'ವ್ಲಾಡಿಮೀರ್ ಪುಟಿನ್ ಸತ್ಹೋದ್ರೆ ಖುಷಿಯಾಗುತ್ತದೆ', ಬ್ರಿಟೆನ್ ನಲ್ಲಿ ಯುಕ್ರೇನ್ ರಾಯಭಾರಿಯ ಹೇಳಿಕೆ

Ukraine Ambassador: ರಷ್ಯಾ ಹಾಗೂ ಯುಕ್ರೇನ್ ನಡುವಿನ ಸಂಬಂಧಗಳು ಯಾವ ರೀತಿಯಲ್ಲಿ ಹದಗೆಟ್ಟಿವೆ ಎಂಬುದನ್ನು ಬ್ರಿಟನ್ ನಲ್ಲಿನ ಉಕ್ರೇನ್ ರಾಯಭಾರಿಯ ಈ ಹೇಳಿಕೆಯಿಂದ ನೀವು ಅಂದಾಜಿಸಬಹುದು. ಈ ಕುರಿತು ಹೇಳಿಕೆ ನೀಡಿರುವ ಯುಕ್ರೇನ್ ರಾಯಭಾರಿ, 'ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಸತ್ಹೋದ್ರೆ ಖುಷಿಯಾಗುತ್ತಿತ್ತು'  ಎಂದು ಹೇಳಿದ್ದಾರೆ.

Written by - Nitin Tabib | Last Updated : Apr 23, 2023, 08:13 PM IST
  • ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಬ್ಬ ಮಾಸ್ಟರ್ ಜೀನಿಯಸ್ ಅಲ್ಲ,
  • ಆದರೆ ಭ್ರಷ್ಟ ಮತ್ತು ಸಂಕೀರ್ಣ ರಷ್ಯಾದ ರಾಜಕೀಯ ವ್ಯವಸ್ಥೆಯಲ್ಲಿ ನಂಬಿಕೆಯುಳ್ಳವರು
  • ಎಂದು ಬ್ರಿಟನ್‌ನಲ್ಲಿರುವ ಉಕ್ರೇನ್ ರಾಯಭಾರಿ ವಾಡಿಮ್ ಪ್ರಿಸ್ಟೈಕೊ ಹೇಳಿದ್ದಾರೆ.
'ವ್ಲಾಡಿಮೀರ್ ಪುಟಿನ್ ಸತ್ಹೋದ್ರೆ ಖುಷಿಯಾಗುತ್ತದೆ', ಬ್ರಿಟೆನ್ ನಲ್ಲಿ ಯುಕ್ರೇನ್ ರಾಯಭಾರಿಯ ಹೇಳಿಕೆ title=

Ukrain Ambassador On Putin: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಬ್ಬ ಮಾಸ್ಟರ್ ಜೀನಿಯಸ್ ಅಲ್ಲ, ಆದರೆ ಭ್ರಷ್ಟ ಮತ್ತು ಸಂಕೀರ್ಣ ರಷ್ಯಾದ ರಾಜಕೀಯ ವ್ಯವಸ್ಥೆಯಲ್ಲಿ ನಂಬಿಕೆಯುಳ್ಳವರು ಎಂದು ಬ್ರಿಟನ್‌ನಲ್ಲಿರುವ ಉಕ್ರೇನ್ ರಾಯಭಾರಿ ವಾಡಿಮ್ ಪ್ರಿಸ್ಟೈಕೊ ಹೇಳಿದ್ದಾರೆ. ನ್ಯೂಸ್‌ವೀಕ್ ಪ್ರಕಾರ, ರಷ್ಯಾದಲ್ಲಿ ಕೆಲವು ಶಕ್ತಿ ಗುಂಪುಗಳು ತಮ್ಮ ಪ್ರಭಾವವನ್ನು ಹೆಚ್ಚಿಸಲು ಕೆಲಸ ಮಾಡುತ್ತಿರುವುದರಿಂದ ಪುಟಿನ್ ಹೆಚ್ಚು ಆಕ್ರಮಣಕಾರಿಯಾಗಿದ್ದಾರೆ ಎಂದು ವಾಡಿಮ್ ಹೇಳಿದ್ದಾರೆ.

