5,100 ರೂಪಾಯಿಯಷ್ಟು ದುಬಾರಿಯಾದ ಬಂಗಾರ ! ಇನ್ನು ಚಿನ್ನ ಖರೀದಿ ಬರೀ ಕನಸು
Gold-Silver Price Today October 25th :ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಸತತ ಏರಿಕೆ ಕಾಣುತ್ತಿದೆ. ಚಿನ್ನದ ಬೆಲೆಯಲ್ಲಿ ಸುಮಾರು 5,100 ರೂ. ಏರಿಕೆ ಕಂಡು ಬಂದಿದೆ.
Gold-Silver Price Today October 25th : ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಇಸ್ರೇಲ್-ಹಮಾಸ್ ಯುದ್ಧದ ನಂತರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಅಕ್ಟೋಬರ್ 6 ರಂದು ಚಿನ್ನದ ಬೆಲೆ 10 ಗ್ರಾಂ. ಗೆ 56,539 ರೂ.ಗಳಷ್ಟಿತ್ತು. ಆದರೆ, ಪ್ರಸ್ತುತ ಈ ಬೆಲೆ 61,600 ರೂ.ಗೆ ಏರಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಸತತ ಏರಿಕೆ ಕಾಣುತ್ತಿದೆ.
ಚಿನ್ನದ ಬೆಲೆಯಲ್ಲಿ ಸುಮಾರು 5,100 ರೂ. ಏರಿಕೆ :
ಅಕ್ಟೋಬರ್ 6 ರಿಂದ ಚಿನ್ನದ ಬೆಲೆಯಲ್ಲಿ ಸುಮಾರು 5,100 ರೂ. ಏರಿಕೆ ಕಂಡು ಬಂದಿದೆ. ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು, ಪ್ರತಿ 10 ಗ್ರಾಂ ಚಿನ್ನದ ಬೆಲೆ 61,650 ರೂಪಾಯಿಗಳಿಗೆ ತಲುಪಿದೆ.
ಇದನ್ನೂ ಓದಿ : Highest Mileage CNG Cars: ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್ ಜಿ ಕಾರುಗಳಿವು
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ :
ದೆಹಲಿ - ,56,700
ಚೆನ್ನೈ - 56,750ರೂ. ,
ಬೆಂಗಳೂರು - 56,550ರೂ.,
ಹೈದರಾಬಾದ್ -56,550ರೂ.,
ಕೋಲ್ಕತ್ತಾ - 56,550ರೂ.,
ಕೇರಳ - 56,550ರೂ.,
ಬೆಳ್ಳಿ ಬೆಲೆಯಲ್ಲಿ ಕುಸಿತ :
ಆದರೆ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಬೆಳ್ಳಿ ಬೆಲೆಯಲ್ಲಿ 500 ರೂಪಾಯಿ ಇಳಿಕೆಯಾಗಿದ್ದು, ಪ್ರತಿ ಕೆಜಿಗೆ 74,500 ರೂಪಾಯಿಗಳಿಗೆ ತಲುಪಿದೆ.
ಇದನ್ನೂ ಓದಿ : 1000 ರೂಪಾಯಿ ನೋಟ್ ಬಗೆಗಿನ ಮಹತ್ವದ ಮಾಹಿತಿ ಹೊರ ಹಾಕಿದ RBI!
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ನೀಡಿದ ಮಾಹಿತಿ :
ಮಂಗಳವಾರ ಪ್ರತಿ 10 ಗ್ರಾಂ ಚಿನ್ನದ ಬೆಲೆ 240 ರೂಪಾಯಿ ಏರಿಕೆಯಾಗಿ 61,650 ರೂಪಾಯಿಗಳಿಗೆ ತಲುಪಿದೆ. ಆದರೆ, ಕಳೆದ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 61,600 ರೂ. ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಈ ಬಗ್ಗೆ ಮಾಹಿತಿ ನೀಡಿದೆ.
ತಜ್ಞರ ಅಭಿಪ್ರಾಯವೇನು?:
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ತಜ್ಞ ಸೌಮಿಲ್ ಗಾಂಧಿ ಮಾತನಾಡಿ, ಚಿನ್ನದಲ್ಲಿ ಸೀಮಿತ ವ್ಯಾಪ್ತಿಯಲ್ಲಿ ಏರಿಳಿತಗಳು ಕಂಡುಬರುತ್ತವೆ. ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಹೂಡಿಕೆದಾರರು ಎಚ್ಚರ ವಹಿಸಿದ್ದಾರೆ ಎಂದು ಹೇಳಿದ್ದಾರೆ. ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನ ಮತ್ತು ಬೆಳ್ಳಿ ಎರಡೂ ಬೆಲೆ ಇಳಿದಿದ್ದು, ಕ್ರಮವಾಗಿ ಪ್ರತಿ ಔನ್ಸ್‌ಗೆ ಚಿನ್ನ 1,975 ಡಾಲರ್ ಮತ್ತು ಬೆಳ್ಳಿ 22.92 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿವೆ.
ಇದನ್ನೂ ಓದಿ : ಡಿಎ ಹೆಚ್ಚಳದ ಬಳಿಕ ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್ ಪ್ರಕಟಿಸಿದ ಸರ್ಕಾರ
ನಿಮ್ಮ ನಗರದ ಚಿನ್ನದ ಬೆಲೆ ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು.
ಸೂಚನೆ : ಈ ಮೇಲಿನ ದರಗಳನ್ನು ಈ ಸುದ್ದಿ ಬರೆಯುವ ಹೊತ್ತಿನ ಆಧಾರದ ಮೇಲೆ ನೀಡಲಾಗಿದೆ. ಬೇರೆ ಬೇರೆ ನಗರಗಳಿಗೆ ಅನುಗುಣವಾಗಿ ಚಿನ್ನದ ದರದಲ್ಲಿ ವ್ಯತ್ಯಾಸ ಕಂಡು ಬರಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.