1959ರಲ್ಲಿ 10 ಗ್ರಾಂ ಚಿನ್ನದ ದರ ಎಷ್ಟಿತ್ತು ಗೊತ್ತಾ? 63 ವರ್ಷದ ಹಿಂದಿನ ಬಿಲ್ ವೈರಲ್!
Gold Rate in 1950: ಇತ್ತೀಚಿನ ದಿನಗಳಲ್ಲಿ ರೆಸ್ಟೋರೆಂಟ್ ಬಿಲ್, ಬುಲೆಟ್ ಬೈಕ್‍ನ ಬಿಲ್ ಮತ್ತು ವಿದ್ಯುತ್ ಬಿಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದಾದ ಬಳಿಕ ಇದೀಗ 1959ರಲ್ಲಿ ಚಿನ್ನಾಭರಣದ ಬಿಲ್ ಎಷ್ಟಿತ್ತು ಅನ್ನೋದರ ಬಿಲ್ವೊಂದು ಸಖತ್ ವೈರಲ್ ಆಗುತ್ತಿದೆ.
ನವದೆಹಲಿ: ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ಕಾಣುತ್ತಿದೆ. ಹೊಸ ವರ್ಷದಲ್ಲಿ ಚಿನ್ನದ ದರ ಮತ್ತೊಮ್ಮೆ ದಾಖಲೆ ಮಟ್ಟದ ಸಮೀಪ ತಲುಪಿದೆ. 2020ರ ಆಗಸ್ಟ್‍ನಲ್ಲಿ ಚಿನ್ನದ ದರವು ದಾಖಲೆಯ 56,200 ರೂ. ತಲುಪಿತ್ತು. ಬುಧವಾರದ ವಹಿವಾಟಿನಲ್ಲಿ ಚಿನ್ನವು ಪ್ರತಿ 10 ಗ್ರಾಂಗೆ 57,520 ರೂ.ಗೆ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಚಿನ್ನದ ದರ 62000 ರೂ.ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಅಷ್ಟೇ ಅಲ್ಲ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 80 ಸಾವಿರ ರೂ.ತಲುಪಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಮತ್ತು ನಂತರ ಚಿನ್ನದ ಬೆಲೆ ಎಷ್ಟಿತ್ತು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
1959ರ ಆಭರಣದ ಬಿಲ್ ವೈರಲ್!
ಹಲವಾರು ವರ್ಷಗಳಷ್ಟು ಹಿಂದಿನ ರೆಸ್ಟೋರೆಂಟ್ ಬಿಲ್, ಬುಲೆಟ್ ಬೈಕ್‍ನ ಬಿಲ್ ಮತ್ತು ವಿದ್ಯುತ್ ಬಿಲ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈಗ 1959ರಲ್ಲಿನ ಚಿನ್ನಾಭರಣದ ಬಿಲ್ ವೈರಲ್ ಆಗುತ್ತಿದೆ. 63 ವರ್ಷಗಳಷ್ಟು ಹಳೆಯದಾದ ಈ ಬಿಲ್ ನೋಡಿದ್ರೆ ಖರೀದಿದಾರರು ಚಿನ್ನ ಮತ್ತು ಬೆಳ್ಳಿ ಎರಡರ ಆಭರಣವನ್ನೂ ಖರೀದಿಸಿರುವುದು ಗೊತ್ತಾಗುತ್ತದೆ. 6 ದಶಕಗಳಿಗೂ ಹೆಚ್ಚು ಹಳೆಯದಾದ ಈ ಬಿಲ್ ನೋಡಿದ್ರೆ ನೀವು ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತೀರಿ. ಆ ಬಿಲ್‍ನಲ್ಲಿ ಬರೆದಿರುವ ಚಿನ್ನ ಮತ್ತು ಬೆಳ್ಳಿಯ ದರಗಳನ್ನು ನೋಡಿದ್ರೆ ನೀವು ಆಶ್ಚರ್ಯಪಡುವುದು ಗ್ಯಾರಂಟಿ.
