Senior Citizens Schemes : ಕೇಂದ್ರ ಸರ್ಕಾರ ತನ್ನ ನಾಗರಿಕರ ಆರ್ಥಿಕ ಸ್ಥಿರತೆಗಾಗಿ ಕಾಲಕಾಲಕ್ಕೆ ವಿವಿಧ ಯೋಜನೆಗಳನ್ನು ಪರಿಚಯಿಸುತ್ತಿದೆ. ಜನರ ಉಳಿತಾಯವನ್ನು ಹೆಚ್ಚಿಸಲು ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಲು ಅನೇಕ ಯೋಜನೆಗಳನ್ನು ಪರಿಚಯಿಸಲಾಗಿದೆ. ಇವುಗಳಲ್ಲಿ ಹಿರಿಯ ನಾಗರಿಕರ ಕಲ್ಯಾಣ ಯೋಜನೆಗಳು ಸೇರಿವೆ. 


COMMERCIAL BREAK
SCROLL TO CONTINUE READING

ದೇಶದ ಹಿರಿಯ ನಾಗರಿಕರ ಆರ್ಥಿಕ ಭದ್ರತೆಗಾಗಿ ಸರ್ಕಾರ ಹಲವಾರು ಪಿಂಚಣಿ ಯೋಜನೆಗಳನ್ನು ನೀಡುತ್ತದೆ. ನಿವೃತ್ತ ಹಿರಿಯ ನಾಗರಿಕರೂ ಈ ಯೋಜನೆಯ ಲಾಭ ಪಡೆಯುತ್ತಾರೆ. ಹಿರಿಯ ನಾಗರಿಕರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೆಲವು ವಿಶೇಷ ಪಿಂಚಣಿ ಯೋಜನೆಗಳ ಮಾಹಿತಿ ಇಲ್ಲಿದೆ. 


ಇದನ್ನೂ ಓದಿ : ನಿಮ್ಮ ಬಳಿಯೂ ಹರಿದ, ಹಾನಿಗೊಳಗಾದ ನೋಟ್ ಇದೆಯೇ? ಈ ರೀತಿ ಬದಲಾಯಿಸಿ


ಅಟಲ್ ಪಿಂಚಣಿ ಯೋಜನೆ :
ಎಲ್ಲಾ ಭಾರತೀಯರ, ವಿಶೇಷವಾಗಿ ಬಡವರು ಮತ್ತು ಹಿಂದುಳಿದವರ ಆರ್ಥಿಕ ಭದ್ರತೆಗಾಗಿ ಭಾರತ ಸರ್ಕಾರವು 2015 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿ, 18 ರಿಂದ 40 ವರ್ಷದೊಳಗಿನವರು  ತಮ್ಮ ಹಣವನ್ನು ಠೇವಣಿ ಮಾಡಬಹುದು. 60 ವರ್ಷ ಪೂರ್ಣಗೊಂಡ ನಂತರ, ಅವರಿಗೆ 1,000 ರೂ.ನಿಂದ 5,000 ರೂ.ವರೆಗೆ ಪಿಂಚಣಿ ನೀಡಲಾಗುತ್ತದೆ.


ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ :
ರಾಷ್ಟ್ರೀಯ ಪಿಂಚಣಿ ಯೋಜನೆಯಡಿ, 18 ರಿಂದ 70 ವರ್ಷ ವಯಸ್ಸಿನ ಭಾರತೀಯ ನಾಗರಿಕರು ಹಣವನ್ನು ಠೇವಣಿ ಮಾಡಬಹುದು. 60 ವರ್ಷಗಳು ಪೂರ್ಣಗೊಂಡ ನಂತರ,  ಹೂಡಿಕೆಯ ಒಟ್ಟು ಮೊತ್ತದ ನಗದು ಮತ್ತು ಮಾಸಿಕ ಪಿಂಚಣಿ ಪಡೆಯುತ್ತಾನೆ. ಈ ಯೋಜನೆಯಡಿಯಲ್ಲಿ10,000 ರೂ.ವರೆಗೆ ಮಾಸಿಕ ಪಿಂಚಣಿ ಸಿಗುತ್ತದೆ. 


ಇದನ್ನೂ ಓದಿ : ಮೋದಿ ಸರ್ಕಾರ ನೀಡುವ ಸಬ್ಸಿಡಿ ಪಡೆದು ಈ ಉದ್ಯಮ ಆರಂಭಿಸಿ, ಲಕ್ಷಾಂತರ ಆದಾಯ ಗಳಿಸಿ!


ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ :
ಕೇಂದ್ರ ಸರಕಾರದ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಮಾಸಿಕ 200 ರಿಂದ 500 ರೂ.ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಇದಲ್ಲದೇ ಈ ಯೋಜನೆಯಲ್ಲಿ ದಾಖಲಿಸಿಕೊಂಡ ವ್ಯಕ್ತಿ ಮರಣ ಹೊಂದಿದಲ್ಲಿ ಕುಟುಂಬಕ್ಕೆ ಒಂದು ಬಾರಿ 20,000 ರೂ. ನೀಡಲಾಗುವುದು. 


ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ :
ಕೇಂದ್ರ ಸರ್ಕಾರದ ಈ ಯೋಜನೆಯಡಿ 70 ರಿಂದ 79 ವರ್ಷದೊಳಗಿನ ಪಿಪಿಎಲ್ ವರ್ಗಕ್ಕೆ ಸೇರಿದ ಹಿರಿಯ ನಾಗರಿಕರಿಗೆ ಮಾಸಿಕ 200 ರೂ. ಪಿಂಚಣಿ ನೀಡಲಾಗುತ್ತದೆ. 80 ವರ್ಷ ಪೂರ್ಣಗೊಂಡ ನಂತರ ಈ ಪಿಂಚಣಿ ತಿಂಗಳಿಗೆ 500 ರೂ. ಆಗುವುದು. 


ಇದನ್ನೂ ಓದಿ : ಬ್ಯಾಂಕ್ ಸಾಲ ಪಾವತಿಸದಿದ್ದಲ್ಲಿ ದಂಡ ವಿಧಿಸುವಂತಿಲ್ಲ! ಆರ್‌ಬಿಐ ಹೊಸ ನಿಯಮ


ಹಿರಿಯ ನಾಗರಿಕರಿಗೆ ಮತ್ತೊಂದು ಪ್ರಮುಖ ಸಂದೇಶ:
ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಅನೇಕ ವಿಶೇಷ ಸೌಲಭ್ಯಗಳನ್ನು ನೀಡುತ್ತವೆ. ಈಗ ಆಗಸ್ಟ್ ತಿಂಗಳಿನಲ್ಲಿ ಹಿರಿಯ ನಾಗರಿಕರಿಗೆ ಮತ್ತೊಂದು ಸಂತಸದ ಸುದ್ದಿಯಿದೆ. ಅನೇಕ ಬ್ಯಾಂಕುಗಳು ಆಗಸ್ಟ್‌ನಲ್ಲಿ ಬಡ್ಡಿದರಗಳನ್ನು ಬದಲಾಯಿಸಿವೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು 9% ವರೆಗೆ ಬಡ್ಡಿಯನ್ನು ಪಡೆಯುತ್ತಾರೆ. 


ಈ ನಡುವೆ ಕೋಟ್ಯಂತರ ಜನರಿಗೆ ಆರ್‌ಬಿಐ ಭಾರೀ ಪರಿಹಾರ ನೀಡಿದೆ. ಆರ್‌ಬಿಐ ಸಾಲದ ಖಾತೆಗಳ ಮೇಲಿನ ದಂಡ ಮತ್ತು ಬಡ್ಡಿದರಗಳ ನಿಯಮಗಳನ್ನು ಬದಲಾಯಿಸಿದೆ. ಸಾಲದ ಖಾತೆಗಳ ಮೇಲೆ ದಂಡವನ್ನು ವಿಧಿಸುವುದನ್ನು ಕೇಂದ್ರ ಬ್ಯಾಂಕ್ ನಿಷೇಧಿಸಿದೆ. ಇದರೊಂದಿಗೆ ಮುಂದಿನ ವರ್ಷದಿಂದ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲಾಗುವುದು ಎಂದು ಆರ್‌ಬಿಐ ತಿಳಿಸಿದೆ. ಆರ್‌ಬಿಐನ ಈ ಹೊಸ ನಿಯಮ ಎಲ್ಲಾ ಬ್ಯಾಂಕ್‌ಗಳಿಗೂ ಅನ್ವಯಿಸುತ್ತದೆ. ಹೊಸ ನಿಯಮಗಳು ವಾಣಿಜ್ಯ, ಎನ್‌ಬಿಎಫ್‌ಸಿ, ಸಹಕಾರಿ ಬ್ಯಾಂಕ್, ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್, ನಬಾರ್ಡ್, ಎಸ್‌ಐಡಿಬಿಐ ಮುಂತಾದ ಎಲ್ಲಾ ಬ್ಯಾಂಕ್‌ಗಳಿಗೆ ಅನ್ವಯಿಸುತ್ತವೆ.


ಇದನ್ನೂ ಓದಿ : ಇಂದಿನ ಅಡಿಕೆ ಧಾರಣೆ: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