ನವದೆಹಲಿ : ಕೇಂದ್ರ ನೌಕರರ ಟ್ರಾವೆಲ್ ಅಲೊವೆನ್ಸ್  (Travel Allowance-TA) ಅಂದರೆ ಯಾತ್ರಾ ಭತ್ಯೆ ಕುರಿತಂತೆ ಒಂದು ಸಿಹಿ ಸುದ್ದಿ ಇದೆ.  ಡಿಎ (DA) ಮತ್ತು ಡಿಆರ್  ಮರುಆರಂಭದ ದಿನವನ್ನು ನಿರೀಕ್ಷೆ ಮಾಡುತ್ತಿರುವ ನಡುವೆಯೇ, ಕೇಂದ್ರ ನೌಕರರಿಗೆ ಟಿಎ  ಕ್ಲೈಮ್ (TA Claim) ಕುರಿತ ಗುಡ್ ನ್ಯೂಸ್ ಬಂದಿದೆ 


COMMERCIAL BREAK
SCROLL TO CONTINUE READING

ಟಿಎ ಕ್ಲೈಮ್ ಜಮೆ ಮಾಡುವ ಅವಧಿ ವಿಸ್ತರಣೆ :
ನಿವೃತ್ತಿಯ ಮೇಲೆ ಪ್ರಯಾಣ ಭತ್ಯೆ-ಟಿಎ ಕ್ಲೈಮ್  (TA Claim) ಸಲ್ಲಿಸುವ ಸಮಯದ ಮಿತಿಯನ್ನು ಸರ್ಕಾರ 60 ದಿನಗಳಿಂದ 120 ದಿನಗಳಿಗೆ ಹೆಚ್ಚಿಸಿದೆ. ಆದಾಗ್ಯೂ, ಪ್ರವಾಸ, ವರ್ಗಾವಣೆ ಮತ್ತು ತರಬೇತಿಗಾಗಿ ಟಿಎ ಕ್ಲೈಮ್ ಮಾಡುವ  ಸಮಯ ಮಿತಿ 60 ದಿನಗಳು ಹಾಗೇ ಉಳಿಯಲಿದೆ.  ಈ ಆದೇಶಗಳು ಜೂನ್ 15, 2021 ರಿಂದ ಜಾರಿಗೆ ಬಂದಿವೆ.


ಇದನ್ನೂ ಓದಿ : PM Kisan: ನೋಂದಣಿ ನಂತರವೂ ನಿಮ್ಮ ಖಾತೆಗೆ ಹಣ ಬಂದಿಲ್ಲವೇ? ಮುಂದಿನ ಕಂತಿನ ಮೊದಲು ಈ ಕೆಲಸ ಮಾಡಿ


ಟಿಎ ಕ್ಲೈಮ್ ಅವಧಿ  ವಿಸ್ತರಿಸುವ ಬೇಡಿಕೆ ಕೇಳಿ ಬಂದಿತ್ತು :
ರಿಟಾಯರ್ಡ್ ಆದ ಮೇಲೆ ಟಿಎ ಕ್ಲೈಮ್ ಮಾಡುವ ಅವಧಿ ವಿಸ್ತರಿಸಿ ವಿತ್ತ ಸಚಿವಾಲಯವೇ ಅಧಿಕೃತ ಆದೇಶ ಹೊರಡಿಸಿದೆ. ನಿವೃತ್ತಿಯಾದ ಮೇಲೆ ತಮ್ಮ ಸ್ವಂತ ಊರಿಗೆ ಹೋಗಿ ನೆಲೆಸಲು ಕೈಗೊಳ್ಳುವ ಯಾತ್ರೆಗೆ ಸಂಬಂಧಿಸಿದ ಖರ್ಚುವೆಚ್ಚಗಳ ಕ್ಲೈಮ್ ಜಮೆ ಮಾಡಲು ಮೊದಲು 60 ದಿನ ಸಮಯ  ಇತ್ತು. ಇದೀಗ ಅದರ ವಿಸ್ತರಣೆಯಾಗಿದೆ. ಅಂದರೆ ನಾಲ್ಕು ತಿಂಗಳಿನಲ್ಲಿ ಅದನ್ನು ಸಲ್ಲಿಸಬಹುದಾಗಿದೆ.


