ನವದೆಹಲಿ : Loan Repayment: ನಮ್ಮ ಕುಟುಂಬದ ಸಂತೋಷಕ್ಕಾಗಿ ಏನು ಮಾಡಲೂ ಹಿಂಜರಿಯುವುದಿಲ್ಲ. ಗೃಹ ಸಾಲವನ್ನು (Home loan) ತೆಗೆದುಕೊಂಡು ಮನೆ ಖರೀದಿಸುತ್ತೇವೆ, ಆಟೋ ಸಾಲದ (Auto loan)ಮೂಲಕ ಕಾರು ಖರೀದಿಸುತ್ತೇವೆ. ಇಷ್ಟು ಮಾತ್ರವಲ್ಲ ಸಣ್ಣ ಪುಟ್ಟ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ, ಸಾಲವನ್ನು ಪಡೆಯುತ್ತೇವೆ. ಆದರೆ ಜೀವನದಲ್ಲಿ ಯಾವ ಕ್ಷಣ ನು ಬೇಕಾದರೂ ಸಂಭವಿಸಬಹುದು. ಹೀಗಿರುವಾಗ ಒಂದು ವೇಳೆ ಸಾಲ ಪಡೆದ ವ್ಯಕ್ತಿಯ ಸಾವು ಸಂಭವಿಸಿದರೆ, ಆ ಸಾಲಕ್ಕೆ ಹೊಣೆ ಯಾರು ? ಸಾಲದ ಹೊಇರೆ ಯಾರ ತಲೆಯ ಮೇಲೆ ಬೀಳಲಿದೆ? ಎನ್ನುವ ಮಾಹಿತಿ ಇದೆಯಾ?
ಸಾಲಗಾರನ ಮರಣದ ನಂತರ ಜವಾಬ್ದಾರಿ ಯಾರ ಹೆಗಲಿಗೆ ?
ಈ ಪ್ರಶ್ನೆಗೆ ಉತ್ತರವನ್ನು ತಿಳಿಯಬೇಕಾದರೆ, ಎಲ್ಲಾ ಸಾಲಗಳು ಒಂದೇ ರೀತಿಯದ್ದಾಗಿರುವುದಿಲ್ಲ ಎಂದು ಮೊದಲು ಅರ್ಥ ಮಾಡಿಕೊಳ್ಳಬೇಕು. ಸಾಲಗಳಲ್ಲಿ ಸೆಕ್ಯುರ್ಡ್ ಮತ್ತು ಅನ್ ಸೆಕ್ಯುರ್ಡ್ ಎಂದು ಎರಡು ವಿಭಾಗಗಳಿರುತ್ತವೆ. ಸೆಕ್ಯುರ್ಡ್ ಸಾಲ (Secured loan) ಎಂದರೆ ಗೃಹ ಸಾಲ, ವಾಹನ ಸಾಲ ಮತ್ತು ಅನ್ ಸೆಕ್ಯುರ್ಡ್ ಲೋನ್ ಎಂದರೆ, ವೈಯಕ್ತಿಕ ಸಾಲದ ಇಎಂಐ, ಕ್ರೆಡಿಟ್ ಕಾರ್ಡ್ ಇತ್ಯಾದಿ. ಹಾಗಿದ್ದರೆ, ಸಾಲಗಾರನ ಸಾವು ಸಂಭವಿಸಿದರೆ, ಬ್ಯಾಂಕ್ (Bank) ವಸೂಲಿಗಾಗಿ ಕುಟುಂಬದ ಮೇಲೆ ಒತ್ತಡ ಹೇರಬಹುದೇ ಎಂದು ತಿಳಿದುಕೊಳ್ಳೋಣ.
