Free Smartphone: Jio ಕಂಪನಿಯ ಸೂಪರ್ ಹಿಟ್ ಕೊಡುಗೆ! ಉಚಿತವಾಗಿ ಸಿಗುತ್ತಿದೆ 4G ಸ್ಮಾರ್ಟ್ ಫೋನ್, ಹೇಗೆ?

Jio Phone 4G Free Offer: ಇಂದು ನಾವು ನಿಮಗೆ ಜಿಯೋ ಕಂಪನಿಯ ಒಂದು ಅದ್ಭುತ ಪ್ರೀಪೇಡ್ ಯೋಜನೆ ಮತ್ತು ಅದರ ಕೊಡುಗೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಈ ಯೋಜನೆಯಲ್ಲಿ ನಿಮಗೆ ಉಚಿತ ಡೇಟಾ ಹಾಗೂ ಕರೆ ಸೌಲಭ್ಯಗಳು ಸಿಗುತ್ತಿವೆ. ಅಷ್ಟೇ ಅಲ್ಲ ಈ ಯೋಜನೆಯಲ್ಲಿ ನಿಮಗೆ ಉಚಿತ 4ಜಿ ಸ್ಮಾರ್ಟ್ ಫೋನ್ ಕೂಡ ನೀಡಲಾಗುತ್ತಿದೆ. ಸಂಪೂರ್ಣ ಎರಡು ವರ್ಷಗಳ ವ್ಯಾಲಿಡಿಟಿ ಇರುವ ಈ ಪ್ಲಾನ್ ಕುರಿತು ವಿಸ್ತೃತ ಮಾಹಿತಿಯನ್ನು ಪದೆದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Apr 15, 2022, 05:28 PM IST
  • ಜಿಯೋ ಕಂಪನಿಯ ಸೂಪರ್ ಹಿಟ್ ಯೋಜನೆ
  • ಈ ಯೋಜನೆಯಲ್ಲಿ ಸಿಗುತ್ತಿದೆ ಉಚಿತ ಸ್ಮಾರ್ಟ್ ಫೋನ್
  • ಈ ಯೋಜನೆ ಏನೆಲ್ಲಾ ಪ್ರಯೋಜನಗಳನ್ನು ಒಳಗೊಂಡಿದೆ ತಿಳಿಯೋಣ ಬನ್ನಿ
Free Smartphone: Jio ಕಂಪನಿಯ ಸೂಪರ್ ಹಿಟ್ ಕೊಡುಗೆ! ಉಚಿತವಾಗಿ ಸಿಗುತ್ತಿದೆ 4G ಸ್ಮಾರ್ಟ್ ಫೋನ್, ಹೇಗೆ? title=
Jio Smartphone free scheme

Free Jio Phone 4G with Rs 1499 Plan: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಯಾವಾಗಲು ಒಂದಕ್ಕಿಂತ ಹೆಚ್ಚು ಯೋಜನೆಗಳನ್ನು ನೀಡುತ್ತದೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು  ನೀಡುವ ಈ ಪ್ರಯತ್ನವನ್ನು ಕಂಪನಿ ಒಂದು ಹೆಜ್ಜೆ ಮುಂದೆಕ್ಕೆ ತೆಗೆದುಕೊಂಡು ಹೋಗಿದೆ, ಹೌದು, ಇದಕ್ಕಾಗಿ ಜಿಯೋ ಒಂದು ಹೊಸ ಯೋಜನೆಯನ್ನು ರೂಪಿಸಿದೆ, ಈ ಯೋಜನೆಗಳಲ್ಲಿ ಲಭ್ಯವಿರುವ ಪ್ರಯೋಜನಗಳು ಬಳಕೆದಾರರು ಮತ್ತು ಇತರ ಟೆಲಿಕಾಂ ಕಂಪನಿಗಳನ್ನು ನಿಬ್ಬೇರಗಾಗಿಸಿವೆ. ಜಿಯೋ ಈ ಯೋಜನೆಯಲ್ಲಿ ಕಡಿಮೆ ವೆಚ್ಚದಲ್ಲಿ ಉಚಿತ ಡೇಟಾ ಮತ್ತು ಕರೆ ಸೌಲಭ್ಯದ ಜೊತೆಗೆ 4G ಸ್ಮಾರ್ಟ್‌ಫೋನ್ ಅನ್ನು ಸಹ ನೀಡುತ್ತಿದೆ. ಜಿಯೋದ ಈ ಯೋಜನೆ ಬಗ್ಗೆ ತಿಳಿಯೋಣ ಬನ್ನಿ.

