7th Pay Commission Update: ಕೇಂದ್ರ ಸರ್ಕಾರಿ ನೌಕರರ ಪಾಲಿಗೊಂದು ಬಂಬಾಟ್ ಸುದ್ದಿ ಪ್ರಕಟವಾಗಿದೆ. ಮಾರ್ಚ್ ತಿಂಗಳಿನಲ್ಲಿ ಹೋಳಿ ಹಬ್ಬದ ಹತ್ತಿರದಲ್ಲಿಯೇ ನೌಕರರ ವೇತನದಲ್ಲಿ ಭಾರಿ ಹೆಚ್ಚಳವಾಗುವ ಸಾಧ್ಯತೆ ಇದ್ದು, ಸುಮಾರು 1 ಕೋಟಿಗೂ ಅಧಿಕ ಕೇಂದ್ರ ನೌಕರರು ಹಾಗೂ ಪಿಂಚಣಿದಾರರಿಗೆ ಇದರ ಲಾಭ ಸಿಗುವ ನಿರೀಕ್ಷೆ ಇದೆ. ಮುಂಬರುವ ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ, ಕೇಂದ್ರ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡುವ ಸಾಧ್ಯತೆ ಇದೆ. ಆದರೆ, ಈ ಘೋಷಣೆ 2023ರ ಪಾಲಿಗೆ ಇರಲಿದೆ. ಡಿಸೆಂಬರ್ 2022ರ AICPI ಅಂಕಿಅಂಶಗಳ ಬಳಿಕ ಡಿಎ ಎಷ್ಟು ಹೆಚ್ಚಾಗಲಿದೆ ಎಂಬದು ಈಗಾಗಲೇ ಬಹುತೇಕ ಸ್ಪಷ್ಟವಾಗಿದೆ. ಪ್ರಸ್ತುತ ಸರ್ಕಾರಿ ನೌಕರರಿಗೆ ಶೇ.38 ರಷ್ಟು ತುಟ್ಟಿಭತ್ಯೆ ಸಿಗುತ್ತಿದೆ. ಪ್ರಸ್ತುತ ಪ್ರಕಟವಾಗಿರುವ ಅಂಕಿ ಅಂಶಗಳನ್ನು ಗಮನಿಸಿದರೆ, ತುಟ್ಟಿ ಭತ್ಯೆ ಶೇ.41 ಕ್ಕೆ ತಲುಪುವ ನಿರೀಕ್ಷೆ ಇದೆ.


COMMERCIAL BREAK
SCROLL TO CONTINUE READING

ಡಿಎ ಶೇ.41ಕ್ಕೆ ತಲುಪುವ ನಿರೀಕ್ಷೆ
ಕಾರ್ಮಿಕ ಸಚಿವಾಲಯದ ಪ್ರಕಾರ, ನವೆಂಬರ್ 2022 ರಲ್ಲಿ ಕೈಗಾರಿಕಾ ಕಾರ್ಮಿಕರ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವು 132.5 ರಷ್ಟಿದೆ. ಡಿಸೆಂಬರ್ ತಿಂಗಳ ಅಂಕಿ ಅಂಶವು ಜನವರಿ 31 ರಂದು ಪ್ರಕಟವಾಗುತ್ತಿದೆ. ಸ್ಥಿರವಾಗಿದ್ದರೆ ಶೇ.3ರಷ್ಟು ಏರಿಕೆ ಖಚಿತ ಎನ್ನಲಾಗುತ್ತಿದೆ. ಅದರಲ್ಲಿ ದೊಡ್ಡ ಜಂಪ್ ಇದ್ದರೆ, ಅದು ಕಡಿಮೆಯಾಗುವ ಸಾಧ್ಯತೆಯಿದೆ, ನಂತರ 4% ಹೆಚ್ಚಳವನ್ನು ಸಾಧಿಸಬಹುದು ಎನ್ನಲಾಗಿದೆ. ಇದರಿಂದ ಪ್ರಸ್ತುತ ಇರುವ, ಉದ್ಯೋಗಿಗಳ ಡಿಎಯನ್ನು ಶೇ. 38 ರಿಂದ ಶೇ. 41 ಕ್ಕೆ ಹೆಚ್ಚಿಸಲಾಗುವುದು ಎಂದು ನಿರೀಕ್ಷಿಸಲಾಗುತ್ತಿದೆ.


