ಬೆಂಗಳೂರು : Gold and Silver Price Today : ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಡೆಯುತ್ತಿರುವ  ಏರುಪೇರಿನಿಂದಾಗಿ  ಚಿನ್ನದ ಧಾರಣೆ ಮೇಲೆ ಭಾರಿ ಒತ್ತಡ ಕಂಡುಬರುತ್ತಿದೆ. ಚಿನ್ನದ ದರ 10 ಗ್ರಾಂಗೆ 5000 ರೂ.ಗಿಂತ ಹೆಚ್ಚು ಕುಸಿತ ಕಂಡಿದೆ. ಹಾಗಿದ್ದರೆ ಆಭರಣ ಖರೀದಿಸಲು ಇದುವೇ ಸರಿಯಾದ ಸಮಯವೇ? ನವರಾತ್ರಿಯಿಂದ ಹಬ್ಬದ ಸೀಸನ್ ಆರಂಭವಾಗಲಿದೆ. ಈ ಅವಧಿಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೇಡಿಕೆ ಹೆಚ್ಚುತ್ತದೆ. ಭಾರತದಲ್ಲಿ ದೀಪಾವಳಿ ಮತ್ತುಧನತ್ರಯೋದಶಿ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವ ಸಂಪ್ರದಾಯವೂ ಇದೆ. 


COMMERCIAL BREAK
SCROLL TO CONTINUE READING

ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ : 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರಲ್ಲೂ ಅಮೆರಿಕದ ಮಾರುಕಟ್ಟೆಯಲ್ಲಿನ ಒತ್ತಡದಿಂದಾಗಿ ಚಿನ್ನದ ಬೆಲೆ ಕುಸಿಯುತ್ತಿದೆ. ಬುಧವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 1827.40 ಡಾಲರ್‌ಗೆ ಕುಸಿದಿದೆ. ಬೆಳ್ಳಿ ಕೂಡಾ ಶೇಕಡಾ 0.48ರಷ್ಟು ಕುಸಿದು ಪ್ರತಿ ಔನ್ಸ್‌ಗೆ 21.28 ಡಾಲರ್‌ಗೆ ತಲುಪಿದೆ. ಭಾರತದ ಬುಲಿಯನ್ ಮಾರುಕಟ್ಟೆಯಲ್ಲೂ ಮೇ ಮೊದಲ ವಾರದಲ್ಲಿ ಚಿನ್ನದ ಬೆಲೆ 61,700 ರೂ.ಗಳ ದಾಖಲೆಯ ಮಟ್ಟವನ್ನು ತಲುಪಿತ್ತು. ಆ ಲೆಕ್ಕಾಚಾರದ ಪ್ರಕಾರ ನೋಡುವುದಾದರೆ, ಇಲ್ಲಿಯವರೆಗೆ ಚಿನ್ನದ ಬೆಲೆ 10 ಗ್ರಾಂಗೆ 5000 ರೂ.ಗಿಂತ ಹೆಚ್ಚು  ಇಳಿಕೆ ಕಂಡಿದೆ. 


ಇದನ್ನೂ ಓದಿ : ಇಪಿಎಫ್ ಖಾತೆ ಇದ್ದರೆ ಸಿಗಲಿದೆ ಈ 7 ಪ್ರಯೋಜನಗಳು ! ಬಹುತೇಕರಿಗೆ ತಿಳಿದಿರದ ಮಾಹಿತಿ ಇದು


ಇಂದು ಚಿನ್ನ ಖರೀದಿಸುವುದಾದರೆ ಎಷ್ಟಿದೆ ಬೆಲೆ  (10 ಗ್ರಾಂ) :
22 ಕ್ಯಾರೆಟ್ ಚಿನ್ನದ ಬೆಲೆ: 52,390 .ರೂ
24 ಕ್ಯಾರೆಟ್ ಚಿನ್ನದ ಬೆಲೆ:  57,150. ರೂ


ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನ ಮತ್ತು ಬೆಳ್ಳಿ ಬೆಲೆ ? :
ಬೆಂಗಳೂರಿನಲ್ಲಿ  22 ಕ್ಯಾರೆಟ್ ಚಿನ್ನದ ಬೆಲೆ 52,390 .ರೂ
24 ಕ್ಯಾರೆಟ್ ಚಿನ್ನದ ಬೆಲೆ:  57,150. ರೂ


22 ಕ್ಯಾರೆಟ್ ಚಿನ್ನ ಸುಮಾರು 52,000 ರೂ.ಗೆ ಲಭ್ಯ :
ಬೆಂಗಳೂರು: 52,390 .ರೂ
ಚೆನ್ನೈ:  52,940 ರೂ
ಮುಂಬೈ: 52,390 .ರೂ
ದೆಹಲಿ: 52,540.ರೂ
ಕೇರಳ:  52,390 .ರೂ
ಲಕ್ನೋ: 52,540.ರೂ


ಇದನ್ನೂ ಓದಿ : BPL, APL ಕಾರ್ಡ್ ದಾರರಿಗೆ ಗುಡ್ ನ್ಯೂಸ್ : ಇಂದಿನಿಂದಲೇ ಈ ಅವಕಾಶ ನೀಡಿದ ಸರ್ಕಾರ


ಬೆಳ್ಳಿ ಬೆಲೆ ಎಷ್ಟು? :
ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಈ ಸುದ್ದಿ ಬರೆಯುವ ವೇಳೆಗೆ  100 ಗ್ರಾಂ ಬೆಳ್ಳಿ ಬೆಲೆಯಲ್ಲಿ 7,110 ರೂಪಾಯಿ ಆಗಿದ್ದು, 10 ಗ್ರಾಂ ಬೆಳ್ಳಿ ಬೆಲೆ 711 ರೂಪಾಯಿ ಆಗಿದೆ.


ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)
ಬೆಂಗಳೂರು: 6,900
ಚೆನ್ನೈ: 7,350 ರೂ
ಮುಂಬೈ: 7,110 ರೂ
ದೆಹಲಿ:  7,110 ರೂ
ಕೇರಳ: 7,350 ರೂ
ಲಕ್ನೋ:  7,110 ರೂ 


ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಕಾರಣ ?: 
ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆಯ ಆಧಾರದ ಮೇಲೆ ಚಿನ್ನದ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಚಿನ್ನದ ಬೇಡಿಕೆ ಹೆಚ್ಚಾದಂತೆ ಅದರ ದರವೂ ಹೆಚ್ಚಾಗಲಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಗಳು  ಚಿನ್ನದ ದರಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸಿದರೆ ಹೂಡಿಕೆದಾರರು ಸುರಕ್ಷಿತ ಆಯ್ಕೆಯಾಗಿ ಚಿನ್ನದ ಮೇಲೆ ಹೂಡಿಕೆ ಮಾಡಲು ಪ್ರಾರಂಭಿಸುತ್ತಾರೆ. ಚಿನ್ನ ಪ್ರಸ್ತುತ ಹಲವು ತಿಂಗಳುಗಳಲ್ಲಿ ಅತ್ಯಂತ ಕಡಿಮೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಮುಂಬರುವ ಹಬ್ಬ ಹರಿದಿನಗಳಲ್ಲಿ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. 


ಇದನ್ನೂ ಓದಿ :ಪ್ಯಾಕೇಜ್‌ನಲ್ಲಿ ಮಾಲ್ಡೀವ್ಸ್‌ನಂತಹ ಸುಂದರ ತಾಣಕ್ಕೆ ಅಗ್ಗದ ಪ್ಯಾಕೇಜ್ ಘೋಷಿಸಿದ ಐ‌ಆರ್‌ಸಿ‌ಟಿ‌ಸಿ


ಇಂದಿನ ಬೆಲೆಯನ್ನು ಈ ರೀತಿ ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ನಂಬರ್ ನಿಂದ ಮಿಸ್ಡ್ ಕಾಲ್ ಕೊಡುತ್ತಿರೋ ಅದೇ ನಂಬರ್ ಗೆ ಮೆಸೇಜ್ ಬರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.