8th Pay Commission: ಶೀಘ್ರದಲ್ಲಿಯೇ ಸರ್ಕಾರಿ ನೌಕರರ ವೇತನ ರೂ.50,000 ರಿಂದ ರೂ.95,000 ಏರಿಕೆ!

7th Pay Commission Update: 8ನೇ ವೇತನ ಆಯೋಗದ ಅಡಿ ಒಂದು ವೇಳೆ ಫಿಟ್ಮೆಂಟ್ ಫ್ಯಾಕ್ಟರ್ 3.68 ಪಟ್ಟು ಹೆಚ್ಚಾದರೆ, ಕನಿಷ್ಠ ವೇತನ ರೂ.26,000ಕ್ಕೆ ತಲುಪಲಿದೆ.  

Written by - Nitin Tabib | Last Updated : Aug 23, 2022, 05:48 PM IST
  • ಆಗಸ್ಟ್ ತಿಂಗಳಾಂತ್ಯ ಕೇಂದ್ರ ಸರ್ಕಾರಿ ನೌಕರರಿಗೆ ಉಡುಗೊರೆಗಳಿಂದ ತುಂಬಿರಲಿದೆ.
  • ಮಾಧ್ಯಮ ವರದಿಗಳ ಪ್ರಕಾರ ಆಗಸ್ಟ್ ನಲ್ಲಿ ಹೊಸ ಡಿಎ ಘೋಷಣೆಯ ಜೊತೆಗೆ
  • ಫಿಟ್ಮೆಂಟ್ ಅಂಶ ಹೆಚ್ಚಳವನ್ನು ಕೂಡ ಸರ್ಕಾರ ಪರಿಗಣಿಸುವ ಸಾಧ್ಯತೆ ಇದೆ
8th Pay Commission: ಶೀಘ್ರದಲ್ಲಿಯೇ ಸರ್ಕಾರಿ ನೌಕರರ ವೇತನ ರೂ.50,000 ರಿಂದ ರೂ.95,000 ಏರಿಕೆ!  title=
7th Pay Commission Update

7th Pay Commission Update: ಆಗಸ್ಟ್ ತಿಂಗಳಾಂತ್ಯ ಕೇಂದ್ರ ಸರ್ಕಾರಿ ನೌಕರರಿಗೆ ಉಡುಗೊರೆಗಳಿಂದ ತುಂಬಿರಲಿದೆ. ಮುಂದಿನ ತಿಂಗಳು ನೌಕರರು ತುಟ್ಟಿಭತ್ಯೆ, ಡಿಎ ಬಾಕಿ ಮತ್ತು ಫಿಟ್ಮೆಂಟ್ ಅಂಶದಂತಹ ಅನೇಕ ದೊಡ್ಡ ಉಡುಗೊರೆಗಳನ್ನು ಪಡೆಯುವ ಸಾಧ್ಯತೆ ಇದೆ. ಮಾಧ್ಯಮ ವರದಿಗಳ ಪ್ರಕಾರ ಆಗಸ್ಟ್ ನಲ್ಲಿ ಹೊಸ ಡಿಎ ಘೋಷಣೆಯ ಜೊತೆಗೆ ಫಿಟ್ಮೆಂಟ್ ಅಂಶ ಹೆಚ್ಚಳವನ್ನು ಕೂಡ ಸರ್ಕಾರ ಪರಿಗಣಿಸುವ ಸಾಧ್ಯತೆ ಇದೆ ಮತ್ತು ಇದು ಸೆಪ್ಟೆಂಬರ್ 1 ರಿಂದ ಜಾರಿಗೆ ತರಬಹುದು ಎನ್ನಲಾಗಿದೆ. ಆದರೆ, ಇದುವರೆಗೆ ಈ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.

