Honda Shine ಅಭಿಮಾನಿಗಳಿಗೊಂದು ಸಂತಸದ ಸುದ್ದಿ, ಮಾರುಕಟ್ಟೆಗಿಳಿದ ಸೆಲೆಬ್ರೇಷನ್ ಎಡಿಶನ್, ಇಲ್ಲಿದೆ ವಿವರ

Honda Shine Celebratin Edition: ಈ ಬೈಕ್ ಅನ್ನು ಎರಡು ಬಣ್ಣದ ಆಯ್ಕೆಗಳಗಿರುವ ಮ್ಯಾಟ್ ಸ್ಟೀಲ್ ಬ್ಲಾಕ್ ಮೆಟಾಲಿಕ್ ಹಾಗೂ ಮ್ಯಾಟ್ ಸಂಗಾರಿಯಾ ರೆಡ್ ಮೆಟಾಲಿಕ್ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ ಕಂಪನಿ ಈ ಬೈಕ್ ಮೇಲೆ 3+3 ವರ್ಷಗಳ ವಾರಂಟಿ ಪ್ಯಾಕೇಜ್ ಆಫರ್ ಕೂಡ ನೀಡುತ್ತಿದೆ.  

Written by - Nitin Tabib | Last Updated : Aug 26, 2022, 02:48 PM IST
  • ಹೋಂಡಾ 2 ವೀಲರ್ಸ್ ಇಂಡಿಯಾ ತನ್ನ ಜನಪ್ರಿಯ ಬೈಕ್ ಆಗಿರುವ ಹೋಂಡಾ ಶೈನ್‌ನ ಸಂಭ್ರಮಾಚರಣೆ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
  • ಕಂಪನಿಯು 1 ಕೋಟಿ ಹೊಂಡಾ ಶೈನ್ ಯುನಿಟ್‌ಗಳ ಮಾರಾಟದ ಗಡಿ ದಾಟಿದ ವಿಶೇಷ ಸಂದರ್ಭದಲ್ಲಿ ಈ ವಿಶೇಷ ಬೈಕ್ ಅನ್ನು ಪರಿಚಯಿಸಿದೆ.
Honda Shine ಅಭಿಮಾನಿಗಳಿಗೊಂದು ಸಂತಸದ ಸುದ್ದಿ, ಮಾರುಕಟ್ಟೆಗಿಳಿದ ಸೆಲೆಬ್ರೇಷನ್ ಎಡಿಶನ್, ಇಲ್ಲಿದೆ ವಿವರ title=
Honda Shine Celebration Edition

Honda Shine Celebratin Edition: ಹೋಂಡಾ 2 ವೀಲರ್ಸ್ ಇಂಡಿಯಾ ತನ್ನ ಜನಪ್ರಿಯ ಬೈಕ್ ಆಗಿರುವ ಹೋಂಡಾ ಶೈನ್‌ನ ಸಂಭ್ರಮಾಚರಣೆ ಆವೃತ್ತಿಯನ್ನು (ಸೆಲೆಬ್ರೇಷನ್ ಎಡಿಶನ್) ಬಿಡುಗಡೆ ಮಾಡಿದೆ. ಕಂಪನಿಯು 1 ಕೋಟಿ ಹೊಂಡಾ ಶೈನ್ ಯುನಿಟ್‌ಗಳ ಮಾರಾಟದ ಗಡಿ ದಾಟಿದ ವಿಶೇಷ ಸಂದರ್ಭದಲ್ಲಿ ಈ ವಿಶೇಷ ಬೈಕ್ ಅನ್ನು ಪರಿಚಯಿಸಿದೆ. ಶೈನ್ಸ್ ಸೆಲೆಬ್ರೇಷನ್ ಆವೃತ್ತಿಯ ಎಕ್ಸ್ ಶೋ ರೂಂ ಬೆಲೆ 78,878 ರೂ. ನಿಗದಿಪಡಿಸಲಾಗಿದೆ. ಈ ಬೈಕ್ ಅನ್ನು ಎರಡು ಬಣ್ಣದ ಆಯ್ಕೆಗಳಗಿರುವ ಮ್ಯಾಟ್ ಸ್ಟೀಲ್ ಬ್ಲಾಕ್ ಮೆಟಾಲಿಕ್ ಹಾಗೂ ಮ್ಯಾಟ್ ಸಂಗಾರಿಯಾ ರೆಡ್ ಮೆಟಾಲಿಕ್ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ ಕಂಪನಿ ಈ ಬೈಕ್ ಮೇಲೆ 3+3 ವರ್ಷಗಳ ವಾರಂಟಿ ಪ್ಯಾಕೇಜ್ ಆಫರ್ ಕೂಡ ನೀಡುತ್ತಿದೆ.

