Nitin Gadkari: ಹೂಡಿಕೆದಾರರಲ್ಲಿ ಭಾರಿ ಸಂತಸಕ್ಕೆ ಕಾರಣವಾದ ಕೇಂದ್ರ ಸಚಿವ ನಿತೀನ್ ಗಡ್ಕರಿ ಘೋಷಣೆ

Nitin Gadkari: ಈ ಹೂಡಿಕೆಯ ಮಾದರಿ ಸಣ್ಣ ಹೂಡಿಕೆದಾರರು, ಕಡಿಮೆ ಮತ್ತು ಮಧ್ಯಮ ಆದಾಯ ಗುಂಪಿನ ಜನರಿಗಾಗಿ ಈ ಯೋಜನೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಹೇಳಿದ್ದಾರೆ. ಇದರ ಅಡಿ ಯೋಜನೆಗಳಿಗೆ ಬಂಡವಾಳ ಕ್ರೂಢೀಕಾರಣಕ್ಕಾಗಿ ಮುಂದಿನ ತಿಂಗಳು ಬಂಡವಾಳ ಮಾರುಕಟ್ಟೆಯನ್ನು ಸಂಪರ್ಕಿಸಲಾಗುವುದು ಎಂದು ಅವರು ಹೇಳಿದ್ದಾರೆ.   

Written by - Nitin Tabib | Last Updated : Aug 23, 2022, 08:08 PM IST
  • ದೇಶಾದ್ಯಂತ ಇರುವ ಸಣ್ಣ ಹೂಡಿಕೆದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ.
  • ದೇಶದ ರಸ್ತೆ ನಿರ್ಮಾಣ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಣ್ಣ ಹೂಡಿಕೆದಾರರಿಗೆ ಕೇಂದ್ರ ಸರ್ಕಾರ ಹೊಸ ಮಾದರಿಯನ್ನು ಜಾರಿಗೆ ತರುತ್ತಿದೆ.
  • ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
Nitin Gadkari: ಹೂಡಿಕೆದಾರರಲ್ಲಿ ಭಾರಿ ಸಂತಸಕ್ಕೆ ಕಾರಣವಾದ ಕೇಂದ್ರ ಸಚಿವ ನಿತೀನ್ ಗಡ್ಕರಿ ಘೋಷಣೆ title=
Nitin Gadkari

Nitin Gadkari: ದೇಶಾದ್ಯಂತ ಇರುವ ಸಣ್ಣ ಹೂಡಿಕೆದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ದೇಶದ ರಸ್ತೆ ನಿರ್ಮಾಣ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಣ್ಣ ಹೂಡಿಕೆದಾರರಿಗೆ ಕೇಂದ್ರ ಸರ್ಕಾರ ಹೊಸ ಮಾದರಿಯನ್ನು ಜಾರಿಗೆ ತರುತ್ತಿದೆ. ಈ ಕುರಿತು ಮಂಗಳವಾರ ಮಾಹಿತಿ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ, ಈ ಹೂಡಿಕೆ ಮಾದರಿಯು ಸಣ್ಣ ಹೂಡಿಕೆದಾರರು, ಕಡಿಮೆ ಮತ್ತು ಮಧ್ಯಮ ಆದಾಯದ ಗುಂಪಿನ ಜನರಿಗಾಗಿ ಇರಲಿದೆ ಎಂದಿದ್ದಾರೆ. ಇದರ ಅಡಿ ಯೋಜನೆಗಳಿಗೆ ಬಂಡವಾಳ ಕ್ರೂಢೀಕಾರಣಕ್ಕಾಗಿ ಮುಂದಿನ ತಿಂಗಳು ಬಂಡವಾಳ ಮಾರುಕಟ್ಟೆಯನ್ನು ಸಂಪರ್ಕಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕೇಂದ್ರ ಸಚಿವರು ಮಾಹಿತಿ ಏನು?
ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವರು, 'ಸಣ್ಣ ಹೂಡಿಕೆದಾರರು ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಹೊಸ ಮಾದರಿಯನ್ನು ಸಿದ್ಧಪಡಿಸುತ್ತಿದ್ದೇವೆ. ಚಿಲ್ಲರೆ ಹೂಡಿಕೆದಾರರು ಹೂಡಿಕೆ ಮಾಡಲು ನಾವು ಶೀಘ್ರದಲ್ಲೇ ಇನ್ವಿಟ್‌ಗಳನ್ನು ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಿದ್ದೇವೆ. ಶೇ.7 ರಿಂದ ಶೇ.8 ರಷ್ಟು ಖಚಿತವಾದ ಮಾಸಿಕ ಆದಾಯದೊಂದಿಗೆ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಡ ಮತ್ತು ಮಧ್ಯಮ ವರ್ಗದ ಜನರು ಸೇರಿದಂತೆ ಸಾಮಾನ್ಯ ಜನರಿಗೆ ನಾವು ಅವಕಾಶವನ್ನು ಕಲ್ಪಿಸಲಿದ್ದೇವೆ' ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-LPG Cylinder: ಕೇವಲ ರೂ.750ಕ್ಕೆ ಸಿಗಲಿದೆ ಅಡುಗೆ ಅನಿಲ ಸಿಲಿಂಡರ್! ಹೇಗೆ ಅಂತೀರಾ?

