Budget 2023 : ಬಜೆಟ್‌ಗೂ ಮುನ್ನವೇ ದುಬಾರಿಯಾದ ಈ ಕಾರುಗಳು .!

Budget 2023 in kannada : ಬಜೆಟ್ ಮಂಡನೆಗೆ ಮುಂಚೆಯೇ, ಅನೇಕ ಕಾರುಗಳ ಬೆಲೆ ಹೆಚ್ಚಾಗಿದೆ. ಕಳೆದ ಜನವರಿ ತಿಂಗಳಿನಲ್ಲಿ ಹಲವು ಕಾರು ತಯಾರಕರು ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದರು.

Written by - Ranjitha R K | Last Updated : Feb 1, 2023, 11:51 AM IST
Budget 2023  : ಬಜೆಟ್‌ಗೂ ಮುನ್ನವೇ ದುಬಾರಿಯಾದ ಈ ಕಾರುಗಳು .!  title=

Budget 2023 : ಇಂದು ಕೇಂದ್ರ ಬಜೆಟ್ 2023 ಮಂಡನೆ ದಿನ.  ಬಜೆಟ್ ಮಂಡನೆ ನಂತರ ಅನೇಕ ವಸ್ತುಗಳು ಅಗ್ಗವಾಗಬಹುದು ಅಥವಾ ದುಬಾರಿಯಾಗಬಹುದು. ಆದರೆ, ಬಜೆಟ್ ಮಂಡನೆಗೆ ಮುಂಚೆಯೇ, ಅನೇಕ ಕಾರುಗಳ ಬೆಲೆ ಹೆಚ್ಚಾಗಿದೆ. ಕಳೆದ ಜನವರಿ ತಿಂಗಳಿನಲ್ಲಿ ಹಲವು ಕಾರು ತಯಾರಕರು ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದರು. 

ದುಬಾರಿಯಾಯಿತು ಈ ಕಾರುಗಳು :
-- ಹ್ಯುಂಡೈ ಮೋಟಾರ್ ಇಂಡಿಯಾ i20 ಹ್ಯಾಚ್‌ಬ್ಯಾಕ್ ಮಾದರಿ ಶ್ರೇಣಿಯ ಬೆಲೆಗಳನ್ನು  21,500 ರೂ.ವರೆಗೆ ಹೆಚ್ಚಿಸಿದೆ.  ಈ ಬೆಲೆ ಹೆಚ್ಚಳದ ನಂತರ, ಹ್ಯಾಚ್‌ಬ್ಯಾಕ್ ಬೆಲೆ 7.18 ಲಕ್ಷದಿಂದ 10.91 ಲಕ್ಷದವರೆಗೆ ಏರಿಕೆಯಾಗಿದೆ. 

ಇದನ್ನೂ ಓದಿ : Budget 2023: ಬಜೆಟ್ ಮಂಡನೆಗೂ ಮುನ್ನ ಷೇರು ಮಾರುಕಟ್ಟೆಯಲ್ಲಿ ಭಾರಿ ಹಲ್ ಚಲ್!

- ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್ ಎಸ್‌ಯುವಿ ಬೆಲೆಗಳು 85,000 ರೂ  ವರೆಗೆ ಹೆಚ್ಚಾಗಿದೆ. ಈಗ, ಅದರ S ಮತ್ತು S11 ರೂಪಾಂತರಗಳು ಕ್ರಮವಾಗಿ 12.84 ಲಕ್ಷ ಮತ್ತು 16.14 ಲಕ್ಷ ನಡುವೆ ಗ್ರಾಹಕರಿಗೆ ಲಭ್ಯವಾಗುತ್ತದೆ. 

-- ಮಹೀಂದ್ರಾ XUV700 ಬೆಲೆಯನ್ನು 64,000 ರೂ.ವರೆಗೆ ಹೆಚ್ಚಿಸಲಾಗಿದೆ. SUV ಮಾದರಿಯ ಶ್ರೇಣಿಯು ಪ್ರಸ್ತುತ 23 ರೂಪಾಂತರಗಳಲ್ಲಿ (ಪೆಟ್ರೋಲ್ ಮತ್ತು ಡೀಸೆಲ್) MX ಮತ್ತು AX ಎಂಬ ಎರಡು ಸರಣಿಗಳಲ್ಲಿ ಲಭ್ಯವಿದೆ. ಬೆಲೆ ಏರಿಕೆ ನಂತರ ಕಾರಿನ ಬೆಲೆ  13.45 ಲಕ್ಷದಿಂದ 25.48 ಲಕ್ಷ ರೂ.ವರೆಗೆ ಇರಲಿದೆ. 

ಇದನ್ನೂ ಓದಿ : ‌Budget 2023 : ಬಜೆಟ್‌ ಮಂಡನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉಟ್ಟ ಈ ಸೀರೆಯ ವಿಶೇಷತೆ ಏನು?

ಟಾಟಾ ಮೋಟಾರ್ಸ್ ತನ್ನ ICE ಪ್ರಯಾಣಿಕ ವಾಹನಗಳ ಬೆಲೆಯಲ್ಲಿ ಹೆಚ್ಚಳವನ್ನು ಘೋಷಿಸಿದೆ. ಬೆಲೆ ಏರಿಕೆ ಫೆಬ್ರವರಿ 1 ರಿಂದಲೇ ಅನ್ವಯವಾಗಲಿದೆ. ಕಂಪನಿಯು ಬೆಲೆಗಳನ್ನು ಶೇಕಡಾ 1.2 ರಷ್ಟು ಹೆಚ್ಚಿಸಿದೆ. ಕಂಪನಿಯು Tiago, Altroz, Tigor, Punch, Nexon, Harrier ಮತ್ತು Safari ನಂತಹ ಕಾರುಗಳನ್ನು ಮಾರಾಟ ಮಾಡುತ್ತದೆ.

ಮಾರುತಿ ಸುಜುಕಿ ಇತ್ತೀಚೆಗೆ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಅದರ ಮಾದರಿ ಶ್ರೇಣಿಯ ಬೆಲೆಗಳು ಸುಮಾರು 1.1 ಪ್ರತಿಶತದಷ್ಟು ಹೆಚ್ಚಾಗಿದೆ.  ಇದನ್ನು ಜನವರಿ 16, 2023 ರಿಂದ ಜಾರಿಗೆ ತರಲಾಗಿದೆ. ಆಲ್ಟೊ, ವ್ಯಾಗನಾರ್, ಬಲೆನೊದಂತಹ ಜನಪ್ರಿಯ ಕಾರುಗಳು ದುಬಾರಿಯಾಗಿವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News