ನವದೆಹಲಿ : ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಈಗ ತನ್ನ ಒಟಿಟಿ ಪ್ಲಾಟ್‌ಫಾರ್ಮ್ (OTT) ಅನ್ನು ಜನಪ್ರಿಯಗೊಳಿಸುವ ಭರ್ಜರಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಮತ್ತೊಂದು ವಿಶೇಷವೆಂದರೆ, ಈ ಯೋಜನೆಯಲ್ಲಿ ಭಾರಿ ರಿಯಾಯಿತಿ ಕೂಡಾ ನೀಡುತ್ತಿದೆ.
BSNL YuppTVಯಿಂದ ಭಾರೀ ಆಫರ್ :
ಬಿಎಸ್ಎನ್ಎಲ್ ತನ್ನ ಹೊಸ YuppTV ಅಪ್ಲಿಕೇಶನ್ ಅನ್ನು ಜನಪ್ರಿಯಗೊಳಿಸುವ ಸಲುವಾಗಿ ಹೊಸ ಆಫರ್ ನೀಡುತ್ತಿದೆ.. ಬಿಎಸ್‌ಎನ್‌ಎಲ್‌ನ (BSNL) ಅಧಿಕೃತ ವೆಬ್‌ಸೈಟ್‌ನ (Website) ಪ್ರಕಾರ, ನೀವು ಈಗ ಬಿಎಸ್‌ಎನ್‌ಎಲ್ YuppTV ಚಂದಾದಾರಿಕೆ 199 ರ ಬದಲು ತಿಂಗಳಿಗೆ 129 ರೂಪಾಯಿಗೆ ಸಿಗಲಿದೆ.
ಇದನ್ನೂ ಓದಿ : PUB-G New State Launched: ಗೂಗಲ್ ಪ್ಲೇ ಸ್ಟೋರ್‌ನಲ್ಲಿ PUB-G New State ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿವರ
ಉಚಿತವಾಗಿ ಸಿಗಲಿದೆ ಜನಪ್ರಿಯ ಒಟಿಟಿಗಳು:
ಮಾಹಿತಿಯ ಪ್ರಕಾರ, ಬಿಎಸ್‌ಎನ್‌ಎಲ್ YuppTV ಪ್ಯಾಕ್‌ನಲ್ಲಿ YuppTV Premimum, ZEE5 Premium, SonlyLIV Special ಮತ್ತು Vootನ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ.
BSNL YuppTVಯಲ್ಲಿ ಸಿಗಲಿದೆ ಉತ್ತಮ Content :
ಕಂಪನಿಯ ವೆಬ್‌ಸೈಟ್ ಪ್ರಕಾರ, ಈ ಹೊಸ ಯೋಜನೆಯಲ್ಲಿ, ಬಳಕೆದಾರರು 300 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, 8000 ಕ್ಕೂ ಹೆಚ್ಚು ಚಲನಚಿತ್ರಗಳು, 500 ಕ್ಕೂ ಹೆಚ್ಚು ಟಿವಿ ಕಾರ್ಯಕ್ರಮಗಳು ಮತ್ತು ಅನೇಕ ವೆಬ್ ಸರಣಿಗಳನ್ನು (Web series) ವೀಕ್ಷಿಸಬಹುದು. ಸರ್ಕಾರಿ ಟೆಲಿಕಾಂ ಕಂಪನಿಯು ಈ ದಿನಗಳಲ್ಲಿ ತನ್ನ ಗ್ರಾಹಕರಿಗೆ ಅನೇಕ ಉತ್ತಮ ಯೋಜನೆಗಳನ್ನು ನೀಡುತ್ತಿರುವುದು ಗಮನಾರ್ಹ. ಕಂಪನಿಯ ವೆಬ್‌ಸೈಟ್ ಪ್ರಕಾರ, ಮನೆಯ ಟಿವಿ ಮತ್ತು ಮೊಬೈಲ್‌ನಲ್ಲಿ(Mobile) ಈ ಹೊಸ ಒಟಿಟಿ ಪ್ಲಾಟ್‌ಫಾರ್ಮ್ ಅನ್ನು ಆಕ್ಸಸ್ ಮಾಡಿಕೊಳ್ಳಬಹುದು. ಇದಲ್ಲದೆ, ನಿಮ್ಮ ಲ್ಯಾಪ್‌ಟಾಪ್ (Laptop) ಮತ್ತು ಡೆಸ್ಕ್‌ಟಾಪ್‌ನಲ್ಲಿಯೂ ಆಕ್ಸಸ್ ಪಡೆಯಬಹುದು.
ಇದನ್ನೂ ಓದಿ : Dish TV ಭರ್ಜರಿ ಆಫರ್..! ತಿಂಗಳು ಪೂರ್ತಿ ಸಿಗಲಿದೆ Free Entertainment
ಸರ್ಕಾರಿ ಟೆಲಿಕಾಂ ಕಂಪನಿಯು ಈಗ ತನ್ನ ಬಳಕೆದಾರರನ್ನು ಒಟಿಟಿ (OTT) ಪ್ಲಾಟ್‌ಫಾರ್ಮ್‌ಗೆ ಆಕರ್ಷಿಸುವ ಸಲುವಾಗಿ ಹೊಸ ಹೊಸ ಯೋಜನೆಗಳನ್ನು ತರುತ್ತಿದೆ. ಕಂಪನಿಯ ಈ ವಿಶೇಷ ರಿಯಾಯಿತಿಯ ಲಾಭವನ್ನು ಮೊದಲ ಮೂರು ತಿಂಗಳವರೆಗೆ ಗ್ರಾಹಕರಿಗೆ ನೀಡಲಾಗುತ್ತಿದೆ. ಯೋಜನೆ ಮುಗಿದ ನಂತರ ಬಳಕೆದಾರರು ತಿಂಗಳಿಗೆ 199 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಬಿಎಸ್ಎನ್ಎಲ್ ಬಳಕೆದಾರ ಪ್ರಕಾರ Personalized Recomendations ಕೂಡಾ ನೀಡಲಾಗುತ್ತದೆ. ಬಳಕೆದಾರರ ಅಭಿರುಚಿಗೆ ಅನುಗುಣವಾಗಿ ಕಂಟೆಂಟ್ ನೀಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.