2021ರ ಆರಂಭದಲ್ಲಿ ಮಾರುಕಟ್ಟೆಗೆ ಹೊಸ ಫೋನ್ಗಳು ಕಾಲಿಟ್ಟಿವೆ. ಹಾಗಾಗಿ ಕಳೆದ ವರ್ಷ ಬಿಡುಗಡೆಯಾದ ಹಳೆಯ ಸ್ಮಾರ್ಟ್ಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಹಾಗಾದ್ರೆ ಯಾವ ಕಂಪೆನಿಯ ಸ್ಮಾರ್ಟ್ಫೋನ್ಗಳ ಬೆಲೆ ಎಷ್ಟು ಇಳಿಕೆಯಾಗಿದೆ? ಮಾಹಿತಿ ಇಲ್ಲಿದೆ.


COMMERCIAL BREAK
SCROLL TO CONTINUE READING

Moto Edge+: ಮೊಟೊರೊಲಾ ಕಂಪೆನಿ ಕಳೆದ ವರ್ಷ ಮೊಟೊ ಎಡ್ಜ್ + ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಇದು ಪಂಚ್‌ ಹೋಲ್‌ ಡಿಸ್‌ಪ್ಲೇ ವಿನ್ಯಾಸವನ್ನ ಹೊಂದಿದೆ. ಇದಲ್ಲದೆ ಉತ್ತಮ ಮಲ್ಟಿಮೀಡಿಯಾ ಅನುಭವವನ್ನು ನೀಡಲು ಮೊಟೊರೊಲಾ ವೇವ್ಸ್ ಟ್ಯೂನ್ ಮಾಡಿದ ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳನ್ನು ಸಹ ನಿಡಿತ್ತು. ಮುಖ್ಯ ಕ್ಯಾಮೆರಾ(Camera) 108 ಮೆಗಾಪಿಕ್ಸೆಲ್ ಸೆನ್ಸಾರ್‌ f/ 1.8 ಲೆನ್ಸ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಒಳಗೊಂಡಿದೆ. ಎರಡನೇ ಕ್ಯಾಮೆರಾ 16 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್ ಅನ್ನು ಹೊಂದಿದ್ದು, ಇದು 117 ಡಿಗ್ರಿಗಳಷ್ಟು ವೀಕ್ಷಣಾ ಕ್ಷೇತ್ರವನ್ನು ಹೊಂದಿದೆ. ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಟೆಲಿಫೋಟೋ ಶೂಟರ್ ಹಾಗೂ ನಾಲ್ಕನೇ ಕ್ಯಾಮೆರಾ ಟೈಂ ಆಪ್‌ ಲೈಟ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 25 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.


OnePlus 9R : ಒನ್ ಪ್ಲಸ್ ಲಾಂಚ್ ಮಾಡುತ್ತಿದೆ ಅಗ್ಗದ ಸೂಪರ್ ಸ್ಮಾರ್ಟ್ ಫೋನ್..!


ಈ ಸ್ಮಾರ್ಟ್‌ಫೋನ್‌ 5,000WAA ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು 18W ಟರ್ಬೊಪವರ್ ವೈರ್ಡ್ ಚಾರ್ಜಿಂಗ್(Charging), 18W ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ವಾಯರ್‌ಲೆಸ್‌ ರಿವರ್ಸ್ ಪವರ್ ಹಂಚಿಕೆಯನ್ನು ಬೆಂಬಲಿಸುತ್ತದೆ. ಆರಂಭದಲ್ಲಿ 94,999 ರೂ. ಇದ್ದ ಇದರ ಬೆಲೆ ಈಗ ಮಾರುಕಟ್ಟೆಯಲ್ಲಿ 74,999 ರೂ. ಗೆ ಲಭ್ಯವಿದೆ.


