ಸರ್ಕಾರಿ ನೌಕರರಿಗೆ ಬಂಪರ್ : ಡಿಎ ಶೇ.4ರಷ್ಟು ಹೆಚ್ಚಳ, 2 ಕಂತುಗಳಲ್ಲಿ ಕೈ ಸೇರುವುದು ಅರಿಯರ್ಸ್
7th Pay Commission : ನಿಯಮಿತ ಕೆಲಸ ಮಾಡುವ ಸರ್ಕಾರಿ ನೌಕರರ ಶಿಫಾರಸಿನ ಆಧಾರದ ಮೇಲೆ, ತುಟ್ಟಿಭತ್ಯೆಯನ್ನು ಶೇ. 34 ರಿಂದ 38 ಕ್ಕೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಇಲಾಖೆಯ ಕಾರ್ಯದರ್ಶಿ ಹೊರಡಿಸಿದ ಆದೇಶದಲ್ಲಿ ಹೇಳಲಾಗಿದೆ.
7th Pay Commission : ಕೇಂದ್ರ ಸರ್ಕಾರವು ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿತ್ತು. ಈಗ ಮತ್ತೆ ರಾಜ್ಯ ಸರ್ಕಾರ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರದ ನಂತರ ಬಿಹಾರ, ಜಾರ್ಖಂಡ್, ಪಂಜಾಬ್, ಹಿಮಾಚಲ ಪ್ರದೇಶ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ತಮ್ಮ ಉದ್ಯೋಗಿಗಳಿಗೆ ಗುಡ್ ನ್ಯೂಸ್ ನೀಡಿವೆ.
ತುಟ್ಟಿಭತ್ಯೆ ಹೆಚ್ಚಳ ಜನವರಿ 1, 2022 ರಿಂದ ಜಾರಿಗೆ :
ಮೂಲ ವೇತನದ ಆಧಾರದ ಮೇಲೆ ನೌಕರರಿಗೆ ತುಟ್ಟಿಭತ್ಯೆಯನ್ನು ನೀಡಲಾಗುತ್ತದೆ. ನಿಯಮಿತ ಕೆಲಸ ಮಾಡುವ ಸರ್ಕಾರಿ ನೌಕರರ ಶಿಫಾರಸಿನ ಆಧಾರದ ಮೇಲೆ, ತುಟ್ಟಿಭತ್ಯೆಯನ್ನು ಶೇ. 34 ರಿಂದ 38 ಕ್ಕೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಇಲಾಖೆಯ ಕಾರ್ಯದರ್ಶಿ ಹೊರಡಿಸಿದ ಆದೇಶದಲ್ಲಿ ಹೇಳಲಾಗಿದೆ. ಹೊಸ ತುಟ್ಟಿಭತ್ಯೆ ಜನವರಿ 1, 2022 ರಿಂದ ಜಾರಿಗೆ ಬರಲಿದೆ.
ಇದನ್ನೂ ಓದಿ : Gold Price Today : ಇಂದು ಚಿನ್ನ ಕೊಂಚ ಅಗ್ಗ, ಬೆಳ್ಳಿ ದುಬಾರಿ
ಎರಡು ಕಂತುಗಳಲ್ಲಿ ಬಾಕಿ ಪಾವತಿ :
ಬಾಕಿ ಇರುವ ಅರಿಯರ್ಸ್ ಅನ್ನು ಎರಡು ಕಂತುಗಳಲ್ಲಿ ಪಾವತಿ ಮಾಡಲಾಗುವುದು ಎಂದು ಕೂಡಾ ಆದೇಶದಲ್ಲಿ ತಿಳಿಸಲಾಗಿದೆ. ಮೊದಲ ಕಂತಿನ ಬಾಕಿಯನ್ನು ನವೆಂಬರ್ ಕೊನೆಯ ತಿಂಗಳಲ್ಲಿ ಮತ್ತು ಎರಡನೇ ಕಂತನ್ನು ಡಿಸೆಂಬರ್‌ನಲ್ಲಿ ಪಾವತಿಸಲಾಗುವುದು. ಪಿಂಚಣಿದಾರರ ತುಟ್ಟಿಭತ್ಯೆಯನ್ನೂ ಶೇ.4ರಷ್ಟು ಹೆಚ್ಚಿಸಲಾಗಿದೆ. ಈ ಬಾಕಿಯನ್ನು ಕೂಡಾ ಎರಡು ಕಂತುಗಳಲ್ಲಿ ನಗದು ರೂಪದಲ್ಲಿ ಪಾವತಿಸಲಾಗುವುದು.
ಕೇಂದ್ರ ಸರ್ಕಾರದೊಂದಿಗೆ, ಅನೇಕ ರಾಜ್ಯ ಸರ್ಕಾರಗಳು ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ತುಟ್ಟಿಭತ್ಯೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಕೇಂದ್ರ ಮತ್ತು ವಿವಿಧ ರಾಜ್ಯ ಸರಕಾರಗಳ ಈ ನಿರ್ಧಾರದಿಂದ ಕೋಟ್ಯಂತರ ಸರಕಾರಿ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಕೇಂದ್ರ ಸರ್ಕಾರಿ ನೌಕರರ ಮುಂದಿನ ತುಟ್ಟಿಭತ್ಯೆ ಹೆಚ್ಚಳ ಜನವರಿ 2023 ರಲ್ಲಿ ಜಾರಿಗೆ ಬರಲಿದೆ. ಈ ಹೆಚ್ಚಳ ಮಾರ್ಚ್ 2023 ರಲ್ಲಿ ಘೋಷಣೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ : Fact Check: ಪ್ಯಾನ್ ಅಪ್‌ಡೇಟ್ ಮಾಡದಿದ್ದರೆ ನಿಮ್ಮ ಖಾತೆ ಕ್ಲೋಸ್ ಆಗುತ್ತಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.