ಜನಧನ್ ಖಾತೆದಾರರೇ ಮಹತ್ವದ ಮಾಹಿತಿ

JanDhan Account: ಜನಧನ್ ಖಾತೆ ಹೊಂದಿರುವವರಿಗೆ ಪ್ರಮುಖ ಸುದ್ದಿ ಇದೆ. ನೀವು ಸಹ ಈ ಸರ್ಕಾರಿ ಖಾತೆಯನ್ನು ತೆರೆದಿದ್ದರೆ ಈ ಖಾತೆಯ ಬಗ್ಗೆ ಕೇಂದ್ರ ಸರ್ಕಾರದಿಂದ ದೊಡ್ಡ ಮಾಹಿತಿ ನೀಡಲಾಗಿದೆ.

Written by - Yashaswini V | Last Updated : Aug 29, 2022, 03:09 PM IST
  • ಜನ್ ಧನ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಡುವ ಅಗತ್ಯವಿಲ್ಲ
  • ಜನ್ ಧನ್ ಖಾತೆಯ ಜೊತೆಗೆ ಬ್ಯಾಂಕ್ ಗ್ರಾಹಕರಿಗೆ ಓವರ್ ಡ್ರಾಫ್ಟ್ ಸೌಲಭ್ಯವನ್ನು ನೀಡುತ್ತದೆ.
  • ಉಚಿತ ಮೊಬೈಲ್ ಬ್ಯಾಂಕಿಂಗ್‌ನ ಪ್ರಯೋಜನವೂ ಲಭ್ಯವಿದೆ.
ಜನಧನ್ ಖಾತೆದಾರರೇ ಮಹತ್ವದ ಮಾಹಿತಿ  title=
JanDhan Account

ಜನ್ ಧನ್ ಖಾತೆ: ಪ್ರತಿಯೊಬ್ಬ ಭಾರತೀಯರೂ ಸಹ ಖಾತೆ ಹೊಂದಿರಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಶೂನ್ಯ ರೂಪಾಯಿಯಲ್ಲಿ ತೆರೆಯಬಹುದಾದ ಜನಧನ್ ಖಾತೆ ಎಂಬ  ಮಹತ್ವದ ಯೋಜನೆಯನ್ನು ಪರಿಚಯಿಸಿತು. ಈ ಖಾತೆಯಲ್ಲಿ ಸರ್ಕಾರದಿಂದ ಹಲವು ಪ್ರಯೋಜನಗಳು ಲಭ್ಯವಿದೆ. ನೀವು ಸಹ ಈ ಸರ್ಕಾರಿ ಖಾತೆಯನ್ನು ತೆರೆದಿದ್ದರೆ, ನಿಮಗಾಗಿ ಒಂದು ಪ್ರಮುಖ ಸುದ್ದಿ ಇದೆ. ಈ ಖಾತೆಯ ಬಗ್ಗೆ ಕೇಂದ್ರ ಸರ್ಕಾರದಿಂದ ದೊಡ್ಡ ಮಾಹಿತಿ ನೀಡಲಾಗಿದೆ.

ವಾಸ್ತವವಾಗಿ, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಲ್ಲಿ (ಪಿಎಂಜೆಡಿವೈ) 46.25 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಇದರೊಂದಿಗೆ ಈ ಖಾತೆಗಳಲ್ಲಿ 1.74 ಲಕ್ಷ ಕೋಟಿ ರೂ. ಅಂದರೆ, ಹೆಚ್ಚಿನ ಸಂಖ್ಯೆಯ ಜನರು ಈ ಸರ್ಕಾರದ ಸೌಲಭ್ಯವನ್ನು ಪಡೆಯುತ್ತಿದ್ದಾರೆ. 

ಇದೀಗ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಜನಧನ್ ಖಾತೆದಾರರಿಗೆ 6 ವಿಧದ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಯಾವುದೇ ಗ್ರಾಹಕರು ಇದರ ಲಾಭ ಪಡೆಯಬಹುದು ಎಂದು ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. 

ಇದನ್ನೂ ಓದಿ- ಗೋಧಿ ಹಿಟ್ಟು, ಮೈದಾ, ರವೆ ರಫ್ತು ನಿಷೇಧಿಸಿದ ಭಾರತ.. ಕಾರಣ ಇಲ್ಲಿದೆ

ಜನಧನ್ ಖಾತೆದಾರರಿಗೆ ಲಭ್ಯವಿರುವ 6 ಸೌಲಭ್ಯಗಳಿವು:
1. ಸುಲಭವಾಗಿ ಹಣ ವರ್ಗಾವಣೆ
2. ಓವರ್‌ಡ್ರಾಫ್ಟ್ ಸೌಲಭ್ಯ
3. ಪಿಂಚಣಿ ಮತ್ತು ಸೂಕ್ಷ್ಮ ವಿಮೆ
4. ಡಿಜಿಟಲ್ ಪಾವತಿಗಳು
5. ಉಚಿತ ರುಪೇ ಡೆಬಿಟ್ ಕಾರ್ಡ್
6. ಅಪಘಾತ ವಿಮೆ

