CNG-PNG ಬೆಲೆ ಕುರಿತು ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!

Modi Cabinet Decisions: CNG ಮತ್ತು ಪೈಪ್-ಸರಬರಾಜು ಮಾಡಲಾಗುವ ಗ್ಯಾಸ್ ಅಂದರೆ PNG ಬೆಲೆಗಳನ್ನು ನಿಯಂತ್ರಿಸಲು ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.  

Written by - Nitin Tabib | Last Updated : Apr 6, 2023, 10:34 PM IST
  • ದೇಶೀಯ ಅನಿಲದ ಬೆಲೆಯನ್ನು ಇದೀಗ ಅಂತಾರಾಷ್ಟ್ರೀಯ ಹಬ್ ಗ್ಯಾಸ್ ಬದಲಿಗೆ ಆಮದು ಮಾಡಿಕೊಂಡ ಕಚ್ಚಾ ತೈಲದೊಂದಿಗೆ ಜೋಡಿಸಲಾಗಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
  • ದೇಶೀಯ ಅನಿಲದ ಬೆಲೆ ಇದೀಗ ಭಾರತೀಯ ಕಚ್ಚಾ ಬ್ಯಾಸ್ಕೆಟ್‌ನ ಅಂತರರಾಷ್ಟ್ರೀಯ ಬೆಲೆಯ ಶೇ. 10 ರಷ್ಟಾಗಿರಲಿದೆ ಮತ್ತು ಇದನ್ನು ಈಗ ಆರು ತಿಂಗಳ ಬದಲಿಗೆ ಪ್ರತಿ ತಿಂಗಳಿಗೆ ಪರಿಷ್ಕರಿಸಲಾಗುವುದು ಎಂದು ಅವರು ಹೇಳಿದ್ದಾರೆ.
CNG-PNG ಬೆಲೆ ಕುರಿತು ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ! title=
ಸಿಎನ್ಜಿ-ಪಿಎನ್ಜಿ ಕುರಿತು ಕೇಂದ್ರ ಸಚಿವ ಸಂಪುಟದ ಮಹತ್ವದ ನಿರ್ಧಾರ

Modi Cabinet Decisions: CNG ಮತ್ತು ಪೈಪ್-ಸರಬರಾಜು ಗ್ಯಾಸ್  ಅಂದರೆ PNG ಬೆಲೆಗಳನ್ನು ನಿಯಂತ್ರಿಸಲು ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಸಂಪುಟ ಸಭೆಯ ಬಳಿಕ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಈ ಮಾಹಿತಿ ನೀಡಿದ್ದಾರೆ. ಪ್ರಧಾನಿ ಮೋದಿ  ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಅನಿಲ ಬೆಲೆಯ ಹೊಸ ಸೂತ್ರಕ್ಕೆ ಅನುಮೋದನೆಯನ್ನು ನೀಡಲಾಗಿದ್ದು, ಸಿಎನ್‌ಜಿ ಮತ್ತು ಪೈಪ್-ಸರಬರಾಜು ಗ್ಯಾಸ್ ಬೆಲೆಗಳ ಮೇಲಿನ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ದೇಶೀಯ ಅನಿಲದ ಬೆಲೆಯನ್ನು ಇದೀಗ  ಅಂತಾರಾಷ್ಟ್ರೀಯ ಹಬ್ ಗ್ಯಾಸ್ ಬದಲಿಗೆ ಆಮದು ಮಾಡಿಕೊಂಡ ಕಚ್ಚಾ ತೈಲದೊಂದಿಗೆ ಜೋಡಿಸಲಾಗಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. ದೇಶೀಯ ಅನಿಲದ ಬೆಲೆ ಇದೀಗ ಭಾರತೀಯ ಕಚ್ಚಾ ಬ್ಯಾಸ್ಕೆಟ್‌ನ ಅಂತರರಾಷ್ಟ್ರೀಯ ಬೆಲೆಯ ಶೇ. 10 ರಷ್ಟಾಗಿರಲಿದೆ  ಮತ್ತು ಇದನ್ನು ಈಗ ಆರು ತಿಂಗಳ ಬದಲಿಗೆ ಪ್ರತಿ ತಿಂಗಳಿಗೆ ಪರಿಷ್ಕರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಎಪಿಎಂ ಗ್ಯಾಸ್‌ಗೆ ಪ್ರತಿ ಎಂಎಂಬಿಟಿಯುಗೆ 4 ಡಾಲರ್ ಮೂಲ ಬೆಲೆಯನ್ನು ಅನುಮೋದಿಸಲಾಗಿದೆ, ಆದರೆ ಗರಿಷ್ಠ ಬೆಲೆಯನ್ನು ಎಂಎಂಬಿಟಿಯುಗೆ $ 6.5 ಕ್ಕೆ ಅನುಮೋದಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ-'ಕೈ' ಬಿಟ್ಟು 'ಕಮಲ' ಹಿಡಿದ ಎ.ಕೆ. ಆಂಟನಿ ಪುತ್ರ, 'ನಿರ್ಧಾರ ಸರಿಯಲ್ಲ, ನೋವು ತಂದಿದೆ' ಎಂದ ತಂದೆ