“ಅಲ್ಲಿ ಕುಳಿತಿರುವವನು ಮಾಸ್ಟರ್ ಜೀನಿಯಸ್ ಎಂದು ನಾನು ಭಾವಿಸುವುದಿಲ್ಲ. ತುಕಡಿಗಳನ್ನು ಎಲ್ಲಿಗೆ ಕೊಂಡೊಯ್ಯಬೇಕೋ ಮತ್ತು ಹಗ್ಗಗಳನ್ನು ಎಷ್ಟು ಎಳೆಯುವುದು ಗೊತ್ತಿರುವವನು. ವ್ಯವಸ್ಥೆಯು ತುಂಬಾ ಸಂಕೀರ್ಣವಾಗಿದೆ. ರಷ್ಯಾದ ಜನರು ತಮ್ಮದೇ ಆದ ಆಸಕ್ತಿಗಳನ್ನು ಹೊಂದಿದ್ದಾರೆ, ಅವರು ತಮ್ಮದೇ ಆದ ಪ್ರಮುಖ ಗುಂಪುಗಳನ್ನು ಹೊಂದಿದ್ದಾರೆ. ಪುಟಿನ್‌ಗೆ ಸ್ನೇಹಿತರ ಜೊತೆಗೆ ಶತ್ರುಗಳೂ ಇದ್ದಾರೆ. ಆಲ್ಫಾ ಇನ್ನೂ ಇದೆ ಆದರೆ ಅದು ದುರ್ಬಲವಾಗುತ್ತಿದೆ ಎಂದು ಅವರು ಗುರುತಿಸುತ್ತಾರೆ. ನಿಸ್ಸಂಶಯವಾಗಿ, ಅದು ದುರ್ಬಲವಾಗಿರುತ್ತದೆ ಮತ್ತು ಕೆಲಸದಲ್ಲಿ ಹೆಚ್ಚು ಉದ್ರಿಕ್ತವಾಗಿರುತ್ತದೆ" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-America ಹೋಗುವ ಕನಸು ಕಾಣುತ್ತಿರುವವರಿಗೆ ಒಂದು ಸಿಹಿ ಸುದ್ದಿ, 10 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಈ ಬಾರಿ ವೀಸಾ ಸಿಗಲಿದೆ

'ಪುಟಿನ್ ಮರಣಕ್ಕೆ ಹಾರೈಕೆ'
ಸಂಪೂರ್ಣ ಪತನ ಅಥವಾ ವ್ಲಾಡಿಮಿರ್ ಪುಟಿನ್ ಅವರ ಅಂತ್ಯವನ್ನು ಮಾತ್ರ ಸ್ವಾಗತಿಸಬೇಕು ಎಂದು ರಾಯಭಾರಿ ಹೇಳಿದ್ದಾರೆ. "ರಷ್ಯಾದ ಒಳಗೆ ಅಥವಾ ಹೊರಗೆ ಈ ಸರ್ವಾಧಿಕಾರಿ ಆಡಳಿತವನ್ನು ಪ್ರತಿನಿಧಿಸುವ ಎಲ್ಲದರ ವಿರುದ್ಧ ನಮ್ಮ ಶಕ್ತಿಯನ್ನು ಉಪಯೋಗಿಸಿದರೆ ಅದು ಸರಿ" ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ “ಪುಟಿನ್ ಸತ್ಹೋದ್ರೆ ಸಂತೋಷಪಡುತ್ತೇವೆಯೇ? ನಿಶ್ಚಿತವಾಗಿ ಹೌದು. ಯಾರೂ ಯಾವುದೇ ಮನುಷ್ಯನ ಮರಣ ಬಯಸುವುದಿಲ್ಲ ಆದರೆ ನಾವು ಈ ವ್ಯಕ್ತಿಗಾಗಿ ಬಯಸುತ್ತೇವೆ" ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-Most Precious Lizard: ಈ ಹಲ್ಲಿಯ ಬೆಲೆ ಒಂದು ಬಿಎಂಡಬ್ಲ್ಯೂಗೆ ಸಮಾನ ಎಂದ್ರೆ ನೀವು ನಂಬ್ತೀರಾ? 100% ನಿಜ!

ವ್ಲಾಡಿಮಿರ್ ಪುಟಿನ್ ರಿಪ್ಲೆಸ್ಮೆಂಟ್ ಉಕ್ರೇನ್ ಪಾಲಿಗೆ ಉತ್ತಮವಾಗಿದೆಯೇ?
ಈ ಪ್ರಶ್ನೆಗೆ ಉತ್ತರ ನೀಡಿದ, ಬ್ರಿಟನ್‌ಗೆ ಉಕ್ರೇನ್‌ನ ರಾಯಭಾರಿ, "ನಾನು ಪಶ್ಚಿಮದಲ್ಲಿ ಅತಿ ಹೆಚ್ಚು ದ್ವೇಷಿಸುವ ಸಂಗತಿ ಎಂದರೆ ಅದು ಈ ವಿಷಯದ ಕುರಿತು ನಾವು ಪ್ರತಿ ಬಾರಿ ಚರ್ಚೆ ನಡೆಸಿದಾಗಲೆಲ್ಲಾ ಜನರು ಆ ವ್ಯಕ್ತಿಯ ಬಳಿಕ ಬರುವ ವ್ಯಕ್ತಿ ಈತನಿಗಿಂತ ಕೆಟ್ಟದಾಗಿರುತ್ತಾನೆ ಎಂಬ ಮ್ಯಾಜಿಕಲ್ ಕಂಕ್ಲೂಶನ್ ಗೆ ತಲುಪುತ್ತಾರೆ. ಪುಟಿನ್ ಗಿಂತ ಆತ ಸ್ವಲ್ಪ ಸರಿಯಾಗಿರಲಿದ್ದಾನೆ ಎಂಬುದು ಹೇಗೆ ಗೊತ್ತಾಗುತ್ತದೆ? ಎಂದು ಮರುಪ್ರಶ್ನಿಸಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News