ಸಣ್ಣ ಹೂಡಿಕೆದಾರರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ
ಇದರಲ್ಲಿ ಚಿಲ್ಲರೆ ಹೂಡಿಕೆದಾರರಿಗೆ ಹೂಡಿಕೆಯ ಮಿತಿ 10 ಲಕ್ಷ ರೂಪಾಯಿಗಳಾಗಿರುತ್ತದೆ, ಆದರೆ ಹೂಡಿಕೆಯ ಮೇಲೆ ಶೇ.7-ಶೇ.8 ರಷ್ಟು ಖಚಿತವಾದ ಲಾಭ ಸಿಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಆರಂಭದಲ್ಲಿ ನಾಲ್ಕು ರಸ್ತೆ ಯೋಜನೆಗಳಿಗೆ ಹೂಡಿಕೆ ಅವಕಾಶವಿರುತ್ತದೆ. ಠೇವಣಿಗಳ ಮೇಲಿನ ಬ್ಯಾಂಕ್ ಬಡ್ಡಿದರ ಕಡಿಮೆಯಾಗುತ್ತಿರುವ ಬಗ್ಗೆ ಮಾತನಾಡಿರುವ ನಿತೀನ್ ಗಡ್ಕರಿ. ಸರ್ಕಾರದ ಈ ಮಾದರಿಯಿಂದ ಸಣ್ಣ ಹೂಡಿಕೆದಾರರು ಮತ್ತು ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಲಾಭವಾಗಲಿದೆ. ಬ್ಯಾಂಕ್‌ಗಳು ಠೇವಣಿಗಳ ಮೇಲಿನ ಬಡ್ಡಿಯನ್ನು ಕಡಿತಗೊಳಿಸಿರುವುದರಿಂದ ನಿವೃತ್ತಿ ಹೊಂದಿದವರಿಗೆ ಇದು ಸಮಸ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-8th Pay Commission: ಶೀಘ್ರದಲ್ಲಿಯೇ ಸರ್ಕಾರಿ ನೌಕರರ ವೇತನ ರೂ.50,000 ರಿಂದ ರೂ.95,000 ಏರಿಕೆ!

ರಾಷ್ಟ್ರೀಯ ಹೆದ್ದಾರಿಗಳ ಜಾಲ ವಿಸ್ತರಣೆ
ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಜಾಲ ವಿಸ್ತರಣೆ ಕುರಿತು ಮಾತಬ್ನಾದಿರುವ ನಿತಿನ್ ಗಡ್ಕರಿ, ದೇಶಕ್ಕೆ ರಾಷ್ಟ್ರೀಯ ಹೆದ್ದಾರಿಗಳ ಜಾಲ ವಿಸ್ತರಣೆಗೆ ಇದು ಸಕಾಲವಾಗಿದ್ದು, ಈ ವಿಸ್ತರಣೆಯನ್ನು 2024ರ ಅಂತ್ಯದೊಳಗೆ 2 ಲಕ್ಷ ಕಿ.ಮೀ.ಗೆ ಕೊಂಡೊಯ್ಯಲಾಗುವುದು ಎಂದಿದ್ದಾರೆ. ದೇಶದಲ್ಲಿ ಶೇ.90ರಷ್ಟು ಪ್ರಯಾಣಿಕರ ದಟ್ಟಣೆ ರಸ್ತೆಗಳಲ್ಲೇ ಇದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಬಿಲ್ಡ್ ಆಪರೇಟ್ ಟ್ರಾನ್ಸ್‌ಫರ್, ಹೈಬ್ರಿಡ್ ಆನ್ಯುಟಿ ಮಾಡೆಲ್, ಇಂಜಿನಿಯರಿಂಗ್ ಪ್ರೊಕ್ಯೂರ್‌ಮೆಂಟ್ ಮತ್ತು ಕನ್‌ಸ್ಟ್ರಕ್ಷನ್ ಮತ್ತು ಟೋಲ್ ಆಪರೇಟ್ ಟ್ರಾನ್ಸ್‌ಫರ್ ಮಾದರಿಯನ್ನು ಒಳಗೊಂಡಿರುವ ರಸ್ತೆ ಯೋಜನೆಗಳ ನಿರ್ಮಾಣದ ವಿವಿಧ ಮಾದರಿಗಳ ಕುರಿತು ಅವರು ಮಾತನಾಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News