ಸಮಯ ವಿತಿ ವಿಸ್ತರಿಸಿದ್ದು ಯಾಕೆ..?
ನಿವೃತ್ತಿಯಾದ ಮೇಲೆ ಯಾವುದೇ ಸರ್ಕಾರಿ ನೌಕರನಿಗೆ ತನ್ನ ಪರಿವಾರ ಸಮೇತ ತಮ್ಮ ಸ್ವಂತ ಊರಿಗೆ ಹೋಗಿ ನೆಲೆಸುವಲ್ಲಿ ಸಮಸ್ಯೆ ಉಂಟಾಗುತ್ತಿತ್ತು. ಅದಕ್ಕೆ ಸಂಬಂಧಿಸಿದ ಖರ್ಚಿನ ಲೆಕ್ಕವನ್ನು 60 ದಿನಗಳ ಒಳಗೆ ಸಲ್ಲಿಸಬೇಕಿತ್ತು. ಆದರೆ,  ಸಮಯ ವಿಸ್ತರಿಸುವಂತೆ ಕೋರಿ ಮನವಿ ಬಂದಿತ್ತು. ಇವನ್ನೆಲ್ಲಾ ವಿಚಾರ ವಿಮರ್ಶೆ ಮಾಡಿದ ಮಾಡಿದ ಮೇಲೆ ಟಿಎ ಕ್ಲೈಮ್ ಗೆ ತಗುಲುವ ಸಮಯ ವಿಸ್ತರಿಸಲಾಗಿದೆ. 


ಇದನ್ನೂ ಓದಿ : ಸಾಲ ಪಡೆದ ವ್ಯಕ್ತಿ ಸಾವನ್ನಪ್ಪಿದರೆ ಸಾಲಕ್ಕೆ ಹೊಣೆ ಯಾರು? ಬ್ಯಾಂಕ್ ಯಾರಿಂದ ವಸೂಲು ಮಾಡಲಿದೆ ಬಾಕಿ ಮೊತ್ತ ?


ಡಿಎ ಅರಿಯರ್ಸ್ ಕುರಿತಂತೆ ಸಭೆ :
ಇದೇ ವೇಳೆ ಕೇಂದ್ರ ನೌಕರರು (Central government employees) ಮತ್ತು ಪಿಂಚಣಿದಾರರಿಗೆ ತಮ್ಮ 3 ನೇ ಡಿಎ ಅರಿಯರ್ಸ್ ಕುರಿತಂತೆ ನಿರೀಕ್ಷೆ ಹೆಚ್ಚಾಗಿದೆ.  ಜೂನ್ 26ರಂದು ಈ ಸಂಬಂಧ ಹಣಕಾಸು ಸಚಿವಾಲಯ ಸಭೆ ನಡೆಸಲಿದೆ. ಈ ಸಭೆಯಲ್ಲಿ ನಿರ್ಣಯ ಹೊರಬೀಳುವ ಸಾಧ್ಯತೆ ಇದೆ. 


ಡಿಎ ಅರಿಯರ್ಸ್ ಗಾಗಿ ನಿರೀಕ್ಷೆ :
ಡಿಎ ಮತ್ತು ಡಿಆರ್ (DA and DR) ಜುಲೈ 1 ರಿಂದ ಮತ್ತು ಶುರುಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ, ಬಾಕಿ ಇರುವ ಮೂರು ಕಂತಿನ ಡಿಎ ಕುರಿತಂತೆ ಇದುವರೆಗೆ ಅಧಿಕೃತ ಹೇಳಿಕೆ ಯಾವುದೂ ಬಂದಿಲ್ಲ.  ಹಾಗಾಗಿ, ನೌಕರರ ಮನಸ್ಸಿನಲ್ಲಿ ಗೊಂದಲ ನೆಲೆಯೂರಿದೆ. ಜುಲೈ 1 ರಿಂದ ಡಿಎ ಹೆಚ್ಚಳ ಸೇರಿದಂತೆ ಡಿಎ ಆರಿಯರ್ಸ್ ಕೂಡಾ ಸಿಗಬಹುದು ಎಂಬ ನಿರೀಕ್ಷೆ ನೌಕರ ವರ್ಗದಲ್ಲಿದೆ. 
 
ಇದನ್ನೂ ಓದಿ : SBI Doorstep Banking : SBI ಗ್ರಾಹಕರಿಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ! ಇಲ್ಲಿದೆ ಸಂಪೂರ್ಣ ಮಾಹಿತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.