ಬೈಕ್ ಎಂಜಿನ್
ಹೋಂಡಾ ಶೈನ್ ಸೆಲೆಬ್ರೇಶನ್ ಆವೃತ್ತಿಯು 123.94cc, 4 ಸ್ಟ್ರೋಕ್, SI, BS-VI ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದರ ಎಂಜಿನ್ ಬೈಕ್ ಗೆ 7.9 kW @ 7500 rpm ನ ಶಕ್ತಿಯನ್ನು ನೀಡುತ್ತದೆ ಮತ್ತು 11 N-m @ 6000 rpm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ 5 ಗೇರ್ ಹೊಂದಿದೆ. ಬೈಕ್‌ನ ತೂಕ 114 ಕೆ.ಜಿ.

ಬೈಕ್ ಗಾತ್ರ
ಹೊಸ ಹೋಂಡಾ ಶೈನ್ ಸೆಲೆಬ್ರೇಶನ್ ಆವೃತ್ತಿಯು 2046mm ಉದ್ದ, 737mm ಅಗಲ ಮತ್ತು 1116mm ಎತ್ತರವನ್ನು ಹೊಂದಿದೆ. ಬೈಕ್‌ನ ವೀಲ್ ಬೇಸ್ (ಹೋಂಡಾ ಶೈನ್ ಸೆಲೆಬ್ರೇಷನ್ ಎಡಿಷನ್) 1285 ಎಂಎಂ, ಸೀಟ್ ಎತ್ತರ 791 ಎಂಎಂ ಮತ್ತು ಬೈಕ್‌ನ ಗ್ರೌಂಡ್ ಕ್ಲಿಯರೆನ್ಸ್ 162 ಎಂಎಂ ಆಗಿದೆ.

ಬೈಕ್‌ನ ವೈಶಿಷ್ಟ್ಯಗಳು
ಈ ಹೋಂಡಾ ಮೋಟಾರ್‌ಸೈಕಲ್ ಹ್ಯಾಲೊಜೆನ್ ಬಲ್ಬ್, ಡಿಸಿ ಹೆಡ್ ಲ್ಯಾಂಪ್, ನ್ಯೂ ಲುಕ್ ಮೀಟರ್ ಡಿಸೈನ್, 5 ಸ್ಟೆಪ್ ಅಡ್ಜಸ್ಟಬಲ್ ಸಸ್ಪೆನ್ಷನ್, ಈಕ್ವಲೈಜರ್‌ನೊಂದಿಗೆ ಕಾಂಬಿ ಬ್ರೇಕ್ ಸಿಸ್ಟಮ್, ಸೀಲ್ ಚೈನ್, ಇಂಟಿಗ್ರೇಟೆಡ್ ಹೆಡ್ ಲ್ಯಾಂಪ್ ಬೀಮ್ ಮತ್ತು ಪಾಸಿಂಗ್ ಸ್ವಿಚ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಆಫ್, ಸ್ಟ್ಯಾಂಡರ್ಡ್ ಶೈನ್‌ಗೆ ಹೋಲಿಸಿದರೆ ಇದು ಶೇ. 14ರಷ್ಟು ಹೆಚ್ಚು ಮೈಲೇಜ್ ನೀಡುತ್ತದೆ ಮತ್ತು eSP ತಂತ್ರಜ್ಞಾನ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಇದು ಹೊಂದಿದೆ.