ವಾಸ್ತವದಲ್ಲಿ, ಕೇಂದ್ರ ಸರ್ಕಾರಿ ನೌಕರರ ಮೂಲ ವೇತನವನ್ನು ನಿರ್ಧರಿಸುವಲ್ಲಿ ಫಿಟ್‌ಮೆಂಟ್ ಅಂಶ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪರಿಗಣಿಸಲಾಗಿದೆ. 7 ನೇ ವೇತನ ಆಯೋಗದಲ್ಲಿ ಸಿದ್ಧಪಡಿಸಲಾದ ವೇತನ ಮ್ಯಾಟ್ರಿಕ್ಸ್, ಫಿಟ್‌ಮೆಂಟ್ ಅಂಶವನ್ನು ಆಧರಿಸಿದೆ. ಅಂದರೆ ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ಪರಿಷ್ಕೃತ ಮೂಲ ವೇತನವನ್ನು ಹಳೆಯ ಮೂಲ ವೇತನದಿಂದ ಲೆಕ್ಕಹಾಕಲಾಗುತ್ತದೆ. ಇದರಿಂದಾಗಿ ಕೇಂದ್ರ ಸರ್ಕಾರಿ ನೌಕರರ ವೇತನ ಎರಡೂವರೆ ಪಟ್ಟು ಹೆಚ್ಚಿದೆ. ವೇತನ ಆಯೋಗದ ವರದಿಯಲ್ಲಿ ಫಿಟ್‌ಮೆಂಟ್ ಅಂಶವು ಪ್ರಮುಖ ಶಿಫಾರಸು ಆಗಿದ್ದು, ಅದರ ಆಧಾರದ ಮೇಲೆ ವೇತನ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ.

ಮಾಧ್ಯಮ ವರದಿಗಳ ಪ್ರಕಾರ, ಪ್ರಸ್ತುತ ಕೇಂದ್ರ ನೌಕರರು ಶೇ.2.57 ದರದಲ್ಲಿ ಫಿಟ್‌ಮೆಂಟ್ ಫ್ಯಾಕ್ಟರ್ ಪಡೆಯುತ್ತಿದ್ದಾರೆ. ಇದನ್ನು ಹೆಚ್ಚಿಸಲು ನೌಕರರ ಸಂಘಟನೆಗಳು ಬಹಳ ದಿನಗಳಿಂದ ಒತ್ತಾಯಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಫಿಟ್ ಮೆಂಟ್ ಫ್ಯಾಕ್ಟರ್ ಶೇ.3.68ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದಿಂದ ಇದಕ್ಕೆ ಒಂದು ವೇಳೆ ಅನುಮೋದನೆ ದೊರೆತಿದ್ದೇ ಆದಲ್ಲಿ, ನೌಕರರ ಕನಿಷ್ಠ ಮೂಲ ವೇತನ ಮೂಲವೇತನ 18,000 ರೂ.ನಿಂದ 26,000 ರೂ.ಗೆ ಏರಿಕೆಯಾಗಲಿದೆ. ಕಳೆದ ಬಾರಿ 2017ರಲ್ಲಿ ಪ್ರವೇಶ ಹಂತದ ಮೂಲ ವೇತನವನ್ನು ಮಾಸಿಕ 7,000 ರೂ.ನಿಂದ 18,000 ರೂ.ಗೆ ಹೆಚ್ಚಿಸಲಾಗಿದ್ದು, ಇದೀಗ ಮತ್ತೆ ಹೆಚ್ಚಾದರೆ ಅದು ನೇರವಾಗಿ 26,000ಕ್ಕೆ ತಲುಪಲಿದೆ.

ಇದನ್ನೂ ಓದಿ-Royal Enfield Himalayan 450 ಟೀಸರ್ ವಿಡಿಯೋ ಬಿಡುಗಡೆ, ವೈಶಿಷ್ಟ್ಯಗಳನ್ನು ತಿಳಿಯಲು ಸುದ್ದಿ ಓದಿ

