SBI Latest News: ನೀವೂ ಸ್ಟೇಟ್ ಬ್ಯಾಂಕ್‌ನ ಗ್ರಾಹಕರಾಗಿದ್ದರೆ ಇಲ್ಲಿದೆ ಮಹತ್ವದ ಮಾಹಿತಿ

SBI Latest News: ಭಾರತದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕೋಟ್ಯಾಂತರ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ.  ಎಸ್‌ಬಿಐ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.  

Written by - Yashaswini V | Last Updated : Jan 4, 2023, 08:14 AM IST
  • ನೀವು ಸಹ ಸ್ಟೇಟ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೆ ಈ ಮಹತ್ವದ ನವೀಕರಣವನ್ನು ತಪ್ಪದೇ ತಿಳಿಯಿರಿ
  • ಎಸ್‌ಬಿಐ ಕೋಟ್ಯಂತರ ಗ್ರಾಹಕರ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಸಂಖ್ಯೆಗಳನ್ನು ನೀಡಿದೆ
  • ಗ್ರಾಹಕರು ಈ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಅಗತ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
SBI Latest News: ನೀವೂ ಸ್ಟೇಟ್ ಬ್ಯಾಂಕ್‌ನ ಗ್ರಾಹಕರಾಗಿದ್ದರೆ ಇಲ್ಲಿದೆ ಮಹತ್ವದ ಮಾಹಿತಿ  title=
SBI Latest Update

SBI Latest News: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕೋಟಿಗಟ್ಟಲೆ ಗ್ರಾಹಕರಿಗಾಗಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಕೋಟ್ಯಂತರ ಗ್ರಾಹಕರ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು, ಬ್ಯಾಂಕ್ ಕೆಲವು ನಂಬರ್‌ಗಳನ್ನು ಹಂಚಿಕೊಂಡಿದೆ. ನೀವು ಕೂಡ ಎಸ್‌ಬಿಐ ಗ್ರಾಹಕರಾಗಿದ್ದರೆ, ನೀವು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಬ್ಯಾಂಕ್ ಸಂಬಂಧಿತ ಕೆಲವು ಕೆಲಸಗಳನ್ನು ಪೂರ್ಣಗೊಳಿಸಬಹುದು. 

ಇನ್ನು ಮುಂದೆ ಈ ಕೆಲಸಗಳಿಗಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಇನ್ನು ಮುಂದೆ ಬ್ಯಾಂಕ್ ಗ್ರಾಹಕರು ಕೆಲವು ಮಾಹಿತಿಗಳನ್ನು ಪಡೆಯಲು ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು ಎಂಬ ಅಗತ್ಯವಿಲ್ಲ. ಬದಲಿಗೆ, ಇದಕ್ಕಾಗಿ ಎಸ್‌ಬಿಐ ಹೊಸ ಟೋಲ್ ಫ್ರೀ ಸಂಖ್ಯೆಗಳನ್ನು ನೀಡಿದೆ. ಗ್ರಾಹಕರು ಈ ಸಂಖ್ಯೆಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಬಹುದಾಗಿದೆ.

ಇದನ್ನೂ ಓದಿ- Multiple Bank Accounts: ಆರ್‌ಬಿಐ ಹೊಸ ಮಾರ್ಗಸೂಚಿ- ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆ ತೆರೆದರೆ ಭಾರೀ ನಷ್ಟ

ಹೌದು, ಟ್ವೀಟ್ ಮೂಲಕ ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರ ಸಹಾಯವಾಣಿಗೆ ಸಂಬಂಧಿಸಿದ ಎರಡು ಸಂಖ್ಯೆಗಳನ್ನು ಹಂಚಿಕೊಂಡಿದೆ. ಈ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ನೀವು ಬ್ಯಾಂಕಿನ ಹಲವು ವಿಶೇಷ ಸೌಲಭ್ಯಗಳ ಪ್ರಯೋಜನವನ್ನು ಪಡೆಯಬಹುದು. ನೀವು ಮನೆಯಲ್ಲಿ ಕುಳಿತು 1800 1234 ಮತ್ತು 1800 2100 ಗೆ ಕರೆ ಮಾಡುವ ಮೂಲಕ ಬ್ಯಾಂಕ್‌ನ ಎಲ್ಲಾ ಸೌಲಭ್ಯಗಳ ಲಾಭವನ್ನು ಪಡೆಯಬಹುದು ಎಂದು ಬ್ಯಾಂಕ್ ತಿಳಿಸಿದೆ. 

ಏನಿದರ ವಿಶೇಷತೆ:
ವಾಸ್ತವವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಸೇವೆಯು 24*7 ಲಭ್ಯವಿದೆ. ಹಬ್ಬ ಹರಿದಿನಗಳಲ್ಲಿ ಗ್ರಾಹಕರ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ ಈ ಹೊಸ ಸಂಖ್ಯೆಗಳನ್ನು ಆರಂಭಿಸಿದ್ದು ರಜಾದಿನಗಳಲ್ಲಿಯೂ ಗ್ರಾಹಕರು ಬ್ಯಾಂಕಿನ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ- Petrol-Diesel Price : ಅಗ್ಗವಾಗಲಿದೆ ಪೆಟ್ರೋಲ್-ಡೀಸೆಲ್ ಬೆಲೆ : ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ!

ಎಸ್‌ಬಿಐ ಟೋಲ್ ಫ್ರೀ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಯಾವೆಲ್ಲಾ ಸೌಲಭ್ಯಗಳು ಲಭ್ಯವಾಗಲಿವೆ?
ಎಸ್‌ಬಿಐ ಹೊಸ ಟೋಲ್ ಫ್ರೀ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಗ್ರಾಹಕರು ಈ ಕೆಳಗಿನ ಮಾಹಿತಿಗಳನ್ನು ಪಡೆಯಬಹುದಾಗಿದೆ.
* ಅಕೌಂಟ್ ಬ್ಯಾಲೆನ್ಸ್ ಪರಿಶೀಲಿಸಬಹುದು.
* ಖಾತೆಯ ಕೊನೆಯ 5 ವಹಿವಾಟುಗಳ ಬಗ್ಗೆ ಮಾಹಿತಿ ಪಡೆಯಬಹುದು.
* ಎಟಿಎಂ ಕಾರ್ಡ್ ನಿರ್ಬಂಧಿಸಿ ಮತ್ತು ರವಾನೆ ಸ್ಥಿತಿಯನ್ನು
ಪರಿಶೀಲಿಸಿ
* ಚೆಕ್ ಬುಕ್ ಸ್ಥಿತಿಯನ್ನು ಪರಿಶೀಲಿಸಿ
* ಟಿಡಿಎಸ್ ವಿವರಗಳ ಪರಿಶೀಲನೆ.
* ಹಳೆಯ ಕಾರ್ಡ್ ಅನ್ನು ನಿರ್ಬಂಧಿಸಿದ ನಂತರ ಹೊಸ ಎಟಿಎಂ ಕಾರ್ಡ್ ಗಾಗಿ ವಿನಂತಿಯನ್ನೂ ಸಲ್ಲಿಸಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G

Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News