ಇದನ್ನೂ ಓದಿ : SBI Doorstep Banking : SBI ಗ್ರಾಹಕರಿಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ! ಇಲ್ಲಿದೆ ಸಂಪೂರ್ಣ ಮಾಹಿತಿ
ಗೃಹ ಸಾಲ :
ಜಾಯಿಂಟ್ ಅಕೌಂಟ್ ಮೂಲಕ ಗೃಹ ಸಾಲ (Home loan) ಪಡೆದಿದ್ದರೆ, ಪ್ರಾಥಮಿಕ ಅರ್ಜಿದಾರನ ಸಾವು ಸಂಭವಿಸಿದರೆ, ಸಾಲವನ್ನು ಮರುಪಾವತಿಸುವ ಸಂಪೂರ್ಣ ಜವಾಬ್ದಾರಿ ಸಹ-ಅರ್ಜಿದಾರರ ಮೇಲಿರುತ್ತದೆ. ಇತರ ಅರ್ಜಿದಾರರಿಗೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ಸಿವಿಲ್ ಕೋರ್ಟ್ (Civil court), ಸಾಲ ರಿಕವರಿ ಟ್ರಿಬ್ಯುನಲ್ ಅಥವಾ SARFAESI Act ಅಡಿ ಮರುಪಾವತಿ ಪಡೆಯುವ ಹಕ್ಕು ಬ್ಯಾಂಕಿಗಿದೆ. ಆಸ್ತಿಯನ್ನು ಸ್ವಾಧೀನಪಡಿಸಿಕೊಂಡು ಮಾರಾಟ ಮಾಡುವ ಮೂಲಕ ಬ್ಯಾಂಕ್ ತನ್ನ ಸಾಲವನ್ನು ಮರುಪಡೆಯಬಹುದು. ಹಾಗಿದ್ದರೂ ಸಾಲ ಮರುಪಾವತಿಗಾಗಿ, ಬ್ಯಾಂಕುಗಳು ಕುಟುಂಬ ಸದಸ್ಯರಿಗೆ ಕೆಲವು ದಿನಗಳ ಸಮಯಾವಕಾಶವನ್ನು ನೀಡುತ್ತದೆ.
ವಾಹನ ಸಾಲ :
ವಾಹನ ಸಾಲವನ್ನು (Auto loan) ಪಡೆದುಕೊಂಡ ವ್ಯಕ್ತಿ ಮೃತಪಟ್ಟರೆ, ಈ ಸಾಲವನ್ನು ಮರುಪಾವತಿಸುವ ಜವಾಬ್ದಾರಿ ಕುಟುಂಬದ ಮೇಲೆ ಬರುತ್ತದೆ. ಈ ಸಾಲವನ್ನು ಮರುಪಾವತಿಸಲು ಬ್ಯಾಂಕ್ (Bank) ಕುಟುಂಬ ಸದಸ್ಯರನ್ನು ಕೇಳುತ್ತದೆ. ಈ ಸಾಲವನ್ನು ಮರುಪಾವತಿಸಲು ಕುಟುಂಬವು ಸಿದ್ಧವಿಲ್ಲದೇ ಹೋದರೆ, ಬ್ಯಾಂಕ್ ವಾಹನವನ್ನು ವಶಕ್ಕೆ ಪಡೆಯುತ್ತದೆ.
ಇದನ್ನೂ ಓದಿ : Online Shopping: ನೀವೂ Amazon-Flipkart ಮೇಲೆ Online Shopping ಮಾಡುತ್ತಿದ್ದರೆ ಈ ಸುದ್ದಿ ತಪ್ಪದೆ ಓದಿ
ವೈಯಕ್ತಿಕ ಸಾಲ / ಕ್ರೆಡಿಟ್ ಕಾರ್ಡ್:
ವೈಯಕ್ತಿಕ ಸಾಲಗಳು (Personal loan), ಕ್ರೆಡಿಟ್ ಕಾರ್ಡ್ ಬಿಲ್‌ಗಳು, ಇವೆಲ್ಲವೂ ಅಸುರಕ್ಷಿತ ಸಾಲಗಳ ವರ್ಗಕ್ಕೆ ಬರುತ್ತವೆ. ಒಬ್ಬ ವ್ಯಕ್ತಿಯು ತನ್ನ ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ (Credit card bill) ಬಿಲ್ ಪಾವತಿಸದೆ ಮೃತಪಟ್ಟರೆ, ಬ್ಯಾಂಕ್ ಈ ಸಾಲಕಮ್ಕಾಗಿ ಕುಟುಂಬ ಸದಸ್ಯರನ್ನು ಕೇಳುವಂತಿಲ್ಲ. ಇದು ಅಸುರಕ್ಷಿತ ಸಾಲವಾಗಿರುವುದರಿಂದ, ಆಸ್ತಿಯನ್ನು ಲಗತ್ತಿಸಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಬ್ಯಾಂಕುಗಳು ಅದನ್ನು ಎನ್‌ಪಿಎ (NPA) ಖಾತೆಗೆ ಸೇರಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.