ಮಾಧ್ಯಮ ವರದಿಗಳ ಪ್ರಕಾರ, ಆರನೇ ವೇತನ ಆಯೋಗದ ಅಡಿಯಲ್ಲಿ ಕನಿಷ್ಠ ವೇತನ ಶ್ರೇಣಿ 7,000 ರೂ. ಆಗಿತ್ತು. ಇದರಲ್ಲಿ ಫಿಟ್‌ಮೆಂಟ್ ಅಂಶವು 1.86 ಪಟ್ಟು ಮತ್ತು ಹೆಚ್ಚಳವು ಶೇ.54 ಆಗಿತ್ತು. 7 ನೇ ವೇತನ ಆಯೋಗದ ಅಡಿಯಲ್ಲಿ ಕನಿಷ್ಠ ವೇತನ ಶ್ರೇಣಿಯ ಫಿಟ್‌ಮೆಂಟ್ ಅಂಶ 2.57 ಪಟ್ಟು ಮತ್ತು ಶೇ. 14.29 ಹೆಚ್ಚಳದೊಂದಿಗೆ 18,000 ರೂ.ಗೆ ತಲುಪಿತ್ತು. ಇದೀಗ 8 ನೇ ವೇತನ ಆಯೋಗದ ಅಡಿಯಲ್ಲಿ ಫಿಟ್‌ಮೆಂಟ್ ಅಂಶವು 3.68 ಪಟ್ಟು ಆಗಿದ್ದರೆ, ಕನಿಷ್ಠ ವೇತನ ಶ್ರೇಣಿ 26,000 ಆಗಿರುತ್ತದೆ. ಉದಾಹರಣೆಗೆ, ಕೇಂದ್ರ ನೌಕರನ ಮೂಲ ವೇತನವು 18,000 ರೂ ಆಗಿದ್ದರೆ, ಭತ್ಯೆಗಳನ್ನು ಹೊರತುಪಡಿಸಿ ಅವರ ವೇತನವು 18,000 X 2.57 = ಲಾಭ 46,260 ಆಗಿರುತ್ತದೆ. 3.68 ರ ಪ್ರಕಾರ ವೇತನವು ರೂ 95,680 (26000 X 3.68 = 95,680) ಆಗಲಿದೆ. ಅಂದರೆ ವೇತನದಲ್ಲಿ ರೂ 49,420 ನೇರ ಹೆಚ್ಚಳ ಎಂದರ್ಥ.

ಇದನ್ನೂ ಓದಿ-ಸೆಪ್ಟೆಂಬರ್ ನಲ್ಲಿ 13 ದಿನ ಬ್ಯಾಂಕ್ ರಜೆ, ಏನೇ ಕೆಲಸಗಳಿದ್ದರೂ ಮೊದಲೇ ಪೂರೈಸಿಕೊಳ್ಳಿ

8ನೇ ವೇತನ ಆಯೋಗ ಜಾರಿಯಾಗಲಿದೆಯೇ?
ಕೇಂದ್ರ ಸರ್ಕಾರಿ ನೌಕರರು ಮತ್ತು ಪೆನ್ಷನ್ ಧಾರಕರ ಆಗಸ್ಟ್ ತಿಂಗಳಲ್ಲಿನ ಡಿಎ ಹೆಚ್ಚಳದ ವರದಿಗಳ ನಡುವೆಯೇ, 8 ನೇ ವೇತನ ಆಯೋಗದ ಕುರಿತು ಮಹತ್ವದ ಅಪ್ಡೇಟ್ ವೊಂದು ಇತ್ತೀಚೆಗಷ್ಟೇ ಪ್ರಕಟಗೊಂಡಿತ್ತು, ಮಾಧ್ಯಮ ವರದಿಗಳ ಪ್ರಕಾರ 7ನೇ ವೇತನ ಆಯೋಗದ ಬಳಿಕ 8ನೇ ವೇತನ ಆಯೋಗ ಜಾರಿಯಾಗುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಹೊಸ ವೇತನ ಆಯೋಗ ಜಾರಿಗೆ ತರಬಹುದು ಮತ್ತು ಜನವರಿ 1 2026 ರಿಂದ ಅದು ಅನ್ವಯಿಸಲಿದೆ ಎನ್ನಲಾಗಿದೆ. ಆದರೆ ಸರ್ಕಾರ ಮಾತ್ರ ಇದುವರೆಗೆ ಈ ಕುರಿತು ಯಾವುದೇ ಚಕಾರ ಎತ್ತಿಲ್ಲ ಎಂಬುದು ಇಲ್ಲಿ ಗಮನಾರ್ಹ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News