LG Wing: ಎಲ್ಜಿ ಸಂಸ್ಥೆ ಡ್ಯುಯೆಲ್ ಸ್ಕ್ರೀನ್ ಅಳವಡಿಸಿರುವ LG ವಿಂಗ್ ಹೆಸರಿನ ಸ್ಮಾರ್ಟ್ಫೋನ್(Smartphones) ಉತ್ಪಾದಿಸಿ ಯಶಸ್ವಿಯಾಗಿದೆ. ಸ್ಮಾರ್ಟ್ಫೋನ್ನ ಟಾಪ್-ಎಂಡ್ ಸ್ಪೇಸ್ ನೀಡಲಾಗಿದ್ದು, ಮೈನ್ಸ್ಕ್ರೀನ್ ಮತ್ತು ಸೆಕೆಂಡ್ ಸ್ಕ್ರೀನ್ ನೀಡಲಾಗಿದೆ. ಹಾಗಾಗಿ ಇದನ್ನು ಗಡಿಯಾರ ತಿರುಗಿದಂತೆ ತಿರುಗಿಸಬಹುದಾಗಿದೆ. ಅದರ ಜೊತೆಗೆ ಪಾಪ್ ಅಪ್ ಸೆಲ್ಫಿ ಮತ್ತು ಗಿಂಬಲ್ ಮೋಡ್ ಕ್ಯಾಮೆರಾವನ್ನು ಸ್ಮಾರ್ಟ್ಫೋನಿನ ಹಿಂಭಾಗದಲ್ಲಿ ಜೋಡಿಸಲಾಗಿದೆ. ಆ್ಯಂಡ್ರಾಯ್ಡ್ 10 ಬೆಂಬಲವನ್ನು ಪಡೆದಿರುವ ಈ ಸ್ಮಾರ್ಟ್ಫೋನ್ 4,000mAh ಬ್ಯಾಟರಿ ಅಳವಡಿಸಲಾಗಿದೆ. 25 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಮತ್ತು 10 ವ್ಯಾಟ್ ವೈರ್ಲೆಸ್ ಚಾರ್ಜಿಂಗ್ ಸಪೋರ್ಟ್ ಹೊಂದಿದೆ. 69,990 ರೂಪಾಯಿ ಇದ್ದ ಇದರ ಬೆಲೆ ಈಗ 10,000 ಕಡಿತಗೊಳಿಸಿ 59,990 ರೂ.ಗೆ ಮಾರಾಟ ಮಾಡುತ್ತಿದೆ.


Vi WiFi calling Service : ಸಿಗ್ನಲ್ ಇಲ್ಲದೆಯೂ ಪೋನ್ ಮಾಡಬಹುದು..!


OnePlus 8 Pro: 8GB RAM ಜೊತೆಗೆ 128GB ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಒನ್ ಪ್ಲಸ್ 8 ಪ್ರೋ ಮೊಬೈಲ್(Mobile) ನ ದರವನ್ನು ಆರಂಭದಲ್ಲಿ 54,999 ರೂಪಾಯಿಗಳಿಗೆ ನಿಗದಿಪಡಿಸಲಾಗಿತ್ತು, ಆದರೆ, ಈಗ ಇದು 50,999 ರೂ.ಗೆ ಲಭ್ಯವಿದೆ. 6.78 ಇಂಚ್ ಕ್ಯೂ ಹೆಚ್ ಡಿ ಫ್ಲ್ಯೂಯಿಡ್ ಡಿಸ್ಪ್ಲೇ 120 ಹೆಚ್ ಜೆಡ್ ರಿಫ್ರೆಷ್ ರೇಟ್ ನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ಗೆ ಸ್ಞಾಪ್ ಡ್ರಾಗನ್865 ಚಿಪ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ X 555 ಜಿ ಮಾಡ್ರನ್ ಆರ್ ಎಫ್ ಸಿಸ್ಟಮ್ ನ್ನು ಹೊಂದಿದೆ.


BSNL ಹೊಸ ಪ್ಲಾನ್ ; ಭರ್ಜರಿ ರಿಯಾಯಿತಿ ಜೊತೆಗೆ ಸಿಗಲಿದೆ ಫುಲ್ entertainment


OnePlus 8T: ಮಿತವ್ಯಯದ ದರಕ್ಕೆ ಅತ್ಯುನ್ನತ ದರ್ಜೆಯ ಸ್ಮಾರ್ಟ್ ಫೋನ್‌ ನೀಡುವುದಕ್ಕೆ ಹೆಸರುವಾಸಿಯಾದ ಒನ್‌ ಪ್ಲಸ್‌(OnePlus) ಕಂಪೆನಿ ತನ್ನ ಹೊಸ ಮಾದರಿ ಒನ್ ಪ್ಲಸ್‌‌ 8ಟಿ ಫೋನನ್ನು ಮೊದಲಿಗೆ 42,999 ರೂ. ಗೆ ಮಾರಾಟ ಮಾಡುತ್ತಿತ್ತು. ಸದ್ಯ ಇದರ ಬೆಲೆ ಕಡಿತಗೊಂಡಿದ್ದು, ಮಾರುಕಟ್ಟೆಯಲ್ಲಿ 39,999 ರೂ.ಗೆ ಲಭ್ಯವಿದೆ. ಇದು ಅತ್ಯುನ್ನತ ದರ್ಜೆಯ ಸ್ನಾಪ್‌ಡ್ರಾಗನ್‌ 865 ಪ್ರೊಸೆಸರ್‌ ಹೊಂದಿದೆ. ಈ ಮೊಬೈಲ್‌ನ ವಿಶೇಷವೆಂದರೆ 65 ವ್ಯಾಟ್‌ನ ಅತ್ಯಂತ ವೇಗದ ಚಾರ್ಜರ್‌. ಕೇವಲ 39 ನಿಮಿಷದಲ್ಲಿ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್‌ ಆಗುತ್ತದೆ. ಇದು ನಾಲ್ಕು ಲೆನ್ಸಿನ ಹಿಂಬದಿ ಕ್ಯಾಮರಾ ಹೊಂದಿದೆ. 49 ಮೆಗಾ ಪಿಕ್ಸಲ್‌ ಪ್ರಾಥಮಿಕ ಸೆನ್ಸರ್‌, 16 ಮೆ.ಪಿ. ವೈಡ್‌ ಆಂಗಲ್‌ ಲೆನ್ಸ್ , 5 ಮೆ.ಪಿ. ಮ್ಯಾಕ್ರೋ ಲೆನ್ಸ್ ಹಾಗೂ 2 ಮೆ.ಪಿ. ಮೊನೊಕ್ರೋಮ್‌ ಸೆನ್ಸರ್‌ ಹೊಂದಿದೆ. 16 ಮೆ.ಪಿ. ಸೆಲ್ಫಿ ಕ್ಯಾಮೆರಾ ಹೊಂದಿದೆ.


PUB-G New State Launched: ಗೂಗಲ್ ಪ್ಲೇ ಸ್ಟೋರ್‌ನಲ್ಲಿ PUB-G New State ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿವರ


Xiaomi Mi 10: ಶವೋಮಿ ಎಂಐ 10 ಹಿಂಬದಿಯಲ್ಲಿ ನಾಲ್ಕು ಕ್ಯಾಮರಾ ವ್ಯವಸ್ಥೆಯಿದೆ. ಜತೆಗೆ 108 ಮೆಗಾಪಿಕ್ಸೆಲ್ ಕ್ಯಾಮರಾ ಎನ್ನುವುದು ವಿಶೇಷ. 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾ, 13 ಮೆಗಾಪಿಕ್ಸೆಲ್‌ ಮತ್ತು 2+2 ಮೆಗಾಪಿಕ್ಸೆಲ್‌ ಕ್ಯಾಮರಾ ಎಂಐ 10 ಫೋನ್‌ನಲ್ಲಿದೆ. ಜತೆಗೆ 20 ಮೆಗಾಪಿಕ್ಸೆಲ್ ಸೆಲ್ಫಿಯೂ ಇದರಲ್ಲಿದೆ. ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 865 SoC ಇದರ ವಿಶೇಷತೆಯಾಗಿದೆ. ಶವೋಮಿ ಎಂಐ 10 ಫೋನ್ 6.67 ಇಂಚಿನ ಫುಲ್‌ ಎಚ್‌ಡಿ+ ಅಮೊಲಿಡ್ ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್ ಹೊಂದಿದೆ. 4,780mAh ಬ್ಯಾಟರಿ ಮತ್ತು 30W ಚಾರ್ಜಿಂಗ್ ಬೆಂಬಲವಿದೆ. ಶವೋಮಿ(Xiaomi) ಎಂಐ 10 ಪ್ರೊ 6.67 ಇಂಚಿನ HDR10+ AMOLED ಡಿಸ್‌ಪ್ಲೇ ಹೊಂದಿದೆ. 4,500mAh ಬ್ಯಾಟರಿ, 50W ಚಾರ್ಜಿಂಗ್ ಬೆಂಬಲ ಹೊಂದಿದೆ. ಆರಂಭದಲ್ಲಿ ಇದರ ಬೆಲೆ 49,999 ರೂ. ಇತ್ತು. ಸದ್ಯ ಇದು ಮಾರುಕಟ್ಟೆಯಲ್ಲಿ 44,999 ರೂ. ಗೆ ಲಭ್ಯವಿದೆ.


PUB-G New State Launched: ಗೂಗಲ್ ಪ್ಲೇ ಸ್ಟೋರ್‌ನಲ್ಲಿ PUB-G New State ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿವರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.