Railway Budget 2023: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಅನೇಕ ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ. ಈ ಬಾರಿ ಭಾರತೀಯ ರೈಲ್ವೇಗೆ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ರೈಲ್ವೆ ಇಲಾಖೆಗೆ 9 ಪಟ್ಟು ಹೆಚ್ಚು ಅನುದಾನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಪ್ರಯಾಣಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗಲಿವೆ. ಸರಕಾರ ರೈಲ್ವೆಗೆ 2.40 ಲಕ್ಷ ಕೋಟಿ ರೂ. ಮೀಸಲಿಟ್ಟಿದೆ. 


COMMERCIAL BREAK
SCROLL TO CONTINUE READING

ಎಲ್ಲಾ ರೀತಿಯ ಯೋಜನೆಗಳ ಮೇಲೆ ಕಾರ್ಯ : 
ರೈಲ್ವೆಗೆ ನಿಗದಿಪಡಿಸಿದ ಈ ಮೊತ್ತದ ಅಡಿಯಲ್ಲಿ, ಎಲ್ಲಾ ರೀತಿಯ ಯೋಜನೆಗಳ ಮೇಲೆ ಕಾರ್ಯ ಮಾಡಲಾಗುವುದು. 2013-14 ನೇ ಸಾಲಿಗೆ ಹೋಲಿಸಿದರೆ, ರೈಲ್ವೆಯ ಈ ಬಜೆಟ್ ಸುಮಾರು 9 ಪಟ್ಟು ಹೆಚ್ಚಾಗಿದೆ.  ಇದು ಈವರೆಗಿನ ಅತಿ ದೊಡ್ಡ ಹಂಚಿಕೆಯಾಗಿದೆ. 


ಇದನ್ನೂ ಓದಿ : Budget 2023 Updates: ಉಚಿತ ಪಡಿತರ ವಿತರಣೆ ಯೋಜನೆ ವಿಸ್ತರಣೆ ಸೇರಿದಂತೆ 5 ಪ್ರಮುಖ ಘೋಷಣೆಗಳು


100 ಹೊಸ ಯೋಜನೆಗಳನ್ನು ಆರಂಭ :
ರೈಲ್ವೆಯ 100 ಹೊಸ ಯೋಜನೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಹೊಸ ಯೋಜನೆಗಳಿಗೆ 75 ಕೋಟಿ ರೂ. ಯನ್ನು ಘೋಷಿಸಿದ್ದಾರೆ. ಪ್ರಯಾಣಿಕರ ಪ್ರಯಾಣ ಸುಲಭಗೊಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.


ಹಣಕಾಸು ಸಚಿವರು ಮಂಡಿಸುತ್ತಿರುವ 5 ನೇ ಬಜೆಟ್ :
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಮಂಡಿಸುತ್ತಿರುವ ಐದನೆ ಬಜೆಟ್ ಇದಾಗಿದೆ. ಸಾರ್ವತ್ರಿಕ ಚುನಾವಣೆಗೂ ಮುನ್ನ ಮಂಡಿಸುತ್ತಿರುವ ಸರ್ಕಾರದ ಕೊನೆಯ ಪೂರ್ಣ ಬಜೆಟ್. ಮೋದಿ ಸರ್ಕಾರದ ಎರಡನೇ ಅವಧಿಯು ಕೊನೆಯ ಪೂರ್ಣ ಬಜೆಟ್. 2024ರ ಲೋಕಸಭೆ ಚುನಾವಣೆಗೂ ಮುನ್ನ ಈ ಬಜೆಟ್ ಅನ್ನು ಅತ್ಯಂತ ಮಹತ್ವದ್ದಾಗಿ ಪರಿಗಣಿಸಲಾಗುತ್ತಿದೆ.  


ಇದನ್ನೂ ಓದಿ :budget 2023 : ಬಜೆಟ್‌ನಲ್ಲಿ ರೈತರಿಗೆ ಭರ್ಜರಿ ಗಿಫ್ಟ್! ಅನ್ನ ಯೋಜನೆ ಘೋಷಿಸಿದ ವಿತ್ತ ಮಂತ್ರಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.