ಜಿಯೋದ ಈ ಯೋಜನೆಗೆ ಯಾವುದೇ ಸರಿಸಾಟಿ ಇಲ್ಲ
ಪ್ರಸ್ತುತ ಸಮಯದಲ್ಲಿ, ಏರ್‌ಟೆಲ್, ವೊಡಾಫೋನ್ ಐಡಿಯಾ ಅಥವಾ ಬಿಎಸ್‌ಎನ್‌ಎಲ್, ಯಾವ ಕಂಪನಿಗಳೂ ಕೂಡ ತನ್ನ ಬಳಕೆದಾರರಿಗೆ ಇಂತಹ ಯೋಜನೆಯನ್ನು ನೀಡುತ್ತಿಲ್ಲ, ಏಕೆಂದರೆ ಈ ಯೋಜನೆಯ ಮಾನ್ಯತೆ ಎರಡು ವರ್ಷಗಳಾಗಿದೆ. ಜಿಯೋದ ಈ ಯೋಜನೆಗೆ ಯಾವುದೇ ಸರಿಸಾಟಿ ಇಲ್ಲ ಎಂದರೆ ತಪ್ಪಾಗಲಾರದು. ಏಕೆಂದರೆ ಇಷ್ಟೊಂದು ವ್ಯಾಲಿಡಿಟಿಯೊಂದಿಗೆ 4G ಸೇವೆಗಳ ಜೊತೆಗೆ ಡೇಟಾ ಮತ್ತು ಅನೇಕ ಪ್ರಯೋಜನಗಳನ್ನು ಈ ಯೋಜನೆಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ.

ಇದನ್ನೂ ಓದಿ-InspectIR: ಈ ಡಿವೈಸ್ ಮೂಲಕ ಕೇವಲ ಮೂರೇ ನಿಮಿಷಗಳಲ್ಲಿ ಉಸಿರಾಟದ ಮೂಲಕ ಕೊರೊನಾ ಟೆಸ್ಟ್ ನಡೆಸಿ

ಜಿಯೋದ ಅತ್ಯದ್ಭುತ ಯೋಜನೆ ಇದಾಗಿದೆ
ನಾವು ಹೇಳಲು ಹೊರಟಿರುವ ಜಿಯೋ ಯೋಜನೆಯು ರೂ 1,499ರ ಯೋಜನೆಯಾಗಿದೆ ಮತ್ತು ಎರಡು ವರ್ಷಗಳ ಮಾನ್ಯತೆಯೊಂದಿಗೆ ಬರುತ್ತದೆ. 1,499 ರೂಗಳಿಗೆ ಬದಲಾಗಿ, ಜಿಯೋ ಈ ಯೋಜನೆಯಲ್ಲಿ ಬಳಕೆದಾರರಿಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು 24GB ಹೈ-ಸ್ಪೀಡ್ ಇಂಟರ್ನೆಟ್ ಅನ್ನು ನೀಡುತ್ತಿದೆ. ಎಲ್ಲಾ ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯೊಂದಿಗೆ ಈ ಯೋಜನೆಯಲ್ಲಿ 4G ಸ್ಮಾರ್ಟ್‌ಫೋನ್ ಅನ್ನು ಸಹ ಉಚಿತವಾಗಿ ನೀಡಲಾಗುತ್ತಿದೆ. ಯಾವ ಸ್ಮಾರ್ಟ್ ಫೋನ್ ಅಂತೀರಾ?

ಇದನ್ನೂ ಓದಿ-Free Wifi Anywhere: ಮೊಬೈಲ್ ಡೇಟಾ ಖಾಲಿ ಆಯ್ತಾ? ಈ ರೀತಿ ಎಲ್ಲಿ ಬೇಕಾದರು ಉಚಿತ ವೈಫೈ ಕನೆಕ್ಟ್ ಮಾಡಿ

ಉಚಿತ 4G ಸ್ಮಾರ್ಟ್ಫೋನ್ ಲಭ್ಯವಿದೆ
ಈ ಯೋಜನೆಯಲ್ಲಿ ನಾವು ಹೇಳುತ್ತಿರುವ 4G ಸ್ಮಾರ್ಟ್‌ಫೋನ್ Jio Phone 4G ಆಗಿದೆ. 2,999 ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ 2.4-ಇಂಚಿನ QVGA ಡಿಸ್ಪ್ಲೇ, 1,500mAh ಬ್ಯಾಟರಿ ಮತ್ತು 9 ಗಂಟೆಗಳ ಟಾಕ್ ಟೈಮ್, SD ಕಾರ್ಡ್ ಮೂಲಕ 128GB ವರೆಗೆ ಸಂಗ್ರಹಣಾ ಸಾಮರ್ಥ್ಯ ವಿಸ್ತರಣೆ ಮತ್ತು 0.3MP ಮುಂಭಾಗ ಮತ್ತು 0.3MP ಹಿಂಭಾಗದ ಕ್ಯಾಮೆರಾಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ. ಈ ಸ್ಮಾರ್ಟ್‌ಫೋನ್‌ನಲ್ಲಿ ನೀವು ಧ್ವನಿ ಸಹಾಯಕ ಬೆಂಬಲವನ್ನು ಸಹ ಪಡೆಯುತ್ತೀರಿ ಮತ್ತು ಇದು ಇಂಗ್ಲಿಷ್ ಸೇರಿದಂತೆ 18 ಭಾಷ್ಟೆಗಳ ಬೆಂಬಲದೊಂದಿಗೆ ಬರುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News