ಇದನ್ನೂ ಓದಿ: SBI Latest News: ನೀವೂ ಸ್ಟೇಟ್ ಬ್ಯಾಂಕ್‌ನ ಗ್ರಾಹಕರಾಗಿದ್ದರೆ ಇಲ್ಲಿದೆ ಮಹತ್ವದ ಮಾಹಿತಿ
72 ವರ್ಷಗಳ ಹಿಂದೆ ಚಿನ್ನದ ಬೆಲೆ 99 ರೂ.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅಂದರೆ 1950ರಲ್ಲಿ 10 ಗ್ರಾಂ ಚಿನ್ನದ ದರ ಕೇವಲ 99 ರೂ. ಆಗಿತ್ತು. ಅದರ 9 ವರ್ಷಗಳ ನಂತರದ ಬಿಲ್ ನೋಡಿದ್ರೆ ಆಗ ಚಿನ್ನದ ಬೆಲೆ 10 ಗ್ರಾಂಗೆ 113 ರೂ. ತಲುಪಿತ್ತು. ಮತ್ತೆ 1 ವರ್ಷದ ಬಳಿಕ ಚಿನ್ನದ ದರವು 10 ಗ್ರಾಂಗೆ 112 ರೂ. ತಲುಪಿದ್ರೆ, 1970ರಲ್ಲಿ ಈ ದರ 10 ಗ್ರಾಂಗೆ 184.50 ರೂ.ಗೆ ಏರಿಕೆ ಕಂಡಿತ್ತು.
ಒಟ್ಟು 909 ರೂ. ಬಿಲ್.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈಲರ್ ಆಗಿರುವ ಬಿಲ್ 1959ರದ್ದು. ಈ ಬಿಲ್‍ನಲ್ಲಿ 621 ಮತ್ತು 251 ರೂ.ಗಳ ಚಿನ್ನದ ವಸ್ತುಗಳನ್ನು ನಮೂದಿಸಲಾಗಿದೆ. ಇದರ ಜೊತೆಗೆ ಇತರೆ ವಸ್ತುಗಳ ದರಗಳನ್ನು ನೀಡಲಾಗಿದೆ. ಇವುಗಳ ಒಟ್ಟು ಬಿಲ್ 909 ರೂ. ಆಗಿದೆ. ವೈರಲ್ ಆಗುತ್ತಿರುವ ಈ ಬಿಲ್‍ನ ಸ್ಥಿತಿ ತುಂಬಾ ಹದಗೆಟ್ಟಿದೆ. ಈ ಬಿಲ್‍ನಲ್ಲಿ ಅಂದಿನ ತೆರಿಗೆಯನ್ನೂ ಉಲ್ಲೇಖಿಸಲಾಗಿದೆ. ಆದರೆ ಇದು ಸಂಪೂರ್ಣವಾಗಿ ಕೈಯಿಂದ ಬರೆಯಲ್ಪಟ್ಟಿದೆ.
ಹೊಸ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಹಣ ಗಳಿಸುವ ಅವಕಾಶ ಇಲ್ಲಿದೆ .!
ಸ್ವಾತಂತ್ರ್ಯದ ನಂತರ ಚಿನ್ನದ ದರ 10 ಗ್ರಾಂಗೆ
1950ರಲ್ಲಿ10 ಗ್ರಾಂಗೆ 99 ರೂ.
1960ರಲ್ಲಿ 112 ರೂ.
1970ರಲ್ಲಿ 184.5 ರೂ.
1980ರಲ್ಲಿ 1330 ರೂ.
1990ರಲ್ಲಿ 3,200 ರೂ.
2000ರಲ್ಲಿ 4,400 ರೂ.
2010ರಲ್ಲಿ 18,500 ರೂ.
2020ರಲ್ಲಿ 56,200 ರೂ.
2022ರಲ್ಲಿ 55,000 ರೂ.
2023ರ ಜ.4ರಂದು ಪ್ರತಿ 10 ಗ್ರಾಂ ಚಿನ್ನಕ್ಕೆ 57,520 ರೂ.ನಂತೆ ವಹಿವಾಟು ನಡೆಸುತ್ತಿದೆ.
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.