7th Pay Commission: ಸರ್ಕಾರಿ ನೌಕರರಿಗೆ ಡಬಲ್ ಧಮಾಕಾ! DA ಬಳಿಕ ಇದೀಗ TAಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟ

7th Pay Commission: ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಹೌದು ಕೇಂದ್ರ ಸರ್ಕಾರ ಕೋಟ್ಯಂತರ ನೌಕರರು ಹಾಗೂ ಪಿಂಚಣಿದಾರರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ

Written by - Nitin Tabib | Last Updated : Jun 20, 2021, 02:06 PM IST
  • ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೊಂದು ಸಿಹಿ ಸುದ್ದಿ.
  • ಕೇಂದ್ರ ಸರ್ಕಾರಿ ನೌಕರರಿಗೆ ಸಿಗಲಿದೆ ಡಬಲ್ ಧಮಾಕಾ.
  • DA ಬಳಿಕ ಇದೀಗ TAಗೆ ಸಂಬಂಧಿಸಿದ ಮಹತ್ವದ ಅಪ್ಡೇಟ್ ಪ್ರಕಟ.
7th Pay Commission: ಸರ್ಕಾರಿ ನೌಕರರಿಗೆ ಡಬಲ್ ಧಮಾಕಾ!  DA ಬಳಿಕ ಇದೀಗ TAಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟ title=
7th Pay Commission Latest Update (File Photo)

ನವದೆಹಲಿ: 7th Pay Commission Latest News - ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಒಳ್ಳೆಯ ಸುದ್ದಿಯೊಂದು ಪ್ರಕಟವಾಗಿದೆ. ಕೋಟ್ಯಂತರ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಸರ್ಕಾರ ದೊಡ್ಡ ಪರಿಹಾರ ನೀಡಿದೆ. ಕೇಂದ್ರ ಸರ್ಕಾರ (Modi Government) ಪ್ರಯಾಣ ಭತ್ಯೆ (TA) ಹಕ್ಕು ಮಂಡಿಸುವ ಗಡುವನ್ನು ಇದೀಗ 60 ದಿನಗಳಿಂದ 180 ದಿನಗಳಿಗೆ ವಿಸ್ತರಿಸಿದೆ. ಇದನ್ನು 15 ಜೂನ್ 2021 ರಿಂದ ಜಾರಿಗೆ ತರಲಾಗಿದೆ. ವಿಶೇಷವೆಂದರೆ, ಮಾರ್ಚ್ 2018 ರಲ್ಲಿ, ಕೇಂದ್ರ ಸರ್ಕಾರವು ನಿವೃತ್ತಿಯ ಮೇಲಿನ ಟಿಎ ಹಕ್ಕಿನ ಗಡುವನ್ನು 1 ವರ್ಷದಿಂದ 60 ದಿನಗಳಿಗೆ ಇಳಿಸಿತ್ತು. ಹಣಕಾಸು ಸಚಿವಾಲಯದ ಪ್ರಕಾರ, ಈ ಗಡುವನ್ನು ವಿಸ್ತರಿಸುವಂತೆ ಹಲವು ಸರ್ಕಾರಿ ಇಲಾಖೆಗಳು ಸರ್ಕಾರವನ್ನು ಆಗ್ರಹಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಕೇಂದ್ರ ವಿತ್ತ ಸಚಿವಾಲಯ ಹೇಳಿದ್ದೇನು?
ಈ ಸಮಯ ಮಿತಿಯನ್ನು ವಿಸ್ತರಿಸುವಂತೆ ಕೋರಿ ಹಲವು ಸರ್ಕಾರಿ ಇಲಾಖೆಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ನಿವೃತ್ತಿ ಹೊಂದರಿರುವ ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ಕುಟುಂಬದೊಂದಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವುದು ಮತ್ತು ನಂತರ ನೆಲೆಸುವುದು ಬಹಳ ಕಷ್ಟಕರವಾಗಿರುತ್ತದೆ. ಇದಕ್ಕಾಗಿ ಅಲೌನ್ಸ್ ಸಬ್ಮಿಶನ್ ಸಮಯ 60 ದಿನಗಳಿಗಿಂತ ಕಡಿಮೆಯಿತ್ತು, ಅದನ್ನು ಈಗ ವಿಸ್ತರಿಸಲಾಗಿದೆ. ಈ ಸೌಲಭ್ಯದಡಿಯಲ್ಲಿ, ನಿವೃತ್ತ ಕೇಂದ್ರ ಉದ್ಯೋಗಿ  (Central Government Employee) ತನ್ನ ಪ್ರಯಾಣದ ನಂತರ 6 ತಿಂಗಳುಗಳ ವರೆಗೆ ಪ್ರಯಾಣ ವೆಚ್ಚವನ್ನು ಇದೀಗ ಸಲ್ಲಿಸಬಹುದಾಗಿದೆ.  ಆದರೆ ಪ್ರವಾಸ, ವರ್ಗಾವಣೆ ಮತ್ತು ತರಬೇತಿಗೆ ಟಿಎ ಹಕ್ಕು ಸಲ್ಲಿಕೆಗೆ ಅಂತಿಮ ದಿನಾಂಕ 60 ದಿನಗಳು ಮಾತ್ರ  ಇರಲಿದೆ ಎಂಬುದನ್ನು ಮಾತ್ರ ನೆನಪಿನಲ್ಲಿಡಿ.

