SBI: ಕನಸಿನ ಮನೆ ಹೊಂದಲು ಬಯಸುವವರಿಗೊಂದು ಸಂತಸದ ಸುದ್ದಿ

SBI Home Loan Offer: ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ SBI ತನ್ನ ಗ್ರಾಹಕರಿಗೆ ಶೇ.6.65 ಶೇಕಡಾ ಆರಂಭಿಕ ಬಡ್ಡಿದಾರದಲ್ಲಿ ಗೃಹ ಸಾಲವನ್ನು ಒದಗಿಸುತ್ತಿದೆ. ಈ ಹೋಮ್ ಲೋನ್ ಅನ್ನು ನಿಮ್ಮ ಕ್ರೆಡಿಟ್ ಸ್ಕೋರ್‌ಗೆ ಲಿಂಕ್ ಮಾಡಲಾಗಿದೆ, ಅಂದರೆ, ನಿಮ್ಮ ಸ್ಕೋರ್ ಬಲವಾಗಿದ್ದರೆ, ನೀವು ಹೆಚ್ಚು ಸಾಲವನ್ನು ಪಡೆದುಕೊಳ್ಳಬಹುದು.  

Written by - Nitin Tabib | Last Updated : Apr 16, 2022, 10:37 AM IST
  • ಸ್ವಂತ ಮನೆ ಆಸೆ ಇರುವವರಿಗೊಂದು ಸಿಹಿ ಸುದ್ದಿ
  • ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಒದಗಿಸುತ್ತಿರುವ SBI
  • ಸಾಲ ಪಡೆಯಲು ಅನ್ವಯಿಸುವ ಷರತ್ತುಗಳೇನು ತಿಳಿಯಲು ಸುದ್ದಿ ಓದಿ
SBI: ಕನಸಿನ ಮನೆ ಹೊಂದಲು ಬಯಸುವವರಿಗೊಂದು ಸಂತಸದ ಸುದ್ದಿ title=
SBI Home Loan Offers

SBI Home Loan Offers​: ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಪ್ರಕಟವಾಗಿದೆ. ವಾಸ್ತವದಲ್ಲಿ, SBI ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡುತ್ತಿದೆ. ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ, ಮಹಿಳೆಯರು ಸಾಲವನ್ನು ಪಡೆದರೆ, ಅವರಿಗೆ ಇತರ ಪ್ರಯೋಜನಗಳ ಹೊರತಾಗಿ ರಿಯಾಯಿತಿಗಳನ್ನು ಸಹ ನೀಡಲಾಗುವುದು ಎನ್ನಲಾಗಿದೆ. ಅಂದರೆ ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಲಿದೆ. ಈ ಹೋಮ್ ಲೋನ್ ಅನ್ನು ಕ್ರೆಡಿಟ್ ಸ್ಕೋರ್‌ಗೆ ಲಿಂಕ್ ಮಾಡಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಅಂದರೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ನೀವು ಹೆಚ್ಚು ಸಾಲವನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.

SBI ನೀಡಿರುವ ಮಾಹಿತಿ ಏನು?
ಈ ಕುರಿತು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ ಮೂಲಕ ಮಾಹಿತಿ ನೀಡಿರುವ ಎಸ್‌ಬಿಐ, 'ಎಸ್‌ಬಿಐ ಹೋಮ್ ಲೋನ್‌ನೊಂದಿಗೆ ನಿಮ್ಮ ಕನಸಿನ ಮನೆ ಪಡೆಯಿರಿ. 18 ವರ್ಷದಿಂದ 70 ವರ್ಷದೊಳಗಿನವರು ಸಾಲ ಪಡೆಯಬಹುದು. SBI ಯ ನಿಯಮಿತ ಗೃಹ ಸಾಲಗಳಲ್ಲಿ ಫ್ಲೆಕ್ಸಿಪೇ, ಎನ್‌ಆರ್‌ಐ ಹೋಮ್ ಲೋನ್, ಸಾಲದವರಿಗೆ ಸಾಲ, ಡಿಫರೆನ್ಷಿಯಲ್ ಆಫರ್, ಪ್ರಿವಿಲೇಜ್, ಶೌರ್ಯ ಮತ್ತು ಅಪ್ನಾ ಘರ್ ಶಾಮೀಲಾಗಿವೆ' ಎಂದು ಹೇಳಿದೆ.

ನಿಯಮಗಳು ಮತ್ತು ಷರತ್ತುಗಳು
ನಿವಾಸಿ: ಭಾರತೀಯ
ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯಸ್ಸು: 70 ವರ್ಷಗಳು
ಸಾಲದ ಅವಧಿ: 30 ವರ್ಷಗಳಾಗಿರಬೇಕು.

ಇದನ್ನೂ ಓದಿ-Shani: ಶನಿಯ ಶುಭ ದೆಸೆ ಭಾಗ್ಯೋದಯಕ್ಕೆ ಕಾರಣ, ಜೀವನದಲ್ಲಿ ಏನೆಲ್ಲಾ ಸಿಗುತ್ತದೆ ಗೊತ್ತಾ?

ಹೊಸ ಬಡ್ಡಿದರಗಳು ಇಂತಿವೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲವನ್ನು ವಾರ್ಷಿಕ ಶೇ.6.65 ಬಡ್ಡಿ ದರದಲ್ಲಿ ನೀಡುತ್ತಿದೆ.

ಇದನ್ನೂ ಓದಿ-Free Smartphone: Jio ಕಂಪನಿಯ ಸೂಪರ್ ಹಿಟ್ ಕೊಡುಗೆ! ಉಚಿತವಾಗಿ ಸಿಗುತ್ತಿದೆ 4G ಸ್ಮಾರ್ಟ್ ಫೋನ್

ಪ್ರಯೋಜನಗಳು ಇಂತಿವೆ
>> ಇತರ ಬ್ಯಾಂಕ್ ಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಬಡ್ಡಿದರವಾಗಿದೆ 
>> ಇದರ ಸಂಸ್ಕರಣಾ ಶುಲ್ಕ ಕಡಿಮೆ.
>> ಯಾವುದೇ ರೀತಿಯ ಇತರ ಪರೋಕ್ಷ ಶುಲ್ಕಗಳಿಲ್ಲ
>> ಇದಕ್ಕಾಗಿ ಯಾವುದೇ ಪೂರ್ವಪಾವತಿ ಶುಲ್ಕಗಳಿಲ್ಲ
>> ಯಾವುದೇ ಗುಪ್ತ ಶುಲ್ಕಗಳು ಅನ್ವಯಿಸುವುದಿಲ್ಲ
>> ಸಾಲವನ್ನು 30 ವರ್ಷಗಳವರೆಗೆ ಮರುಪಾವತಿ ಮಾಡಬಹುದು
>> ಇದರ ಅಡಿಯಲ್ಲಿ, ಗೃಹ ಸಾಲವು ಓವರ್‌ಡ್ರಾಫ್ಟ್ ರೂಪದಲ್ಲಿಯೂ ಲಭ್ಯವಿದೆ
>> ಮಹಿಳಾ ಗ್ರಾಹಕರಿಗೆ ಬಡ್ಡಿ ದರ ಇನ್ನಷ್ಟು ಕಡಿಮೆಯಾಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News