ಗ್ರಾಹಕರಿಗೆ ಕೆಎಂಎಫ್ ತುಪ್ಪದ ಬರೆ: ನಂದಿನ ತುಪ್ಪದ ದರ ಹೆಚ್ಚಳ

2022ರ ಆಗಸ್ಟ್ 22 ರಂದು 450 ರೂ.ಗೆ ಮಾರಾಟವಾಗಿದ್ದ ಒಂದು ಲೀಟರ್ ನಂದಿನಿ ತುಪ್ಪ ಈಗ ಲೀಟರ್‌ಗೆ 630 ರೂ.ಗೆ ಮಾರಾಟವಾಗುತ್ತಿದೆ. ಹಬ್ಬದ ಋತು ಆರಂಭವಾಗುವ ಪೂರ್ವದಲ್ಲಿ ಒಂದು ಲೀಟರ್‌ ತುಪ್ಪ 450 ರೂ.ಗೆ ಮಾರಾಟ ಮಾಡಲಾಗಿತ್ತು. ಹಬ್ಬದ ಋತುವಿನಲ್ಲಿ ಕೆಎಂಎಫ್‌ ನಿಯಮಿತವಾಗಿ ತುಪ್ಪದ ಬೆಲೆ ಏರಿಕೆಯನ್ನು ಪ್ರಾರಂಭಿಸಿತು. 

Written by - Yashaswini V | Last Updated : Nov 8, 2022, 02:15 PM IST
  • ತುಪ್ಪ ತಿನ್ನುವ ಗ್ರಾಹಕರಿಗೆ ಕಹಿ ಸುದ್ದಿ
  • ಎರಡೂವರೆ ತಿಂಗಳಲ್ಲಿ ಲೀಟರ್‌ ತುಪ್ಪಕ್ಕೆ ಬರೊಬ್ಬರಿ 180 ರೂ. ಹೆಚ್ಚಳ
  • ಈಗ ಲೀಟರ್‌ ತುಪ್ಪ ಬರೋಬ್ಬರಿ 610 ರೂ.ಗೆ ಮಾರಾಟ
ಗ್ರಾಹಕರಿಗೆ ಕೆಎಂಎಫ್ ತುಪ್ಪದ ಬರೆ: ನಂದಿನ ತುಪ್ಪದ ದರ ಹೆಚ್ಚಳ title=
Nandini Ghee Price Hike

ಬೆಂಗಳೂರು: ನಂದಿನಿ ಬ್ರಾಂಡ್​ನ ಅಡಿಯಲ್ಲಿ ಹಲವು ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌) ನಂದಿನಿ ತುಪ್ಪದ ದರವನ್ನು ಹೆಚ್ಚಿಸಿದೆ. ಎರಡೂವರೆ ತಿಂಗಳಲ್ಲಿ ಒಂದು ಲೀಟರ್ ತುಪ್ಪದ ಬೆಲೆ ಬರೋಬ್ಬರಿ 180 ರೂ. ಹೆಚ್ಚಳವಾಗಿದ್ದು, ಹಣದುಬ್ಬರದಿಂದ ತತ್ತರಿಸಿರುವ ಜನರಿಗೆ ನಂದಿನಿ ತುಪ್ಪ ಈಗ ಬಿಸಿ ತುಪ್ಪವಾಗಿ ಪರಿಣಮಿಸಿದೆ. 

2022ರ ಆಗಸ್ಟ್ 22 ರಂದು 450 ರೂ.ಗೆ ಮಾರಾಟವಾಗಿದ್ದ ಒಂದು ಲೀಟರ್ ನಂದಿನಿ ತುಪ್ಪ ಈಗ ಲೀಟರ್‌ಗೆ 630 ರೂ.ಗೆ ಮಾರಾಟವಾಗುತ್ತಿದೆ. ಹಬ್ಬದ ಋತು ಆರಂಭವಾಗುವ ಪೂರ್ವದಲ್ಲಿ ಒಂದು ಲೀಟರ್‌ ತುಪ್ಪ 450 ರೂ.ಗೆ ಮಾರಾಟ ಮಾಡಲಾಗಿತ್ತು. ಹಬ್ಬದ ಋತುವಿನಲ್ಲಿ ಕೆಎಂಎಫ್‌ ನಿಯಮಿತವಾಗಿ ತುಪ್ಪದ ಬೆಲೆ ಏರಿಕೆಯನ್ನು ಪ್ರಾರಂಭಿಸಿತು. 

ಇದನ್ನೂ ಓದಿ- Google Pay Fact Check: Google Pay ಗೆ RBI ಪಾವತಿ ವ್ಯವಸ್ಥೆಯ ಪರವಾನಗಿ ನೀಡಿಲ್ಲವೇ? ಇಲ್ಲಿದೆ ಸತ್ಯಾಸತ್ಯತೆ!

ನಂದಿನಿ ತುಪ್ಪ ಸೆಪ್ಟೆಂಬರ್‌ ಮೊದಲ ವಾರ ಲೀಟರ್‌ಗೆ 470 ರೂ.ಗೆ ಮಾರಾಟವಾಗುತ್ತಿತ್ತು. ಅಕ್ಟೋಬರ್‌ನಲ್ಲಿ ಒಂದು ಲೀಟರ್‌ ತುಪ್ಪವನ್ನು 518 ರೂ.ಗೆ ಮಾರಾಟ ಮಾಡಲಾಗಿತ್ತು. ಈಗ ಕಳೆದ ಒಂದು ವಾರದಿಂದ 620 ರೂ.ನಿಂದ 630 ರೂ.ಗೆ ಮಾರಾಟವಾಗುತ್ತಿದೆ ಎಂದು ಕೆಎಂಎಫ್ ರೀಟೇಲ್ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.  

ಇದನ್ನೂ ಓದಿ- FD ಹಣಕ್ಕೆ ಶೇ.7 ಕ್ಕಿಂತ ಹೆಚ್ಚು ಬಡ್ಡಿ ಸಿಗಲಿದೆ, ಈ 4 ಸರ್ಕಾರಿ ಬ್ಯಾಂಕ್‌ಗಳಲ್ಲಿ!

ಒಂದು ತಿಂಗಳ ಹಿಂದೆ 113 ರೂ.ಗೆ ಮಾರಾಟವಾದ 200 ಎಂಎಲ್‌  ನಂದಿನಿ ತುಪ್ಪದ ಸ್ಯಾಚೆ ಈಗ 135 ರೂ. ಬೆಲೆಯಿದೆ. ಪೆಟ್‌ ಬಾಟಲ್‌ ಬೆಲೆಯೂ 122 ರೂ.ನಿಂದ 145 ರೂ.ಗೆ ಏರಿಕೆಯಾಗಿದೆ. ಅದೇ ರೀತಿ 259 ರೂ.ಗೆ ಲಭ್ಯವಿದ್ದ ಅರ್ಧ ಲೀಟರ್‌ ಸ್ಯಾಚೆ ಈಗ 305 ರೂ.ಗೆ ಮಾರಾಟವಾಗುತ್ತಿದ್ದು, ಅದೇ ಪ್ರಮಾಣದ ಪೆಟ್‌ ಬಾಟಲ್‌ ಅನ್ನು  ಹಿಂದೆ 268  ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು, ಈಗ 315 ರೂ.ಗೆ ಮಾರಾಟವಾಗುತ್ತಿದೆ ಎಂದು ಚಿಲ್ಲರೆ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News