ಇದನ್ನೂ ಓದಿ-SBI New Rule: ಜುಲೈ 1 ರಿಂದ ಎಟಿಎಂನಿಂದ ಹಣ ವಿತ್ ಡ್ರಾ ಆಗಲಿದೆ ದುಬಾರಿ

ಜೂನ್ 26ರಂದು DA ಅರಿಯರ್ ಗೆ ಸಂಬಂಧಿಸಿದಂತೆ ಸಭೆ (7th Pay Commission Latest News)
ಜುಲೈ 1 ರಿಂದ DA ಮರುಸ್ಥಾಪನೆಗೆ ಮುಂಚಿತವಾಗಿ NVS ಪ್ರಿನ್ಸಿಪಲ್ ನ 7 ನೇ ವೇತನ ಆಯೋಗದ (7th Pay Commission Central Government) ವೇತನ ಮ್ಯಾಟ್ರಿಕ್ಸ್ ಬಗ್ಗೆ ಇಂದು ಪ್ರಕಟಿಸಲಾಗಿರುವ ಒಂದು ಒಳ್ಳೆಯ ಸುದ್ದಿ ಎಂದೇ ಇದನ್ನು ಭಾವಿಸಲಾಗುತ್ತಿದೆ. ಆದರೆ, ಜೂನ್ 26 ರಂದು ನಡೆಯಲಿರುವ ಸರ್ಕಾರದ ಸಭೆಯಲ್ಲಿ ಬಾಕಿ ಇರುವ ಮೂರು ತುಟ್ಟಿ ಭತ್ಯೆಗಳನ್ನು ಸಹ ಸರ್ಕಾರ ಒಂದು ವೇಳೆ ಅನುಮೋದಿಸಿದರೆ, ನೌಕರರ ಪಾಲಿಕೆ ಇದು ಡಬ್ಬಲ್ ಧಮಾಕಾ ಎಂದೇ ಹೇಳಲಾಗುವುದು.

ಇದನ್ನೂ ಓದಿ-Post Office Investment - ಪೋಸ್ಟ್ ಆಫಿಸ್ ನ ಈ ಹೂಡಿಕೆಯ ಮೂಲಕ ನೀವು ಕೂಡ ಮಿಲಿಯನೇರ್ ಆಗಬಹುದು

18 ತಿಂಗಳ ಬಳಿಕ ವೇತನದಲ್ಲಿ ಹೆಚ್ಚಳ (7th Pay Commission Update)
ಕೇಂದ್ರ ಸರ್ಕಾರಿ ನೌಕರರ DA ಸುಮಾರು 18 ತಿಂಗಳುಗಳ ಬಳಿಕ ಹೆಚ್ಚಾಗಲಿದೆ. ಜಾಗತಿಕ ಮಾಹಾಮಾರಿ ಕೊರೊನಾ ಕಾರಣ ಸರ್ಕಾರಿ ನೌಕರರ DA ತಡೆಹಿಡಿಯಲಾಗಿದೆ. ಈ DA ಕಳೆದ 18 ತಿಂಗಳಲ್ಲಿ ಶೇ.28 ರಷ್ಟು ಹೆಚ್ಚಾಗಿದೆ. ಪೇ ಮ್ಯಾಟ್ರಿಕ್ಸ್ ಲೆಕ್ಕಾಚಾರದಲ್ಲಿ ಶೇ.15 ರಷ್ಟು ತುಟ್ಟಿಭತ್ಯೆ ಸೇರಿಕೆಯಾಗುವ ನಿರೀಕ್ಷೆ ಇದ್ದು, ಇದರಿಂದ ಸರ್ಕಾರಿ ನೌಕರರ ವಾರ್ಷಿಕ ವೇತನದಲ್ಲಿಉತ್ತಮ ಏರಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ-SBI ಗ್ರಾಹಕರೇ ಗಮನಿಸಿ : ನಾಳೆ ಲಭ್ಯವಿರಲ್ಲ 'ಇಂಟರ್ನೆಟ್ ಬ್ಯಾಂಕಿಂಗ್' ಸೇವೆಗಳು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News