Airtel 5G Launch Date and Price: ದೇಶದಲ್ಲಿ 5G ಸೇವೆ ಬಿಡುಗಡೆಯ ಕುರಿತು ಹಲವು ಮಹತ್ವದ ಅಪ್ಡೇಟ್ ಗಳು ಪ್ರಕಟಗೊಳ್ಳುತ್ತಿವೆ ಮತ್ತು ದೇಶದ ದೊಡ್ಡ ದೊಡ್ಡ ಟೆಲಿಕಾಂ ಕಂಪನಿಗಳು ತಮ್ಮ ಸೇವೆ ಬಿಡುಗಡೆಯ ದಿನಾನಕವನ್ನು ಕೂಡ ಘೋಷಿಸಲಾರಂಭಿಸಿವೆ. ಆಗಸ್ಟ್ 29, 2022 ರಂದು, ರಿಲಯನ್ಸ್ ಜಿಯೋದ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ನಡೆದಿದ್ದು, ಇದರಲ್ಲಿ ಮುಖೇಶ್ ಅಂಬಾನಿ ಜಿಯೋದ 5 ಜಿ ಸೇವೆಗಳ ಬಗ್ಗೆ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಜಿಯೋ ಜೊತೆಗೆ ಇದೀಗ ಏರ್‌ಟೆಲ್ ತನ್ನ 5G ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ಬಿಡುಗಡೆ ದಿನಾಂಕದಿಂದ  ಹಿಡಿದು  ಬೆಲೆವರೆಗೆ ಎಲ್ಲದರ ಬಗ್ಗೆ ಅಧಿಕೃತವಾಗಿ ಮಾಹಿತಿ ಬಂದಿದೆ.


COMMERCIAL BREAK
SCROLL TO CONTINUE READING

ಏರ್‌ಟೆಲ್ 5G ಲಾಂಚ್ ದಿನಾಂಕ
ಏರ್‌ಟೆಲ್‌ನ ಅಧ್ಯಕ್ಷ ಸುನಿಲ್ ಮಿತ್ತಲ್ ಭಾರತದಲ್ಲಿ ಏರ್‌ಟೆಲ್ 5G ಸೇವೆ ಕುರಿತು ಘೋಷಣೆಯನ್ನು ಮಾಡಿದ್ದಾರೆ. ಬಿಸಿನೆಸ್ ಟುಡೇ ಮಾಡಿರುವ ವರದಿಯಂತೆ, ಸುನಿಲ್ ಮಿತ್ತಲ್ ಪ್ರಕಾರ ಏರ್‌ಟೆಲ್ ಅಕ್ಟೋಬರ್ ಮೊದಲ ವಾರದಿಂದ ದೇಶದಲ್ಲಿ 5G ಸೇವೆಗಳನ್ನು ಹೊರತರಲಿದೆ ಎನ್ನಲಾಗಿದೆ. ಅಕ್ಟೋಬರ್ 12, 2022 ರಿಂದ ಭಾರತದಲ್ಲಿ 5G ಸೇವೆಗಳನ್ನು ಬಿಡುಗಡೆ ಮಾಡಲಾಗುವುದು ಸರ್ಕಾರ ಕೂಡ ಹೇಳಿದ್ದು ಇಲ್ಲಿ ಗಮನಾರ್ಹ.


ಇದನ್ನೂ ಓದಿ-Reliance AGM 2022: Jio 5G ಸೇವೆ ಬಿಡುಗಡೆಗೆ ಮುಹೂರ್ತ ಫಿಕ್ಸ್, ದಿನಾಂಕ ಘೋಷಿಸಿದ ಮುಕೇಶ್ ಅಂಬಾನಿ


ಭಾರತದಲ್ಲಿ ಏರ್‌ಟೆಲ್ 5G ಬೆಲೆ
ಬ್ಯುಸಿನೆಸ್ ಟುಡೆಯ ಇಂಡಿಯಾ@100 ಎಕಾನಮಿ ಶೃಂಗಸಭೆಯಲ್ಲಿ ಮಾತನಾಡಿರುವ ಸುನಿಲ್ ಮಿತ್ತಲ್,  ಏರ್‌ಟೆಲ್ 5G ಯೋಜನೆಗಳ ವೆಚ್ಚದ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಆದರೆ, 5G ಸೇವೆಯನ್ನು ಆನಂದಿಸಲು ಏರ್‌ಟೆಲ್ ಗ್ರಾಹಕರು 'ಸ್ವಲ್ಪ ಹೆಚ್ಚಿನ' ಬೆಲೆಯನ್ನು ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದ್ದರೆ. ಏರ್‌ಟೆಲ್ ತನ್ನ 5G ಸೇವೆಗಾಗಿ ಹೊಸ ಯೋಜನೆಗಳೊಂದಿಗೆ ಬರದೇ ಇರಬಹುದು ಎಂದು ಅವರು ಹೇಳುತ್ತಾರೆ, ಆದರೆ ಈ ಸೇವೆಯನ್ನು ಕಂಪನಿಯ ಪ್ರೀಮಿಯಂ ಯೋಜನೆಗಳಿಗೆ ಸೇರಿಸುವ ಸಾಧ್ಯತೆಯನ್ನು ಒತ್ತಿ ಹೇಳಿದ್ದಾರೆ.


ಇದನ್ನೂ ಓದಿ-SBI ನ 45 ಕೋಟಿ ಗ್ರಾಹಕರಿಗೊಂದು ಮಹತ್ವದ ಮಾಹಿತಿ, ತಪ್ಪದೆ ತಿಳಿದುಕೊಳ್ಳಿ


AGM, 2022 ರ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ಕೂಡ ತನ್ನ 5G ಸೇವೆಯನ್ನು ಘೋಷಿಸಿದೆ ಮತ್ತು ಜಿಯೋದ 5G ಸೇವೆಗಳನ್ನು ಈ ವರ್ಷದ ದೀಪಾವಳಿಯವರೆಗೆ ಬಿಡುಗಡೆ ಮಾಡಲಾಗುವುದು ಎಂದಿದೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.