PIB Fact Check: ನೀವೂ ಕೂಡ ಒಂದು ವೇಳೆ ಎಸ್ಬಿಐನಲ್ಲಿ ಖಾತೆ ಹೊಂದಿದ್ದರೆ, ಈ ಮಹತ್ವದ ಸುದ್ದಿ ನಿಮಗಾಗಿ. ವಾಸ್ತವದಲ್ಲಿ ಪ್ಯಾನ್ ಕಾರ್ಡ್ ನವೀಕರಣದ ಕುರಿತು ಗ್ರಾಹಕರ ಮೊಬೈಲ್ ಗೆ ಸಂದೇಶವೊಂದನ್ನು ರವಾನಿಸಲಾಗುತ್ತಿದೆ. ನಿಮಗೂ ಅಂತಹ ಸಂದೇಶ ಬಂದಿದೆಯಾ? ಈ ಪ್ರಶ್ನೆಗೆ ನಿಮ್ಮ ಉತ್ತರ ಹೌದು ಎಂದಾದಲ್ಲಿ ಈಗಲೇ ಎಚ್ಚೆತ್ತುಕೊಳ್ಳಿ. ಇಂತಹ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿ ನಿಮ್ಮ ವಿವರಗಳನ್ನು ಹಂಚಿಕೊಂಡರೆ, ನಿಮ್ಮ ಖಾತೆ ಖಾಲಿಯಾಗಬಹುದು. ಪ್ಯಾನ್ ಕಾರ್ಡ್ ವಿವರ ಹಂಚಿಕೊಳ್ಳದೆ ಹೋದರೆ ನಿಮ್ಮ ಖಾತೆ ನಿಜವಾಗಲೂ ಬ್ಲಾಕ್ ಆಗಲಿದೆಯಾ? ಬನ್ನಿ ತಿಳಿದುಕೊಳ್ಳೋಣ,
ಸಂದೇಶದ ಹಿಂದಿನ ನಿಜಾಂಶ ಏನು?
ವೈರಲ್ ಆಗುತ್ತಿರುವ ಈ ಸಂದೇಶದ ಕುರಿತು ಪಿಐಬಿ ಫ್ಯಾಕ್ಟ್ ಚೆಕ್ ತಂಡ ಪರೀಶೀಲನೆ ನಡೆಸಿದೆ. ನಿಮ್ಮ ಮೊಬೈಲ್ ಗೂ ಈ ರೀತಿಯ ಯಾವುದೇ ಸಂದೇಶ ಬಂದಿದ್ದಲ್ಲಿ, ಅದಕ್ಕೆ ಪ್ರತಿಕ್ರಿಯಿಸುವ ಮುನ್ನ ಈ ಸುದ್ದಿಯನ್ನು ಖಂಡಿತ ಓದಿ.
ಪಿಐಬಿ ಫ್ಯಾಕ್ಟ್ ಚೆಕ್ ತಂಡ ಏನು ಹೇಳಿದೆ?
ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಬರೆದುಕೊಂಡಿರುವ ಪಿಐಬಿ, ಎಸ್ ಬಿ ಐ ಹೆಸರಿನ ಅಡಿ ಒಂದು ನಕಲಿ ಸಂದೇಶ ಕಳುಹಿಸಲಾಗುತ್ತಿದ್ದು, ಈ ಸಂದೇಶದಲ್ಲಿ ನೀವು ನಿಮ್ಮ ಎಸ್ಬಿಐ ಖಾತೆಯನ್ನು ಬ್ಲಾಕ್ ಆಗದಂತೆ ರಕ್ಷಿಸಲು ಬಯಸುತ್ತಿದ್ದರೆ, ಶೀಘ್ರದಲ್ಲಿಯೇ ನಿಮ್ಮ ಪ್ಯಾನ್ ಸಂಖ್ಯೆಯನ್ನು ಅಪ್ಡೇಟ್ ಮಾಡಿ ಎಂದು ಹೇಳಲಾಗುತ್ತಿದೆ.
ಇದೊಂದು ಸಂಪೂರ್ಣ ಫೇಕ್ ಸಂದೇಶವಾಗಿದೆ
ಈ ಸಂದೇಶ ಸಂಪೂರ್ಣ ನಕಲಿಯಾಗಿದೆ. ಈ ರೀತಿಯ ಯಾವುದೇ ಸಂದೇಶವನ್ನು ಎಸ್ಬಿಐ ತನ್ನ ಗ್ರಾಹಕರಿಗೆ ಕಳುಹಿಸಿಲ್ಲ ಅಥವಾ ಈ ಕುರಿತು ಯಾವುದೇ ಮೇಲ್ ಅನ್ನು ಬ್ಯಾಂಕ್ ರವಾನಿಸಿಲ್ಲ. ಹೀಗಾಗಿ ಈ ರೀತಿಯ ಫೇಕ್ ಸಂದೇಶಗಳ ಬಗ್ಗೆ ಜಾಗ್ರತೆವಹಿಸಿ.