ವೇತನದಲ್ಲಿ 90 ಸಾವಿರದವರೆಗೆ ಹೆಚ್ಚಳ
ತಜ್ಞರ ಪ್ರಕಾರ, 7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇ. 3 ರಷ್ಟು ಹೆಚ್ಚಿಸಿದರೆ, ಅವರಿಗೆ ದೊಡ್ಡ ಪರಿಹಾರ ಸಿಗಬಹುದು. ಕಳೆದ 6 ತಿಂಗಳಲ್ಲಿ ಹಣದುಬ್ಬರವು ಹೊರೆಯನ್ನು ಸಾಕಷ್ಟು ಹೆಚ್ಚಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಇದು ದೊಡ್ಡ ಪರಿಹಾರವನ್ನು ನೀಡಲಿದೆ. ಉದ್ಯೋಗಿಯ ಮೂಲ ವೇತನವು ತಿಂಗಳಿಗೆ 30 ಸಾವಿರ ರೂಪಾಯಿಗಳಾಗಿದ್ದರೆ, ಇದು ತಿಂಗಳಿಗೆ 900 ರೂಪಾಯಿಗಳಷ್ಟು ಸಂಬಳವನ್ನು ಹೆಚ್ಚಿಸುತ್ತದೆ. ಅವರ ಒಟ್ಟು ವೇತನವು ವಾರ್ಷಿಕ ಆಧಾರದ ಮೇಲೆ 10,800 ರೂ.ಗಳಷ್ಟು ಹೆಚ್ಚಾಗುತ್ತದೆ. ಕ್ಯಾಬಿನೆಟ್ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ವೇತನವನ್ನು ತಿಂಗಳಿಗೆ 7500 ರೂ.ವರೆಗೆ ಹೆಚ್ಚಾಗಲಿದೆ. ಅಂದರೆ ಗರಿಷ್ಠ ಮೂಲ ವೇತನ ತಿಂಗಳಿಗೆ 2.5 ಲಕ್ಷ ರೂ. ಇದ್ದರೆ, ಇಂತಹ ಪರಿಸ್ಥಿತಿಯಲ್ಲಿ ಅವರ ವಾರ್ಷಿಕ ಡಿಎ 90 ಸಾವಿರ ರೂ.ಹೆಚ್ಚಾಗಲಿದೆ.


ತುಟ್ಟಿಭತ್ಯೆ ಹೆಚ್ಚಾಗುವ ಸಾಧ್ಯತೆ ಕಡಿಮೆಯೇ?
ವಾಸ್ತವವಾಗಿ, ಕಳೆದ ಎರಡು ತಿಂಗಳುಗಳಲ್ಲಿ, ಚಿಲ್ಲರೆ ಹಣದುಬ್ಬರವು ತುಂಬಾ ಕಡಿಮೆಯಾಗಿದೆ. ಡಿಸೆಂಬರ್‌ನಲ್ಲಿ ಸಿಪಿಐ ಒಂದು ವರ್ಷದ ಕನಿಷ್ಠ ಮಟ್ಟವನ್ನು ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ, ಎಐಸಿಪಿಐ ಸೂಚ್ಯಂಕವನ್ನು ಹೆಚ್ಚಿಸುವುದು ಕಷ್ಟ. 4% DA ಹೆಚ್ಚಳಕ್ಕೆ, ಸೂಚ್ಯಂಕದಲ್ಲಿ 1 ಪಾಯಿಂಟ್‌ನ ಜಂಪ್ ಅಗತ್ಯವಿದೆ. ಈ ಬಗ್ಗೆ ಸ್ವಲ್ಪ ಭರವಸೆ ಇದೆ. ಏಕೆಂದರೆ, ಹಣದುಬ್ಬರದ ಅನುಪಾತದಲ್ಲಿ ಮಾತ್ರ ಸೂಚ್ಯಂಕ ಹೆಚ್ಚಾಗುತ್ತದೆ. ಹೀಗಿರುವಾಗ, ಈ ಅವಕಾಶವು ತುಂಬಾ ಕಡಿಮೆಯಾಗಿದ್ದು, 4 ಪ್ರತಿಶತದಷ್ಟು ಜಿಗಿತ ನಿರೀಕ್ಷಿಸುವುದು ಕಷ್ಟ ಸಾಧ್ಯ. ಈ ಕಾರಣದಿಂದ ಡಿಎ ಶೇ.3ರಷ್ಟು ಮಾತ್ರ ಹೆಚ್ಚಾಗಲಿದೆ ಎಂದು ತಜ್ಞರು ಕೂಡ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 7 ನೇ ವೇತನ ಆಯೋಗದ ಅಡಿಯಲ್ಲಿ ತುಟ್ಟಿಭತ್ಯೆಯು ಸರ್ಕಾರಿ ನೌಕರರಿಗೆ ಅವರ ಜೀವನ ವೆಚ್ಚವನ್ನು ಸುಧಾರಿಸಲು ನೀಡಲಾಗುತ್ತದೆ.


