Ukraine Ambassador: ರಷ್ಯಾ ಹಾಗೂ ಯುಕ್ರೇನ್ ನಡುವಿನ ಸಂಬಂಧಗಳು ಯಾವ ರೀತಿಯಲ್ಲಿ ಹದಗೆಟ್ಟಿವೆ ಎಂಬುದನ್ನು ಬ್ರಿಟನ್ ನಲ್ಲಿನ ಉಕ್ರೇನ್ ರಾಯಭಾರಿಯ ಈ ಹೇಳಿಕೆಯಿಂದ ನೀವು ಅಂದಾಜಿಸಬಹುದು. ಈ ಕುರಿತು ಹೇಳಿಕೆ ನೀಡಿರುವ ಯುಕ್ರೇನ್ ರಾಯಭಾರಿ, 'ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಸತ್ಹೋದ್ರೆ ಖುಷಿಯಾಗುತ್ತಿತ್ತು' ಎಂದು ಹೇಳಿದ್ದಾರೆ.
ರಶ್ಯಾ-ಉಕ್ರೇನ್ ಸಂಘರ್ಷದ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ಯುಎಸ್ ನ ವೈಟ್ ಹೌಸ್ ಶ್ಲಾಘಿಸಿದೆ. ಜಿ20 ಬಾಲಿ ಮಾತುಕತೆಯಲ್ಲಿ ಪ್ರಧಾನಿ ಮೋದಿ ಹೇಳಿರುವ ಇಂದಿನ ಯುಗವು ಯುದ್ಧವಾಗಬಾರದು ಎನ್ನುವ ಹೇಳಿಕೆ ಮಹತ್ವದ ಪಾತ್ರವನ್ನು ವಹಿಸಲಿದೆ ಎಂದು ವೈಟ್ ಹೌಸ್ ಹೇಳಿದೆ.
ಪೂರ್ವ ಯುರೋಪಿಯನ್ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಕುರಿತು ಉಕ್ರೇನ್ ಮತ್ತು ಯುಎಸ್ ಜೊತೆ ಮಾತುಕತೆ ನಡೆಸಲು ಮತ್ತು ಮಾತುಕತೆಗೆ ಮರಳಲು ಸಿದ್ಧ ಎಂದು ರಷ್ಯಾ ಚೀನಾಕ್ಕೆ ತಿಳಿಸಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.
ಕ್ರೆಮ್ಲಿನ್ನಲ್ಲಿ ಉಕ್ರೇನ್ನ ನಾಲ್ಕು ಆಕ್ರಮಿತ ಪ್ರದೇಶಗಳನ್ನು ಸಂಯೋಜಿಸಲು ರಷ್ಯಾ ಶುಕ್ರವಾರ ಸಹಿ ಸಮಾರಂಭವನ್ನು ನಡೆಸಲಿದೆ ಎಂದು ಮಾಸ್ಕೋ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
"ನಾಳೆ ಗ್ರ್ಯಾಂಡ್ ಕ್ರೆಮ್ಲಿನ್ ಅರಮನೆಯ ಜಾರ್ಜಿಯನ್ ಹಾಲ್ನಲ್ಲಿ 15:00 ಕ್ಕೆ ಹೊಸ ಪ್ರದೇಶಗಳನ್ನು ರಷ್ಯಾಕ್ಕೆ ಸೇರಿಸುವ ಕುರಿತು ಸಹಿ ಮಾಡುವ ಸಮಾರಂಭ ನಡೆಯಲಿದೆ" ಎಂದು ಅಲ್ ಜಜೀರಾ ಉಲ್ಲೇಖಿಸಿದಂತೆ ವಕ್ತಾರ ಡಿಮಿಟ್ರಿ ಪೆಸ್ಕೋವ್ ಗುರುವಾರ ಹೇಳಿದರು. ಈ ಸಮಾರಂಭದಲ್ಲಿ ಪುಟಿನ್ ಭಾಷಣ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಪಾಶ್ಚಿಮಾತ್ಯ ದೇಶಗಳು ರಷ್ಯಾದ ಕಚ್ಚಾ ತೈಲದ ಆಮದುಗಳ ಬಗ್ಗೆ ಭಾರತವನ್ನು ಟೀಕಿಸುವ ಮೂಲಕ ತಮ್ಮ "ಸ್ವಂತ ಕಾನೂನುಬಾಹಿರ ನಿರ್ಬಂಧಗಳಿಂದ" ತಮ್ಮನ್ನು ತಾವು ಮುಕ್ತಗೊಳಿಸಿಕೊಳ್ಳುವುದು ಅವರ ತತ್ವರಹಿತ ಸ್ಥಾನ ಮತ್ತು ದ್ವಿಗುಣವನ್ನು ಪ್ರತಿಬಿಂಬಿಸುತ್ತದೆ ಎಂದು ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಭಾನುವಾರ ಹೇಳಿದ್ದಾರೆ.
