ನವದೆಹಲಿ: ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ದುಬಾರಿ ತೈಲದಿಂದ ಗ್ರಾಹಕರು ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಮುಖ ಮಾಡಿದ್ದಾರೆ. ಮಾರುಕಟ್ಟೆಗೆ ವಿವಿಧ ಶ್ರೇಣಿಗಳೊಂದಿಗೆ ಅನೇಕ ಎಲೆಕ್ಟ್ರಿಕ್ ಸ್ಕೂಟರ್‌ಗಳು ಲಗ್ಗೆ ಇಟ್ಟಿವೆ. ಇವುಗಳು ಶ್ರೇಣಿಯಲ್ಲಿಯೂ ಉತ್ತಮವಾಗಿವೆ. ನೀವೂ ಸಹ ಹೊಸ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಚಿಸುತ್ತಿದ್ದರೆ ಇಲ್ಲಿದೆ ಖುಷಿ ಸುದ್ದಿ. ನಾವು ಇಂದು ನಿಮಗೆ 80 ಸಾವಿರ ರೂ. ಬಜೆಟ್‌ನಲ್ಲಿ ಲಭ್ಯವಿರುವ 5 ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ತಿಳಿಸಲಿದ್ದೇವೆ. ವಿಶೇಷವೆಂದರೆ ಈ ಸ್ಕೂಟರ್ ಗಳು ನೋಟದಲ್ಲಿ ಸ್ಟೈಲಿಶ್ ಆಗಿದ್ದು, 121 ಕಿ.ಮೀ. ವರೆಗೆ ಮೈಲೇಜ್ ನೀಡುತ್ತವೆ.  


COMMERCIAL BREAK
SCROLL TO CONTINUE READING

1. ಹೀರೋ ಫೋಟಾನ್ (Hero Photon)


ಹೀರೋದ ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ರೂ 80,790 (ಎಕ್ಸ್ ಶೋ ರೂಂ). ಇದು 1.8kWh ಬ್ಯಾಟರಿ ಹೊಂದಿದ್ದು, ಪೂರ್ಣ ಚಾರ್ಜ್‌ನಲ್ಲಿ 90 ಕಿಮೀ ವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 45 ಕಿಮೀ. ಆಗಿದೆ. ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮಿಶ್ರಲೋಹದ ಚಕ್ರಗಳು, ಪೋರ್ಟಬಲ್ ಬ್ಯಾಟರಿ, ರಿಮೋಟ್ ಲಾಕ್ ಮತ್ತು ಆಂಟಿ-ಥೆಫ್ಟ್ ಅಲಾರಂನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.


ಇದನ್ನೂ ಓದಿ: ವಾಟ್ಸಾಪ್​ನಲ್ಲಿ SBI ಬ್ಯಾಂಕಿಂಗ್ ಸೇವೆ : ಅಕೌಂಟ್ ಬ್ಯಾಲೆನ್ಸ್, ಮಿನಿ ಸ್ಟೇಟ್‌ಮೆಂಟ್ ಪರಿಶೀಲಿ


2. ಆಂಪಿಯರ್ ಮ್ಯಾಗ್ನಸ್ ಇಎಕ್ಸ್(Ampere Magnus EX)


ಈ ಎಲೆಕ್ಟ್ರಿಕ್ ಸ್ಕೂಟರ್‍ನ ಮಾರಾಟವು ಇತ್ತೀಚೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭವಾಗಿದೆ. ಸ್ಕೂಟರ್ ಬೆಲೆ 77,249 ರೂ. (ಎಕ್ಸ್ ಶೋ ರೂಂ). ಒಂದು ಸರಿ ಪೂರ್ಣ ಚಾರ್ಜ್ ಮಾಡಿದರೆ 121 ಕಿ.ಮೀ ಕ್ರಮಿಸುತ್ತದೆ. ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 55 ಕಿಮೀ. ಇದು ಕೀಲೆಸ್ ಎಂಟ್ರಿ, ವೆಹಿಕಲ್ ಫೈಂಡರ್, ಆಂಟಿ-ಥೆಫ್ಟ್ ಅಲಾರ್ಮ್ ಸಿಸ್ಟಮ್, ಉತ್ತಮ ರೈಡರ್ ಸೌಕರ್ಯಕ್ಕಾಗಿ ವಿಶಾಲವಾದ ಸೀಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.