A #Fake message issued in the name of SBI is asking customers to update their PAN number to avoid their account from getting blocked#PIBFactCheck
▶️Never respond to emails/SMS asking to share your personal or banking details
▶️Report at👇
📞1930 pic.twitter.com/GiehqSrLcg
— PIB Fact Check (@PIBFactCheck) August 27, 2022
ಈ ರೀತಿಯ ಮಾಹಿತಿಯನ್ನು ಯಾರೊಂದಿಗೆ ಹಂಚಿಕೊಳ್ಳಬೇಕು?
ಈ ರೀತಿಯ ಸಂದೇಶಗಳಿಗೆ ಉತ್ತರಿಸಬೇಡಿ ಹಾಗೂ ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಪಿಐಬಿ, ಎಸ್ಬಿಐ ಗ್ರಾಹಕರಿಗೆ ವಿನಂತಿಸಿದೆ. ಇದಲ್ಲದೆ ಬ್ಯಾಂಕಿನ ಖಾತೆಗೆ ಸಂಬಂಧಿಸಿದ ವಿವರಗಳನ್ನು ಕೂಡ ಯಾರೊಂದಿಗೂ ಕೂಡ ಹಂಚಿಕೊಳ್ಳದಂತೆ ಅದು ಸೂಚಿಸಿದೆ.ಇಲ್ಲದೆ ಹೋದರೆ ನಿಮ್ಮ ಖಾತೆ ಖಾಲಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ-Vegetable Price Today: ಸಾರ್ವಜನಿಕರೇ ಗಮನಿಸಿ… ಇಲ್ಲಿದೆ ನೋಡಿ ತರಕಾರಿಗಳ ದರ ವಿವರ
ಮೇಲ್ ಅಥವಾ ಕರೆ ಮೂಲಕ ದೂರು ಸಲ್ಲಿಸಬಹುದು
ಒಂದು ವೇಳೆ ನಿಮ್ಮ ಬಳಿಯೂ ಇಂತಹ ಫೇಕ್ ಸಂದೇಶ ಬಂದಿದ್ದರೆ, report.phishing@sbi.co.in ಗೆ ಮೇಲ್ ಕಳುಹಿಸುವ ಮೂಲಕ ನೀವು ಅದರ ದೂರು ಸಲ್ಲಿಸಬಹುದು. ಇದಲ್ಲದೆ 1930 ನಂಬರ್ ಗೆ ಕರೆ ಮಾಡುವ ಮೂಲಕ ಕೂಡ ನೀವು ನಿಮ್ಮ ದೂರನ್ನು ಸಲ್ಲಿಸಬಹುದು.
ಇದನ್ನೂ ಓದಿ-Gold Price Today : ಚಿನ್ನ ಬೆಳ್ಳಿ ಖರೀದಿಗೂ ಮುನ್ನ ಇಂದಿನ ಬೆಲೆ ತಿಳಿಯಿರಿ
ನೀವೂ ಕೂಡ ಫ್ಯಾಕ್ಟ್ ಚೆಕ್ ನಡೆಸಬಹುದು
ನಿಮ್ಮ ಬಳಿಯೂ ಕೂಡ ಈ ರೀತಿಯ ಸಂದೇಶ ಬಂದಿದ್ದಾರೆ, ಆ ಸಂದೇಶದ ಫ್ಯಾಕ್ಟ್ ಚೆಕ್ ಅನ್ನು ನೀವು ಖುದ್ದಾಗಿ ನಡೆಸಬಹುದು. ಇದಕ್ಕಾಗಿ ಅಧಿಕೃತ ಲಿಂಕ್ ಆಗಿರುವ https://factcheck.pib.gov.in/ ಕ್ಕೆ ಭೇಟಿ ನೀಡಿ. ಇದಲ್ಲದೆ +918799711259 ವಾಟ್ಸ್ ಆಪ್ ಸಂಖ್ಯೆಗೆ ಅಥವಾ pibfactcheck@gmail.com ಗೆ ವಿಡಿಯೋ ಕಳುಹಿಸುವ ಮೂಲಕ ಕೂಡ ಫ್ಯಾಕ್ಟ್ ಚೆಕ್ ನಡೆಸಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.