ಪೂರ್ವ ಉಕ್ರೇನ್ನ ಬಿಲೋಹೊರಿವ್ಕಾ ಗ್ರಾಮದ ಶಾಲೆಯೊಂದರ ಮೇಲೆ ರಷ್ಯಾ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿರುವುದು ತಿಳಿದುಬಂದಿದ್ದು ಮತ್ತು ಅವಶೇಷಗಳಲ್ಲಿ 60 ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಲುಹಾನ್ಸ್ಕ್ ಪ್ರದೇಶದ ಗವರ್ನರ್ ಭಾನುವಾರ ಹೇಳಿದ್ದಾರೆ.
Russia-Ukraine Conflict - ಉಕ್ರೇನ್ (Ukraine) ಮೇಲೆ ರಷ್ಯಾದ (Russia) ಆಕ್ರಮಣ ಕಳೆದ ಒಂದು ತಿಂಗಳಿನಿಂದ ಜಾರಿಯಲ್ಲಿದೆ ಮತ್ತು ಮಾಸ್ಕೋದ (Mascow) ಈ ಆಕ್ರಮಣ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ತನ್ನ ಪರಮಾಣು ಪಡೆಗಳನ್ನು (Nuclear Forces) ವಿಶೇಷ ಎಚ್ಚರಿಕೆಯಲ್ಲಿ ಇರಿಸಿರುವ ಹಲವು ಗಂಟೆಗಳ ನಂತರ ರಷ್ಯಾ ತನ್ನ ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು (Nuclear Submarine) ಸಮುದ್ರಕ್ಕೆ ಇಳಿಸಿದೆ. ಇದರಿಂದಾಗಿ ಪರಮಾಣು ಯುದ್ಧದ ಅಪಾಯ ಎದುರಾಗಿದೆ.
ಅಂತರರಾಷ್ಟ್ರೀಯ ಒತ್ತಡ ಮತ್ತು ಕಠಿಣ ನಿರ್ಬಂಧಗಳ ಹೊರತಾಗಿಯೂ, ಈ ಒತ್ತಡದ ತಂತ್ರಗಳು ಭಾರತಕ್ಕೆ S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಪೂರೈಸುವ ಒಪ್ಪಂದದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ರಷ್ಯಾ ಬುಧವಾರದಂದು ಭರವಸೆ ನೀಡಿದೆ.
ಉಕ್ರೇನ್ನ ಮೇಲೆ ಆಕ್ರಮಣ ಮಾಡಲು ಯುಎಸ್ ದೇಶದ ಮೇಲೆ ಭಾರೀ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ ನಂತರ ಸಾವಿರಾರು ರಷ್ಯಾದ ಗ್ರಾಹಕರು Apple Pay ಮತ್ತು Google Pay ಸೇವೆಗಳನ್ನು ಬಳಸುವುದನ್ನು ನಿರ್ಬಂಧಿಸಲಾಗಿದೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಪೋಲೆಂಡ್ ಮಾರ್ಚ್ 24 ರಂದು ಮಾಸ್ಕೋದಲ್ಲಿ ರಷ್ಯಾದೊಂದಿಗೆ 2022 ರ ವಿಶ್ವಕಪ್ ಪ್ಲೇ-ಆಫ್ ಅನ್ನು ಆಡುವುದಿಲ್ಲ ಎಂದು ಪೋಲಿಷ್ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷರು ಘೋಷಿಸಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪೂರ್ವ ಉಕ್ರೇನ್ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಗೆ ಆದೇಶಿಸಿದ ಬೆನ್ನಲ್ಲೇ, ರಷ್ಯಾದ ಪಡೆಗಳು ಉಕ್ರೇನ್ನ ಹಲವಾರು ನಗರಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿ ಮತ್ತು ಅದರ ದಕ್ಷಿಣ ಕರಾವಳಿಯನ್ನು ಆಕ್ರಮಿಸಿಕೊಂಡವು.
1991 ರಲ್ಲಿ ಮಾಸ್ಕೋದಿಂದ ಸ್ವಾತಂತ್ರ್ಯವನ್ನು ಗೆದ್ದ ನಂತರ ಉಕ್ರೇನ್ನ ರಾಜಕೀಯ ಇತಿಹಾಸದ ಪ್ರಮುಖ ಘಟನೆಗಳ ವಿವರ ಇಲ್ಲಿದೆ.
