Ration Card Update : ನಿಮ್ಮಲ್ಲೂ ಪಡಿತರ ಚೀಟಿ ಇದ್ದು, ಸರ್ಕಾರದ ಉಚಿತ ಪಡಿತರ ಯೋಜನೆಯ ಲಾಭ ಪಡೆಯುತ್ತಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. 269 ​​ಜಿಲ್ಲೆಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಫೋರ್ಟಿಫೈಡ್ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಮಾರ್ಚ್, 2024 ರ ಗಡುವಿನ ಮೊದಲು ದೇಶದ ಉಳಿದ ಜಿಲ್ಲೆಗಳಿಗೂ ಈ ಸೌಲಭ್ಯವನ್ನು ವಿತರಿಸಲಾಗುವುದು. ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಈ ಮಾಹಿತಿಯನ್ನು  ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಅಕ್ಟೋಬರ್ 2021 ರಲ್ಲಿ ಈ ಯೋಜನೆ ಪ್ರಾರಂಭ : 
2024 ರ ವೇಳೆಗೆ ಸರ್ಕಾರದ ಯೋಜನೆಗಳ ಮೂಲಕ ದೇಶದಾದ್ಯಂತ ಸಾರವರ್ಧಿತ ಅಕ್ಕಿಯನ್ನು ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು 2021 ರಲ್ಲಿ ಪ್ರಧಾನಿ ಮೋದಿ ಹೇಳಿದ್ದರು. ಮಕ್ಕಳು ಮತ್ತು ಮಹಿಳೆಯರಲ್ಲಿ ರಕ್ತಹೀನತೆಯ ಸಮಸ್ಯೆಯನ್ನು ಹೋಗಲಾಡಿಸಲು, ಮೈಕ್ರೋನ್ಯೂಟ್ರಿಯಂಟ್‌ಗಳನ್ನು ಒಳಗೊಂಡಿರುವ ಸಾರವರ್ಧಿತ ಅಕ್ಕಿ ವಿತರಣೆಯ ಯೋಜನೆಯನ್ನು ಹಂತ ಹಂತವಾಗಿ ಅಕ್ಟೋಬರ್ 2021 ರಲ್ಲಿ ಪ್ರಾರಂಭಿಸಲಾಯಿತು.


ಇದನ್ನೂ ಓದಿ : Bike Sales: ಮಾರಾಟದಲ್ಲಿ ದಾಖಲೆ ಬರೆದ ಈ ಬೈಕ್ ಮೇಲೆ ಹೆಚ್ಚಿದ ಕ್ರೇಜ್!


ಉತ್ತಮ ಫಲಿತಾಂಶ ನೀಡಿದ ಯೋಜನೆ :


ಕೇಂದ್ರ ಸರ್ಕಾರದ ವಿಶಿಷ್ಟ ಮತ್ತು ಯಶಸ್ವಿ ಉಪಕ್ರಮವಾದ  ಸಾರವರ್ಧಿತ ಅಕ್ಕಿ ವಿತರಣೆಯನ್ನು ಕಳೆದ ಎರಡು ಹಂತಗಳಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ. 'ಕೇಂದ್ರ ಸರ್ಕಾರದ ವಿಶಿಷ್ಟ ಹಾಗೂ ಅತ್ಯಂತ ಯಶಸ್ವಿ ಉಪಕ್ರಮ ಇದಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಉತ್ತಮ ಫಲಿತಾಂಶ ನೀಡಿದೆ. ಸಾರ್ವಜನಿಕರಿಂದಲೂ  ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  


269 ಜಿಲ್ಲೆಗಳಲ್ಲಿ  ವಿತರಣೆ ಆರಂಭ :


ಅವರು, 'ನಾವು ಇದುವರೆಗೆ 269 ಜಿಲ್ಲೆಗಳಲ್ಲಿ ಪಿಡಿಎಸ್ ಮೂಲಕ ಸಾರವರ್ಧಿತ ಅಕ್ಕಿ ವಿತರಣೆಯನ್ನು ಪ್ರಾರಂಭಿಸಲಾಗಿದೆ. ಇದೀಗ ಉಳಿದ ಜಿಲ್ಲೆಗಳಿಗೂ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು. ದೇಶದಲ್ಲಿ ಸುಮಾರು 735 ಜಿಲ್ಲೆಗಳಿದ್ದು, ಈ ಪೈಕಿ ಶೇ.80ಕ್ಕೂ ಹೆಚ್ಚು ಜನರು ಅನ್ನವನ್ನೇ ಅವಲಂಬಿಸಿದ್ದಾರೆ. ಸದ್ಯಕ್ಕೆ ಈ ಅಕ್ಕಿಯ ಉತ್ಪಾದನಾ ಸಾಮರ್ಥ್ಯ ಸುಮಾರು 17 ಲಕ್ಷ ಟನ್‌ಗಳಷ್ಟಿರುವುದರಿಂದ ದೇಶದಲ್ಲಿ ಸಾಕಷ್ಟು ಸಾರವರ್ಧಿತ ಅಕ್ಕಿ ಇದೆ ಎಂದು ಚೋಪ್ರಾ ಹೇಳಿದ್ದಾರೆ.  


ಇದನ್ನೂ ಓದಿ :  CNG-PNG ಬೆಲೆ ಕುರಿತು ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.