ಈ ಸರ್ಕಾರಿ ಖಾತೆಯ ಅಡಿಯಲ್ಲಿ ಮಾತ್ರ, ಸರ್ಕಾರವು ಪಿಎಂ ಕಿಸಾನ್‌ನಂತಹ ಯೋಜನೆಗಳ ಗ್ರಾಹಕರಿಗೆ ನೇರವಾಗಿ ಫಲಾನುಭವಿಗಳ ಖಾತೆಗೆ ಹಣವನ್ನು ನೀಡುತ್ತದೆ. ಇದಲ್ಲದೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಅಡಿಯಲ್ಲಿ ರಕ್ಷಣೆಯ ಪ್ರಯೋಜನವೂ ಲಭ್ಯವಿದೆ. 

ಈ ಯೋಜನೆಯಲ್ಲಿ ಖಾತೆ ತೆರೆದಿರುವ ಗ್ರಾಹಕರಿಗೆ ಮೈಕ್ರೋ ಇನ್ಶೂರೆನ್ಸ್ ಸೌಲಭ್ಯವೂ ಲಭ್ಯವಾಗಲಿದೆ. ಈ ಯೋಜನೆಯ 8 ವರ್ಷಗಳು ಪೂರ್ಣಗೊಂಡ ನಂತರ ಇನ್ನು ಮುಂದೆ ಅರ್ಹ ಜನ್ ಧನ್ ಖಾತೆದಾರರಿಗೂ ಮೈಕ್ರೋ ಇನ್ಶೂರೆನ್ಸ್ ಸೌಲಭ್ಯವನ್ನು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಈಗಾಗಲೇ ಬ್ಯಾಂಕುಗಳಿಗೆ ತಿಳಿಸಿತ್ತು. 

ಇದನ್ನೂ ಓದಿ- ನೇರವಾಗಿ ನಿಮ್ಮ ಮನೆ ತಲುಪುತ್ತೆ Voter ID Card.. ಆನ್‌ಲೈನ್ ಪ್ರಕ್ರಿಯೆ ಬಗ್ಗೆ ಇಲ್ಲಿದೆ ಮಾಹಿತಿ

ಜನ್ ಧನ್ ಖಾತೆಯಲ್ಲಿ ಲಭ್ಯವಿರುವ ಸೌಲಭ್ಯಗಳು-
1. ಠೇವಣಿ ಮೊತ್ತದ ಮೇಲೆ ಬಡ್ಡಿ ಸೌಲಭ್ಯ ಲಭ್ಯವಿದೆ.
2. ಒಂದು ಲಕ್ಷ ರೂಪಾಯಿಗಳ ಅಪಘಾತ ವಿಮಾ ರಕ್ಷಣೆ ಲಭ್ಯವಿದೆ. 
3. ಮಿನಿಮಮ್ ಬ್ಯಾಲೆನ್ಸ್ ಇಟ್ಟುಕೊಳ್ಳುವ ತೊಂದರೆ ಇಲ್ಲ. 
4. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ, ನೀವು ಉಚಿತವಾಗಿ ಖಾತೆಯನ್ನು ತೆರೆಯಬಹುದು.
5. ಜನ್ ಧನ್ ಖಾತೆಯ ಜೊತೆಗೆ ಬ್ಯಾಂಕ್ ಗ್ರಾಹಕರಿಗೆ ಓವರ್ ಡ್ರಾಫ್ಟ್ ಸೌಲಭ್ಯವನ್ನು ನೀಡುತ್ತದೆ.
6. ಈ ಕಾರ್ಡ್ ಮೂಲಕ, ನೀವು ಖರೀದಿಗಳನ್ನು ಮಾಡಬಹುದು. ಜೊತೆಗೆ ಖಾತೆಯಿಂದ ಹಣವನ್ನು ಹಿಂಪಡೆಯಬಹುದು ಮತ್ತು ನೀವು ಅನೇಕ ವಿಶೇಷ ಕೊಡುಗೆಗಳನ್ನು ಪಡೆಯಬಹುದು.
7. 2 ಲಕ್ಷದವರೆಗಿನ ಅಪಘಾತ ವಿಮಾ ರಕ್ಷಣೆಯು ಸರ್ಕಾರದಿಂದ ಲಭ್ಯವಿದೆ.
8. ಉಚಿತ ಮೊಬೈಲ್ ಬ್ಯಾಂಕಿಂಗ್‌ನ ಪ್ರಯೋಜನವೂ ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News