1991: ಉಕ್ರೇನ್ ಸೋವಿಯತ್ ಗಣರಾಜ್ಯದ ನಾಯಕ ಲಿಯೊನಿಡ್ ಕ್ರಾವ್ಚುಕ್ ಮಾಸ್ಕೋದಿಂದ ಸ್ವಾತಂತ್ರ್ಯವನ್ನು ಘೋಷಿಸಿದರು. ಜನಾಭಿಪ್ರಾಯ ಸಂಗ್ರಹಣೆ ಮತ್ತು ಅಧ್ಯಕ್ಷೀಯ ಚುನಾವಣೆಯಲ್ಲಿ, ಉಕ್ರೇನಿಯನ್ನರು ಸ್ವಾತಂತ್ರ್ಯವನ್ನು ಅನುಮೋದಿಸಿ ಕ್ರಾವ್ಚುಕ್ ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ರಾಜ್ಯದ ಸುಮಾರು 5000 ವಿದ್ಯಾರ್ಥಿಗಳ ವಾಪಸಾತಿ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಘೋಷಿಸಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ವಿಶೇಷ ಮಿಲಿಟರಿ ಕಾರ್ಯಾಚರಣೆಯ ಉದ್ದೇಶವು ರಷ್ಯಾವನ್ನು ರಕ್ಷಿಸುವುದು ಮತ್ತು ಉಕ್ರೇನ್ ಅನ್ನು ಸಶಸ್ತ್ರೀಕರಣಗೊಳಿಸುವುದು ಎಂದು ಹೇಳಿದ್ದಾದರೂ ಕೂಡ ಅವರ ಮುಖ್ಯ ಉದ್ದೇಶ, ಈಗ ಈ ಹಿಂದಿನ ಯುಎಸ್ಎಸ್ಆರ್ ಪ್ರದೇಶದ ಮೇಲೆ ಪ್ರಾಬಲ್ಯವನ್ನು ಸಾಧಿಸುವುದಾಗಿದೆ.ಈ ಹಿನ್ನಲೆಯಲ್ಲಿ ಈಗ ಒಟ್ಟಾರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ಹಾದಿಯನ್ನು ಏಳು ಪ್ರಶ್ನೆಗಳ ಮೂಲಕ ಇಲ್ಲಿ ಉತ್ತರಿಸುವ ಪ್ರಯತ್ನವನ್ನು ಮಾಡಲಾಗಿದೆ.
ರಷ್ಯಾ ಉಕ್ರೇನ್ ನ್ನು ದ್ವೇಷಿಸುತ್ತಿರುವುದೇಕೆ?
ಉಕ್ರೇನ್ನ ಮಿಲಿಟರಿ ಶರಣಾದರೆ ಮಾಸ್ಕೋ ಮಾತುಕತೆಗೆ ಸಿದ್ಧವಾಗಿದೆ ಎಂದು ರಷ್ಯಾ ಹೇಳಿದೆ.ಉಕ್ರೇನ್ ಆಕ್ರಮಣದ ಮೊದಲ ದಿನವು ತನ್ನ ಎಲ್ಲಾ ಗುರಿಗಳನ್ನು ಸಾಧಿಸಿದೆ ಮತ್ತು 83 ಭೂ-ಆಧಾರಿತ ಉಕ್ರೇನಿಯನ್ ಗುರಿಗಳನ್ನು ನಾಶಪಡಿಸಿದೆ ಎಂದು ಮಾಸ್ಕೋ ತಿಳಿಸಿದೆ.
Russia Attacked On Five Ukrainian Saboteurs: ಉಕ್ರೇನ್ನ ಸೇನೆಯು (Ukraine Military) ತನ್ನ ಸೇನಾ ರಕ್ಷಣಾ ಪೋಸ್ಟ್ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ರಷ್ಯಾದ ಸೇನೆ (Russian Military) ಸೋಮವಾರ ಹೇಳಿಕೆ ನೀಡಿತ್ತು. ಈ ಘಟನೆಗೆ ಪ್ರತ್ಯುತ್ತರ ನೀಡಿದ ರಷ್ಯಾ (Russia) ಸೇನೆ ಐವರು ಉಕ್ರೇನಿಯನ್ (Ukraine) ವಿಧ್ವಂಸಕರನ್ನು ಹತ್ಯೆಗೈಯಲಾಗಿದೆ ಎಂದಿದೆ.
Russia-Ukraine Conflict - ರಷ್ಯಾ ಮತ್ತು ಉಕ್ರೇನ್ ನಡುವೆ ಮಹಾಯುದ್ಧ ಪ್ರಾರಂಭವಾಗಿದೆಯೇ? ಏಕೆಂದರೆ, ಉಕ್ರೇನ್ ಬಾಂಬ್ ದಾಳಿಯಲ್ಲಿ (Russia Ukraine Tension) ತನ್ನ ಗಡಿಭಾಗದ ಪೋಸ್ಟ್ ವೊಂದು ಸ್ಫೋಟಗೊಂಡಿದೆ (Ukraine Attacks Russia) ಎಂದು ರಷ್ಯಾ (Russia) ಸೋಮವಾರ ಹೇಳಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.