3. ಬೌನ್ಸ್ ಇನ್ಫಿನಿಟಿ(Bounce Infinity)


ಬೌನ್ಸ್ ಇನ್ಫಿನಿಟಿ ಸ್ಕೂಟರ್ ಪೂರ್ಣ ಚಾರ್ಜ್‌ನಲ್ಲಿ 60 ಕಿ.ಮೀ.ವರೆಗೆ ಕ್ರಮಿಸುತ್ತದೆ. ಇದು 2kWh ಬ್ಯಾಟರಿ ಹೊಂದಿದ್ದು, ಇದರ ಮೂಲಕ ಗಂಟೆಗೆ 65 ಕಿ.ಮೀ. ಗರಿಷ್ಠ ವೇಗ ಲಭ್ಯವಿದೆ. ವಿಶೇಷವೆಂದರೆ ನೀವು ಬ್ಯಾಟರಿ ಇಲ್ಲದೆಯೇ ಸ್ಕೂಟರ್ ಖರೀದಿಸಬಹುದು. ಇದರ ಬೆಲೆ 70,499 ರೂ. (ದೆಹಲಿಯ ಎಕ್ಸ್ ಶೋ ರೂಂ) ಆಗಿದೆ.


ಇದನ್ನೂ ಓದಿ: Post Office ಗ್ರಾಹಕರಿಗೆ ಸಿಹಿ ಸುದ್ದಿ : ಕೇವಲ ₹1500 ಠೇವಣಿ ಮಾಡಿದ್ರೆ 35 ಲಕ್ಷ ಲಾಭ 


4. ಪ್ಯೂರ್ EV ಎಟ್ರಾನ್ಸ್+( Pure EV Etrance+)


ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ 76,999 (ಎಕ್ಸ್ ಶೋ ರೂಂ) ರೂ. ಇದು 1.8kWh ಬ್ಯಾಟರಿ ಹೊಂದಿದ್ದು, ಪೂರ್ಣ ಚಾರ್ಜ್‌ನಲ್ಲಿ 85 ಕಿಮೀ ವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 25 ಕಿಮೀ. ಆಗಿದೆ.


5. ಬೆನ್ಲಿಂಗ್ ಔರಾ (Benling Aura)


ಪೂರ್ಣ ಚಾರ್ಜ್‌ನಲ್ಲಿ ಈ ಸ್ಕೂಟರ್‌ನ 120 ಕಿ.ಮೀ ಕ್ರಮಿಸುತ್ತದೆ. ಇದು 2.88kWh ಬ್ಯಾಟರಿ ಹೊಂದಿದ್ದು, ಅದರ ಮೂಲಕ ಗಂಟೆಗೆ 60 ಕಿ.ಮೀ. ಗರಿಷ್ಠ ವೇಗ ಲಭ್ಯವಿದೆ. ಇದರ ಬೆಲೆ 73,000 ರೂ. ಆಗಿದೆ. ತೆಗೆಯಬಹುದಾದ ಬ್ಯಾಟರಿ, ಡಿಸ್ಕ್ ಬ್ರೇಕ್, ಯುಎಸ್‌ಬಿ ಪೋರ್ಟ್, ಸ್ಟಾರ್ಟ್/ಸ್ಟಾಪ್ ಬಟನ್, ಡಿಜಿಟಲ್ ಸ್ಪೀಡೋಮೀಟರ್ ಮತ್ತು ಪಾರ್ಕಿಂಗ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ಈ ಸ್ಕೂಟರ್‌ನಲ್ಲಿ ಒದಗಿಸಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.