ನೋಟದಲ್ಲಿ ಏನು ಬದಲಾವಣೆಯಾಗಿದೆ
ಶೈನ್ ಸೆಲೆಬ್ರೇಶನ್ ಆವೃತ್ತಿಯ ಇಂಧನ ಟ್ಯಾಂಕ್, ಗೋಲ್ಡನ್ ಹೋಂಡಾ ವಿಂಗ್ ಲಾಂಛನ ಹೊಂದಿದೆ, ಸೆಲೆಬ್ರೇಶನ್ ಎಡಿಷನ್ ಬ್ಯಾಡ್ಜ್, ಡಾರ್ಕ್ ಬ್ರೌನ್ ಸೀಟ್, ಸೈಡ್ ಕವರ್‌ನಲ್ಲಿ ಪ್ರೀಮಿಯಂ ಗೋಲ್ಡ್ ಸ್ಟ್ರೋಕ್‌ಗಳನ್ನು ಪಡೆಯಲಿದೆ. ಇವೆಲ್ಲವೂ ಸೇರಿ ಶೈನ್ (ಹೋಂಡಾ ಶೈನ್ ಸೆಲೆಬ್ರೇಷನ್ ಎಡಿಷನ್) ಬೈಕ್ ಅನ್ನು ಮಾತ್ತಷ್ಟು ಆಕರ್ಷಕಗೊಳಿಸುತ್ತವೆ.

ಇದನ್ನೂ ಓದಿ-India's Cheapest 125 CC Bike Launch: ಸದ್ದಿಲ್ಲದೇ ಅಗ್ಗದ, ಸುಂದರ ಹಾಗೂ ದೀರ್ಘ ಬಾಳಿಕೆಯ ಬೈಕ್ ಬಿಡುಗಡೆ ಮಾಡಿದ ಬಜಾಜ್

ನೀವು ಟೆಸ್ಟ್ ರೈಡ್ ಕೂಡ ತೆಗೆದುಕೊಳ್ಳಬಹುದು
ಖರೀದಿಸುವ ಮುನ್ನ ನೀವು ಶೈನ್ ಸೆಲೆಬ್ರೇಷನ್ ನ ಟೆಸ್ಟ್ ಡ್ರೈವ್ ಅನ್ನು ಯತ್ನಿಸಲು ಬಯಸುತ್ತಿದ್ದರೆ, ಕಂಪನಿಯು ಈ ಸೌಲಭ್ಯವನ್ನು ಸಹ ಒದಗಿಸುತ್ತಿದೆ. ಇದಕ್ಕಾಗಿ, ನೀವು ಕಂಪನಿಯ ಅಧಿಕೃತ ವೆಬ್‌ಸೈಟ್ https://www.honda2wheelersindia.com/ ಗೆ ಭೇಟಿ ನೀಡುವ ಮೂಲಕ ವಿನಂತಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ-10 ಲಕ್ಷದೊಳಗಿನ 5 ಅತ್ಯುತ್ತಮ ಕಾರುಗಳು: ಇಲ್ಲಿದೆ ಸಂಪೂರ್ಣ ಮಾಹಿತಿ

3+3 ವರ್ಷಗಳ ವಾರಂಟಿ ಪ್ಯಾಕೇಜ್
ಕಂಪನಿಯು ಹೋಂಡಾ ಶೈನ್ ಸೆಲೆಬ್ರೇಶನ್ ಎಡಿಷನ್ ಬೈಕ್‌ ಮೇಲೆ ಗ್ರಾಹಕರಿಗೆ 3+3 ವರ್ಷಗಳ ವಾರಂಟಿ ಪ್ಯಾಕೇಜ್ ಅನ್ನು ನೀಡುತ್ತಿದೆ. ಇದು ಮೂರು ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿಯನ್ನು ಹೊಂದಿದ್ದರೆ, ಮೂರು ವರ್ಷಗಳ ಸೆಲೆಕ್ಟೆಡ್ ವಾರಂಟಿ ಹೊಂದಿರುತ್ತದೆ. ಅಂದರೆ, ನೀವು ಬಯಸಿದರೆ, ನೀವು 6 ವರ್ಷಗಳವರೆಗೆ ಬೈಕ್ ಬಗ್ಗೆ ಯಾವುದೇ ಟೆನ್ಶನ್ ತೆಗೆದುಕೊಳ್ಳಬೇಕಾಗಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News