೋಗಗಳ ಹರಡುವಿಕೆಹೆ ಕಡಿವಾಣ ಹಾಕಲು ಪ್ಲ್ಯಾನ್‌
  • ಫ್ರಾನ್ಸ್‌ನ ಯುವಜನರಿಗೆ ಸಿಗಲಿದೆ ಫ್ರೀ ಕಾಂಡೋಮ್‌
Free Condom : ದೇಶದ ಯುವಜನತೆಗೆ ಉಚಿತ ಕಾಂಡೋಮ್‌ ಘೋಷಿಸಿದ ಸರ್ಕಾರ  title=
ಕಾಂಡೋಮ್‌

ಪ್ಯಾರಿಸ್ : ಲೈಂಗಿಕ ರೋಗಗಳ (ಎಸ್‌ಟಿಡಿ) ಹರಡುವಿಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಮುಂದಿನ ವರ್ಷದಿಂದ ಫ್ರಾನ್ಸ್‌ನ ಯುವಜನರು ಕಾಂಡೋಮ್‌ಗಳನ್ನು ಉಚಿತವಾಗಿ ಪಡೆಯಬಹುದು ಎಂದು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಗುರುವಾರ ಹೇಳಿದ್ದಾರೆ. "ಮೆಡಿಕಲ್‌ ಶಾಪ್‌ಗಳಲ್ಲಿ, ಜನವರಿ 1 ರಿಂದ 18 - 25 ವರ್ಷ ವಯಸ್ಸಿನವರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುವುದು" ಎಂದು ಮ್ಯಾಕ್ರನ್ ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ : Trending Video: ಹಾವಿನ ಜೊತೆ ಮಗುವಿನ ಆಟ, ಮೈ ನಡುಗುವಂಥ ವಿಡಿಯೋ ವೈರಲ್‌

ಫ್ರಾನ್ಸ್‌ನಲ್ಲಿ 2020 ಮತ್ತು 2021 ರಲ್ಲಿ STD ಗಳ ದರವು ಸುಮಾರು 30% ರಷ್ಟು ಹೆಚ್ಚಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ಹಿನ್ನೆಲೆ ಯುವಜನರಲ್ಲಿ ಅನಗತ್ಯ ಗರ್ಭಧಾರಣೆಯನ್ನು ಕಡಿಮೆ ಮಾಡಲು ಮತ್ತು ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಯಲು 18 ರಿಂದ 25 ವರ್ಷ ವಯಸ್ಸಿನವರಿಗೆ ಉಚಿತವಾಗಿ ಕಾಂಡೋಮ್‌ಗಳನ್ನು ಫಾರ್ಮಸಿಗಳು ಒದಗಿಸುತ್ತವೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಗುರುವಾರ ಘೋಷಿಸಿದರು.

ಈ ವರ್ಷದ ಆರಂಭದಲ್ಲಿ, ಫ್ರೆಂಚ್ ಸರ್ಕಾರವು 25 ವರ್ಷದೊಳಗಿನ ಎಲ್ಲಾ ಮಹಿಳೆಯರಿಗೆ ಉಚಿತ ಜನನ ನಿಯಂತ್ರಣವನ್ನು ನೀಡಲು ಪ್ರಾರಂಭಿಸಿತು, ಆರ್ಥಿಕ ತೊಂದರೆಗಳಿಂದಾಗಿ ಯುವತಿಯರು ಗರ್ಭನಿರೋಧಕವನ್ನು ತ್ಯಜಿಸುವುದನ್ನು ತಡೆಯಲು 18 ವರ್ಷದೊಳಗಿನವರಿಗೆ ಈ ಕಾರ್ಯಕ್ರಮವನ್ನು ವಿಸ್ತರಿಸಿತು ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ.

ಇದನ್ನೂ ಓದಿ :  Viral Video : ಹಾವಿನ ಜೊತೆ ಹುಚ್ಚಾಟ ತಲೆಕೆಟ್ಟು ಸರ್ಪ ಕಚ್ಚಿದ್ದೆಲ್ಲಿ ನೋಡಿ..

ಏಡ್ಸ್ ಮತ್ತು ಇತರ ಲೈಂಗಿಕವಾಗಿ ಹರಡುವ ರೋಗಗಳ (STDs) ಹರಡುವಿಕೆಯನ್ನು ಎದುರಿಸಲು ಕ್ರಮವಾಗಿ, ದೇಶದ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯಲ್ಲಿ ಈ ಯೋಜನೆಯನ್ನು ಫ್ರಾನ್ಸ್‌ ಸರ್ಕಾರ ಜಾರಿಗೆ ತರಲು ನಿರ್ಧರಿಸಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News