Currency Note: ₹2000 ನೋಟಿನ ಬಗ್ಗೆ ಮಹತ್ವದ ಘೋಷಣೆ.. ವಿತ್ತ ಸಚಿವರು ನೀಡಿದ್ರು ಬಿಗ್‌ ಅಪ್‌ಡೇಟ್‌!

2000 Rupees Note News: ನಿಮ್ಮ ಬಳಿಯೂ 2000 ರೂಪಾಯಿ ನೋಟು ಇದ್ದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ನೋಟು ಅಮಾನ್ಯೀಕರಣದ ಸುಮಾರು 6 ವರ್ಷಗಳ ನಂತರ, ಕರೆನ್ಸಿ ನೋಟುಗಳ ಬಗ್ಗೆ ಕೇಂದ್ರ ಸರ್ಕಾರದಿಂದ ಇಂತಹ ಸುದ್ದಿ ಬಂದಿದೆ. 

Written by - Chetana Devarmani | Last Updated : Apr 6, 2023, 06:50 PM IST
  • ನಿಮ್ಮ ಬಳಿಯೂ 2000 ರೂಪಾಯಿ ನೋಟು ಇದೇಯಾ?
  • Currency Note: ₹2000 ನೋಟಿನ ಬಗ್ಗೆ ಮಹತ್ವದ ಘೋಷಣೆ
  • ವಿತ್ತ ಸಚಿವರು ನೀಡಿದ್ರು ಬಿಗ್‌ ಅಪ್‌ಡೇಟ್‌!
Currency Note: ₹2000 ನೋಟಿನ ಬಗ್ಗೆ ಮಹತ್ವದ ಘೋಷಣೆ.. ವಿತ್ತ ಸಚಿವರು ನೀಡಿದ್ರು ಬಿಗ್‌ ಅಪ್‌ಡೇಟ್‌!  title=

2000 Rupees Note News: ಇತ್ತೀಚಿನ ದಿನಗಳಲ್ಲಿ 2000 ರೂಪಾಯಿ ನೋಟಿನ ಚರ್ಚೆ ಎಲ್ಲೆಡೆ ಕಂಡು ಬರುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ನೋಟುಗಳು ಗಣನೀಯವಾಗಿ ಕಡಿಮೆಯಾಗಿದೆ. 2000 ರೂಪಾಯಿ ನೋಟುಗಳ ಬಗ್ಗೆ ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ ಏನಾದರೂ ಆದೇಶ ನೀಡಿದೆಯೇ? ಈ ಬಗ್ಗೆ ಸ್ವತಃ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ದೊಡ್ಡ ಮಾಹಿತಿ ಬಹಿರಂಗಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳ ಎಟಿಎಂಗಳಿಂದ 2000 ರೂಪಾಯಿಗಳ ಬದಲಿಗೆ 500 ಮತ್ತು 200 ರೂಪಾಯಿಗಳ ನೋಟುಗಳು ಬರುತ್ತಿರುವುದು ಕಂಡು ಬರುತ್ತಿದೆ. 2000 ರೂಪಾಯಿ ನೋಟುಗಳನ್ನು ಮಾರುಕಟ್ಟೆಯಿಂದ ತೆಗೆಯಲು ಸರ್ಕಾರ ಮುಂದಾಗಿದೆಯೇ? ಈ ವಿಚಾರ ಸಂಸತ್ತಿನಲ್ಲಿ ಪ್ರಸ್ತಾಪವಾಗಿದೆ. ಲೋಕಸಭೆಯಲ್ಲಿ ಸಂಸದ ಸಂತೋಷ್ ಕುಮಾರ್ ಅವರು ಹಣಕಾಸು ಸಚಿವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಸ್ವತಃ ಹಣಕಾಸು ಸಚಿವರೇ ಉತ್ತರ ನೀಡಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ: ಮಾಜಿ ಶಾಸಕರ ಟಿಕೆಟ್ ರೇಸ್ ನಲ್ಲಿ ಗೆದ್ದ ಎ. ಆರ್. ಕೃಷ್ಣಮೂರ್ತಿ

ಆರ್‌ಬಿಐ ವಾರ್ಷಿಕ ವರದಿಯ ಪ್ರಕಾರ, ಮಾರ್ಚ್ 2017 ಮತ್ತು ಮಾರ್ಚ್ 2022 ರ ಅಂತ್ಯದ ವೇಳೆಗೆ 500 ಮತ್ತು 2000 ರೂ ನೋಟುಗಳ ಒಟ್ಟು ಮೌಲ್ಯ ಕ್ರಮವಾಗಿ 9.512 ಲಕ್ಷ ಕೋಟಿ ಮತ್ತು 27.057 ಲಕ್ಷ ಕೋಟಿ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬಹಿರಂಗಪಡಿಸಿದ್ದಾರೆ.

ಇದರೊಂದಿಗೆ, ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳಿಗೆ ಅಂತಹ ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಯಾವ ಮುಖಬೆಲೆಯ ನೋಟನ್ನು ಯಾವಾಗ ಸೇರಿಸಬೇಕು ಎಂಬುದನ್ನು ಬ್ಯಾಂಕ್ ಸ್ವತಃ ನಿರ್ಧರಿಸುತ್ತದೆ. ಇದರೊಂದಿಗೆ ಆರ್‌ಬಿಐ ವಾರ್ಷಿಕ ವರದಿ ಪ್ರಕಾರ 2019-20ನೇ ಸಾಲಿನಿಂದ 2000 ರೂಪಾಯಿ ನೋಟು ಮುದ್ರಿಸಿಲ್ಲ ಎಂದು ಹಣಕಾಸು ಸಚಿವರು ಹೇಳಿದ್ದಾರೆ. 

ಇದನ್ನೂ ಓದಿ : ಚಿನ್ನಾಭರಣ ಖರೀದಿಸಲು ಹೊರಟಿದ್ದೀರಾ? ಜಾರಿಗೆ ಬಂದಿರುವ ಹೊಸ ನಿಯಮಗಳು ನಿಮಗೂ ತಿಳಿದಿರಲಿ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News