7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕೇಂದ್ರ ಸರ್ಕಾರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಜುಲೈ 1 ರಿಂದ ಹೆಚ್ಚಿಸಲಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ನೇರವಾಗಿ ಶೇ.38ಕ್ಕೆ ತಲುಪಲಿದೆ. ಈ ತುಟ್ಟಿಭತ್ಯೆ ಹೆಚ್ಚಳದಿಂದ ನೌಕರರ ಸಂಬಳದಲ್ಲಿ ಬಂಪರ್ ಹೆಚ್ಚಳವಾಗಲಿದೆ. ವೇತನ ಎಷ್ಟು ಹೆಚ್ಚಾಗಲಿದೆ ತಿಳಿಯೋಣ ಬನ್ನಿ.


COMMERCIAL BREAK
SCROLL TO CONTINUE READING

ಸತತವಾಗಿ ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆ ಸರ್ಕಾರಿ ನೌಕರರ ವೇತನ ಜುಲೈ ತಿಂಗಳಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ. ಮಾರ್ಚ್ ನಲ್ಲಿ ಪ್ರಕಟಗೊಂಡ ಆಲ್ ಇಂಡಿಯ ಕಂಜ್ಯೂಮರ್ ಪ್ರೈಸ್ ಇಂಡೆಕ್ಸ್ ಅಂಕಿ-ಅಂಶಗಳ ಪ್ರಕಾರ ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಾಗುವುದು ಬಹುತೇಕ ನಿಶ್ಚಿತವಾಗಿದೆ. 

ಅಂಕಿ-ಅಂಶಗಳು ಏನು ಹೇಳುತ್ತವೆ? 
2022ರ ಜನವರಿ ಮತ್ತು ಫೆಬ್ರವರಿಯಲ್ಲಿ ಎಐಸಿಪಿ ಸೂಚ್ಯಂಕದಲ್ಲಿ ಕುಸಿತ ಕಂಡುಬಂದಿರುವುದು ಇಲ್ಲಿ ಉಲ್ಲೇಖನೀಯ. ಎಐಸಿಪಿ ಸೂಚ್ಯಂಕವು ಜನವರಿಯಲ್ಲಿ 125.1 ರಷ್ಟಿದ್ದರೆ, ಫೆಬ್ರವರಿಯಲ್ಲಿ ಅದು 125 ರಷ್ಟಿತ್ತು, ಆದರೆ ಮಾರ್ಚ್‌ನಲ್ಲಿ ಇದು 1 ಪಾಯಿಂಟ್‌ನಿಂದ 126 ಕ್ಕೆ ಏರಿಕೆಯಾಗಿದೆ. ಏಪ್ರಿಲ್-ಮೇ ಮತ್ತು ಜೂನ್ ಸಂಖ್ಯೆಗಳು ಇದುವರೆಗೆ ಪ್ರಕಟಗೊಂಡಿಲ್ಲ. ಈ ಸೂಚ್ಯಂಕ ಒಂದು ವೇಳೆ 126 ಕ್ಕಿಂತ ಹೆಚ್ಚಾದರೆ, ಸರ್ಕಾರವು ತುಟ್ಟಿಭತ್ಯೆಯನ್ನು ಶೇ.4 ರಷ್ಟು ಹೆಚ್ಚಿಸಬಹುದು.

ವೇತನ ಎಷ್ಟು ಹೆಚ್ಚಾಗಲಿದೆ?
ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದರೆ ಮತ್ತು ಸರ್ಕಾರ ಶೇ.4 ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಿದರೆ, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.34 ರಿಂದ ಶೇ.38ಕ್ಕೆ ಏರಿಕೆಯಾಗಲಿದೆ. ಹಾಗಾದರೆ ಬನ್ನಿ ಕನಿಷ್ಠ ಮತ್ತು ಗರಿಷ್ಠ ವೇತನ ಶ್ರೇಣಿಯ ಮೇಲೆ ಇದು ಯಾವ ರೀತಿಯ ಪ್ರಭಾವ ಬೀರಲಿದೆ ತಿಳಿದುಕೊಳ್ಳೋಣ ಬನ್ನಿ,


ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ಕುಟುಂಬ ಸದಸ್ಯರಿಗೊಂದು ಭಾರಿ ನೆಮ್ಮದಿಯ ಸುದ್ದಿ

ಗರಿಷ್ಠ ಮೂಲ ವೇತನದ ಮೇಲೆ ಲೆಕ್ಕಾಚಾರ ಹೀಗಿರಲಿದೆ
1. ಉದ್ಯೋಗಿಯ ಮೂಲ ವೇತನ: 56,900 ರೂ
2. ಹೊಸ ತುಟ್ಟಿಭತ್ಯೆ (38%): ರೂ.21,622/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%): ರೂ.19,346/ತಿಂಗಳು
4. ತುಟ್ಟಿಭತ್ಯೆಯಲ್ಲಿ ಒಟ್ಟು ಹೆಚ್ಚಳ: 21,622-19,346 = ರೂ 2,276/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ: 2,276X12 = 27,312 ರೂ.


ಇದನ್ನೂ ಓದಿ-7th Pay Commission: ