ನವದೆಹಲಿ: 10 ಲಕ್ಷದೊಳಗಿನ ವಾಹನಗಳ ವಿಭಾಗವು ವೇಗವಾಗಿ ಬೆಳೆಯುತ್ತಿದೆ. ಈ ಬಜೆಟ್‍ ಬೆಲೆಯಲ್ಲಿ ಕಂಪನಿಗಳು ಹೊಸ ವಾಹನಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಹಲವಾರು ಆಯ್ಕೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಕಾರುಗಳು ಈಗಾಗಲೇ ಸಖತ್ ಸೌಂಡ್ ಮಾಡುತ್ತಿವೆ. ಸರಿಯಾದ ಕಾರನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಗ್ರಾಹಕರ ಮನ ಗೆಲ್ಲುವ ಕೆಲವು ವಾಹನಗಳಿದ್ದರೂ ಯಾವುದೇ ಕಾರು ಪರಿಪೂರ್ಣವಲ್ಲ. ನೀವು ಸಹ 10 ಲಕ್ಷದೊಳಗಿನ ಉತ್ತಮ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ ನಿಮಗಾಗಿ 5 ಅತ್ಯುತ್ತಮ ಆಯ್ಕೆಗಳು ಇಲ್ಲಿವೆ. ಇಲ್ಲಿ ನಾವು SUV ಯಿಂದ ಸೆಡಾನ್ ಮತ್ತು 7 ಆಸನಗಳ ಆಯ್ಕೆಗಳ ಕಾರುಗಳ ಮಾಹಿತಿ ನೀಡಿದ್ದೇವೆ.   


COMMERCIAL BREAK
SCROLL TO CONTINUE READING

1. Tata Nexon


Tata Nexon ಕಾರು 10 ಲಕ್ಷಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಮಾತ್ರವಲ್ಲದೆ, ಇಡೀ ದೇಶದಲ್ಲಿ ಹೆಚ್ಚು ಮಾರಾಟವಾಗುವ SUV ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಬೆಲೆ 7.60 ಲಕ್ಷದಿಂದ ಪ್ರಾರಂಭವಾಗಿ 13.95 ಲಕ್ಷದವರೆಗೆ ಇದೆ. ಇದು 1.2-ಲೀಟರ್ ಟರ್ಬೊ-ಪೆಟ್ರೋಲ್ (120PS/170Nm) ಮತ್ತು 1.5-ಲೀಟರ್ ಟರ್ಬೊ-ಡೀಸೆಲ್ (110PS/260Nm) ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.


2. Maruti Brezza


Maruti Suzuki Brezza ಕಾರು 10 ಲಕ್ಷದೊಳಗೆ ಉತ್ತಮ ಆಯ್ಕೆಯಾಗಿದೆ. ಹೊಸ ಅವತಾರದಲ್ಲಿ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿರುವ Brezza ಈಗ ಸೊಗಸಾದವಾಗಿದೆ. ಇದು ಸುರಕ್ಷತೆಯಲ್ಲಿ 4 ಸ್ಟಾರ್ ರೇಟಿಂಗ್‌ನೊಂದಿಗೆ ಬರುತ್ತದೆ. ಇದರ ಬೆಲೆ 7.99 ಲಕ್ಷ ರೂ.ದಿಂದ ಪ್ರಾರಂಭವಾಗುತ್ತದೆ ಮತ್ತು 13.96 ಲಕ್ಷ ರೂ .(ಎಕ್ಸ್ ಶೋ ರೂಂ)ವರೆಗೆ ಬೆಲೆ ಇದೆ. ಇದು 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದರಲ್ಲಿ ನೀವು 20.15 kmpl ವರೆಗೆ ಮೈಲೇಜ್ ಪಡೆಯುತ್ತೀರಿ.


ಇದನ್ನೂ ಓದಿ: 8th Pay Commission: ಶೀಘ್ರದಲ್ಲಿಯೇ ಸರ್ಕಾರಿ ನೌಕರರ ವೇತನ ರೂ.50,000 ರಿಂದ ರೂ.95,000 ಏರಿಕೆ!


3. Mahindra Bolero Neo


7 ಆಸನಗಳ ವಾಹನಕ್ಕಾಗಿ ಹುಡುಕುತ್ತಿರುವ ಗ್ರಾಹಕರಿಗೆ Mahindra Bolero Neo ಉತ್ತಮ ಆಯ್ಕೆಯಾಗಿದೆ. ಈ ವಾಹನದಲ್ಲಿ ನೀವು SUV ಫೀಲ್ ಮತ್ತು ಉತ್ತಮ ಸ್ಥಳವನ್ನು ಪಡೆಯಲಿದ್ದೀರಿ. ಈ ವಾಹನದ ಬೆಲೆ 9.29 ಲಕ್ಷ ರೂ.ದಿಂದ 11.78 ಲಕ್ಷದವರೆಗೆ ಇದೆ. ಇದು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 100PS ಪವರ್ ಮತ್ತು 260Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.


4. Hyundai i20


ನೀವು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಹ್ಯಾಚ್‌ಬ್ಯಾಕ್ ಖರೀದಿಸ ಬಯಸಿದರೆ, Hyundai i20 ಉತ್ತಮ ಆಯ್ಕೆ. ಈ ವಾಹನದಲ್ಲಿ ನೀವು LED ಹೆಡ್‌ಲೈಟ್‌ಗಳು, Apple CarPlay ಮತ್ತು Android Auto ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಏರ್ ಪ್ಯೂರಿಫೈಯರ್ ಮತ್ತು ಸನ್‌ರೂಫ್‌ನಂತಹ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ಈ ಕಾರಿನ ಬೆಲೆ 7.03 ಲಕ್ಷ ರೂ.ನಿಂದ 11.54 ಲಕ್ಷ ರೂ. ಇದೆ.


5. Honda Amaze


Honda Amaze ಉತ್ತಮ ಸೆಡಾನ್ ಕಾರು. ಈ ಕಾರಿನ ಬೆಲೆ 6.63 ಲಕ್ಷ ರೂ.ನಿಂದ 11.50 ಲಕ್ಷ ರೂ. ಇದೆ. ಈ ವಾಹನವು 1.2 ಲೀಟರ್ ಪೆಟ್ರೋಲ್ (90PS/110Nm) ಮತ್ತು 1.5 ಲೀಟರ್ ಡೀಸೆಲ್ (100PS/200Nm) ಎಂಜಿನ್‌ಗಳನ್ನು ಹೊಂದಿದೆ. ಈ ವಾಹನವು ಮ್ಯಾನುವಲ್ ಮತ್ತು ಸಿವಿಟಿ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಸಹ ಹೊಂದಿದೆ.


ಇದನ್ನೂ ಓದಿ: Nitin Gadkari: ಹೂಡಿಕೆದಾರರಲ್ಲಿ ಭಾರಿ ಸಂತಸಕ್ಕೆ ಕಾರಣವಾದ ಕೇಂದ್ರ ಸಚಿವ ನಿತೀನ್ ಗಡ್ಕರಿ ಘೋಷಣೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.