ನವದೆಹಲಿ: 7th Pay Commission - ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲಿಯೇ ಒಂದು ಸಂತಸದ ಸುದ್ದಿ ಪ್ರಾಪ್ತಿಯಾಗಲಿದೆ. 3% DA ಹೆಚ್ಚಳದ ನಂತರ, ಇದೀಗ ಸರ್ಕಾರವು 18 ತಿಂಗಳ ಬಾಕಿ ಇರುವ DA ಬಾಕಿ (18 Months DA Arrear) ಬಗ್ಗೆಯೂ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಆದರೆ, ಈ ಹಿಂದೆ ಸರ್ಕಾರ ಡಿಎ ಬಾಕಿ ಇದೆ ಎಂದು ಹೇಳಿದ್ದು, ಪ್ರಸ್ತುತ ಅದನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿತ್ತು. ಆದರೆ ಇದೀಗ ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಉದ್ಯೋಗಿಗಳಿಗೆ ನೇರವಾಗಿ 2.18 ಲಕ್ಷ ರೂ.ಗಳ ಲಾಭವಾಗಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-

ಡಿಎ ಬಾಕಿ ಬಗ್ಗೆ ನಿರ್ಧಾರ ಪ್ರಕಟಣೆ ಸಾಧ್ಯತೆ
ವಾಸ್ತವದಲ್ಲಿ 18 ತಿಂಗಳ ಡಿಎ ಬಾಕಿಯನ್ನು ಸದ್ಯಕ್ಕೆ ಅಜೆಂಡಾದಲ್ಲಿ ಸೇರಿಸಲಾಗಿಲ್ಲ ಈ ಹಿಂದೆ ಸರ್ಕಾರ ಹೇಳಿತ್ತು, ಆದರೆ ಇದೀಗ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಸರ್ಕಾರವು ಜನವರಿ 2020 ರಿಂದ ಜೂನ್ 2021 ರವರೆಗಿನ ಡಿಎ ಬಾಕಿ ಪಾವತಿ ನಿರ್ಧಾರವನ್ನು ತಡೆಹಿಡಿದಿದೆ ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ-SBI: ಕನಸಿನ ಮನೆ ಹೊಂದಲು ಬಯಸುವವರಿಗೊಂದು ಸಂತಸದ ಸುದ್ದಿ

ಹಣಕಾಸು ಸಚಿವೆ ಹೇಳಿದ್ದೇನು?
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲವು ದಿನಗಳ ಹಿಂದೆ ಈ ಕುರಿತು ಹೇಳಿಕೆಯನ್ನು ನೀಡಿದ್ದರು, 'ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ, ನೌಕರರ ಬಾಕಿ ಇರುವ ತುಟ್ಟಿಭತ್ಯೆಯನ್ನು ನಿಲ್ಲಿಸಲಾಗಿದೆ, ಇದರಿಂದಾಗಿ ಸರ್ಕಾರವು ಬಡವರು ಮತ್ತು ನಿರ್ಗತಿಕರಿಗೆ ಆ ಹಣದಿಂದ ಸಹಾಯ ಮಾಡಬಹುದು. ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರದ ಮಂತ್ರಿಗಳು ಮತ್ತು ಸಂಸದರ ಸಂಬಳವನ್ನು ಸಹ ಕಡಿತಗೊಳಿಸಗಿತ್ತು. ಇದರೊಂದಿಗೆ ಕೇಂದ್ರ ನೌಕರರ ವೇತನದಲ್ಲಿ ಯಾವುದೇ ಕಡಿತ ಮಾಡಿಲ್ಲ ಅಥವಾ ಡಿಎಯಲ್ಲಿ ಯಾವುದೇ ಕಡಿತ ಮಾಡಿಲ್ಲ. ಇಡೀ ವರ್ಷ ಮತ್ತು ಡಿಎ ಮತ್ತು ನೌಕರರ ಸಂಬಳವನ್ನು ಪಾವತಿಸಲಾಗಿದೆ' ಎಂದು ಸಿತಾರಾಮನ್ ಹೇಳಿದ್ದರು.


ಇದನ್ನೂ ನೋಡಿ-Free Smartphone: Jio ಕಂಪನಿಯ ಸೂಪರ್ ಹಿಟ್ ಕೊಡುಗೆ! ಉಚಿತವಾಗಿ ಸಿಗುತ್ತಿದೆ 4G ಸ್ಮಾರ್ಟ್ ಫೋನ್, ಹೇಗೆ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.