ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಪುಟ ಬುಧವಾರ (ಅ.4) ಮಹತ್ವದ ನಿರ್ಧಾರ ಕೈಗೊಂಡಿದೆ. ಉಜ್ವಲ ಯೋಜನೆಯ ಫಲಾನುಭವಿಗಳ ಸಹಾಯಧನವನ್ನು 200 ರೂ.ನಿಂದ 300 ರೂ.ಗೆ ಹೆಚ್ಚಿಸಿದೆ. ರಕ್ಷಾ ಬಂಧನ ಮತ್ತು ಓಣಂ ಸಂದರ್ಭದಲ್ಲಿ ಎಲ್ಪಿಜಿಯಲ್ಲಿ 200 ರೂ. ಕಡಿತಗೊಳಿಸುವುದಾಗಿ ಸಂಪುಟ ಘೋಷಿಸಿತ್ತು. ಇಂದು ಉಜ್ವಲ ಫಲಾನುಭವಿಗೆ ಸಹಾಯಧನವನ್ನು 200 ರೂ.ನಿಂದ 300 ರೂ.ಗೆ ಏರಿಕೆ ಮಾಡಲಾಗಿದೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ‘ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ ನಡೆದಿದೆ. ರಕ್ಷಾ ಬಂಧನ ಮತ್ತು ಓಣಂ ಸಂದರ್ಭದಲ್ಲಿ ನಾವು ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 200 ರೂ. ಕಡಿತಗೊಳಿಸಿದ್ದೇವೆ. ಈ ಬೆಲೆ 1,100 ರೂ.ನಿಂದ 900 ರೂ.ಗೆ ಇಳಿಕೆಯಾಗಿದೆ. ಪ್ರಸ್ತುತ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 700 ರೂ.ಗೆ ಗ್ಯಾಸ್ ಸಿಗುತ್ತಿದೆ. ಈಗ ಅವರು 300 ರೂ.ಗಳ ಸಹಾಯಧನ ಪಡೆಯುತ್ತಾರೆ, ಹೀಗಾಗಿ 600 ರೂ.ಗೆ ಅವರಿಗೆ ಗ್ಯಾಸ್ ಸಿಲಿಂಡರ್ ಸಿಗಲಿದೆ’ ಎಂದು ಹೇಳಿದ್ದಾರೆ.
The government has raised subsidy amount for Pradhan Mantri Ujjwala Yojana beneficiaries from Rs 200 to Rs 300 per LPG cylinder: Union minister Anurag Thakur during a briefing on Cabinet decisions pic.twitter.com/Dvf7wXtXQT
— ANI (@ANI) October 4, 2023
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸರ್ಕಾರದ ಭರ್ಜರಿ ಗಿಫ್ಟ್ ! ವೇತನ ಹೆಚ್ಚಳ, ಡಿಎ ಅರಿಯರ್ಸ್ ಸೇರಿ ಮೂರು ಗುಡ್ ನ್ಯೂಸ್
ಉಜ್ವಲಾ ಫಲಾನುಭವಿಗಳು ಪ್ರಸ್ತುತ 14.2 ಕೆಜಿ ಸಿಲಿಂಡರ್ಗೆ 703 ರೂ.ಗಳನ್ನು ಪಾವತಿಸುತ್ತಿದ್ದಾರೆ. ಮಾರುಕಟ್ಟೆ ಬೆಲೆ 903 ರೂ.ಗೆ ಹೋಲಿಸಿದರೆ ಕೇಂದ್ರ ಸಚಿವ ಸಂಪುಟದ ನಿರ್ಧಾರದ ನಂತರ ಅವರು ಈಗ 603 ರೂ. ಪಾವತಿಸಬೇಕಾಗುತ್ತದೆ.
ಲೆಕ್ಕಾಚಾರ ಹೇಗಿದೆ..?
- ಮೊದಲು ಗ್ಯಾಸ್ ಸಿಲಿಂಡರ್ ಬೆಲೆ 1,100 ರೂ. ಇತ್ತು
- ರಕ್ಷಾ ಬಂಧನ ಮತ್ತು ಓಣಂ ವೇಳೆ 200 ರೂ. ಕಡಿತವಾಗಿತ್ತು
- 900 ರೂ. ಬೆಲೆಯ ಗ್ಯಾಸ್ ಸಿಲಿಂಡರ್ ಬೆಲೆಗೆ 200 ರೂ. ಸಬ್ಸಿಡಿ
- ಇದೀಗ ಮತ್ತೆ 100 ರೂ. ಸಬ್ಸಿಡಿ ನೀಡಲು ಕೇಂದ್ರ ಸಂಪುಟ ನಿರ್ಧಾರ
- ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದೀಗ 603 ರೂ.ಗೆ ಗ್ಯಾಸ್ ಸಿಲಿಂಡರ್ ಸಿಗುತ್ತದೆ
ಇದನ್ನೂ ಓದಿ: ತಿಂಗಳಿಗೆ ಸಿಗುವುದು 50 ಸಾವಿರ ರೂ. ಪಿಂಚಣಿ ! ಭದ್ರವಾಗಿರುವುದು ವೃದ್ದಾಪ್ಯ ಜೀವನ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.