ಎಂಪಿಎಂ ಗ್ಯಾಸ್ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಅಥವಾ ಹಳೆಯ ಕ್ಷೇತ್ರಗಳಿಂದ ಉತ್ಪತ್ತಿಯಾಗುವ ನೈಸರ್ಗಿಕ ಅನಿಲವನ್ನು ಇದೀಗ  ಯುಎಸ್, ಕೆನಡಾ ಮತ್ತು ರಷ್ಯಾದಂತಹ ದೇಶಗಳ ಕಚ್ಚಾ ತೈಲ ಬೆಲೆಗಳಿಗೆ ಲಿಂಕ್ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮೊದಲು ಅವುಗಳ ಬೆಲೆಯನ್ನು ಗ್ಯಾಸ್ ಬೆಲೆಗಳ ಆಧಾರದ ಮೇಲೆ ನಿಗದಿಪಡಿಸಲಾಗುತ್ತಿತ್ತು ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ. 

ಇದನ್ನೂ ಓದಿ-OMG! ಕುಡಿದ ಮತ್ತಿನಲ್ಲಿ ಓರ್ವ ಯುವಕ ಮತ್ತೊರ್ವ ಯುವಕನ ಜೊತೆಗೆ ವಿವಾಹವಾದ... ಮುಂದೇನಾಯ್ತು ತಿಳಿಯಲು ಸುದ್ದಿ ಓದಿ

ಈ ನಿರ್ಧಾರದ ನಂತರ, ಏಪ್ರಿಲ್ 1 ರಿಂದ, MPM ಅನಿಲದ ಬೆಲೆಯು ಭಾರತೀಯ ಬುಟ್ಟಿಯಲ್ಲಿ ಕಚ್ಚಾ ತೈಲದ ಬೆಲೆಯ ಶೇ. 10 ರಷ್ಟು ಇರಲಿದೆ. ಆದಾಗ್ಯೂ, ಈ ಬೆಲೆ ಪ್ರತಿ ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್‌ಗಳಿಗೆ (MMBtu) $ 6.5 ಮೀರುವುದಿಲ್ಲ. ಪ್ರಸ್ತುತ ಗ್ಯಾಸ್ ಬೆಲೆ ಪ್ರತಿ mmbtu ಗೆ $8.57 ಆಗಿದೆ. ಇನ್ಮುಂದೆ ಪ್ರತಿ ತಿಂಗಳಿಗೆ ಈ ಬೆಲೆಗಳನ್ನು ಪರಿಷ್ಕರಿಸಲಾಗುವುದು ಎನ್ನಲಾಗಿದೆ, ಆದರೆ ಇದುವರೆಗೆ ಅವುಗಳನ್ನು ವರ್ಷಕ್ಕೆ ಎರಡು ಬಾರಿ ಮಾತ್ರ ಪರಿಷ್ಕರಿಸಲಾಗುತ್ತಿತ್ತು ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News