ಇದನ್ನೂ ಓದಿ-ಬಜೆಟ್ ಮಂಡನೆಗೂ ಮುನ್ನವೇ ನೌಕರ ವರ್ಗಕ್ಕೆ ಭಾರಿ ಸಂತಸದ ಸುದ್ದಿ! ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ ಗೊತ್ತಾ?


6 ತಿಂಗಳಲ್ಲಿ ಡಿಎ ಪರಿಷ್ಕರಣೆ?
ನೌಕರರ ಜೀವನಮಟ್ಟವನ್ನು ಸುಧಾರಿಸಲು ತುಟ್ಟಿಭತ್ಯೆ ನೀಡಲಾಗುತ್ತದೆ. ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಸಾರ್ವಜನಿಕ ವಲಯದ ನೌಕರರಿಗೆ ಈ ಭತ್ಯೆ ನೀಡಲಾಗುತ್ತದೆ. ಹಣದುಬ್ಬರ ಏರಿಕೆಯ ನಂತರವೂ ಉದ್ಯೋಗಿಗಳಿಗೆ ಜೀವನ ನಡೆಸಲು ಯಾವುದೇ ತೊಂದರೆಯಾಗದಂತೆ ತುಟ್ಟಿಭತ್ಯೆ ನೀಡಲಾಗುತ್ತದೆ. ಸಾಮಾನ್ಯವಾಗಿ, ತುಟ್ಟಿಭತ್ಯೆಯನ್ನು ಪ್ರತಿ 6 ತಿಂಗಳಿಗೊಮ್ಮೆ ಜನವರಿ ಮತ್ತು ಜುಲೈನಲ್ಲಿ ಪರಿಷ್ಕರಿಸಲಾಗುತ್ತದೆ.


ಇದನ್ನೂ ಓದಿ-ನೀವೂ ಸುಪುತ್ರಿಗೆ ಪೋಷಕರಾಗಿದ್ದರೆ ಎಸ್ಬಿಐ ನೀಡುತ್ತದೆ 15 ಲಕ್ಷ! ವಿವಾಹ-ವಿದ್ಯಾಭ್ಯಾಸ ಯಾವುದಕ್ಕಾದರೂ ಬಳಸಿಕೊಳ್ಳಿ


ಯಾವ ಸೂತ್ರದ ಅಡಿಯಲ್ಲಿ ತುಟ್ಟಿಭತ್ಯೆ ಹೆಚ್ಚಾಗುತ್ತದೆ?
ತುಟ್ಟಿಭತ್ಯೆಯನ್ನು ಮೂಲ ವೇತನದ ಆಧಾರದ ಮೇಲೆ ಮೇಲೆ ಲೆಕ್ಕ ಹಾಕಲಾಗುತ್ತದೆ. ತುಟ್ಟಿಭತ್ಯೆಯ ಲೆಕ್ಕಾಚಾರಕ್ಕೆ ಸೂತ್ರವನ್ನು ನಿಗದಿಪಡಿಸಲಾಗಿದೆ, ಇದನ್ನು ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ನಿರ್ಧರಿಸುತ್ತದೆ. ತುಟ್ಟಿಭತ್ಯೆ ಶೇಕಡಾವಾರು = ಕಳೆದ 12 ತಿಂಗಳ CPI ನ ಸರಾಸರಿ-115.76. ಇದರ ಉತ್ತರ ಏನೇ ಬಂದರೂ ಅದನ್ನು 115.76 ರಿಂದ ಭಾಗಿಸಲಾಗುತ್ತದೆ. ಬರುವ ಸಂಖ್ಯೆಯನ್ನು 100 ರಿಂದ ಗುಣಿಸಲಾಗುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.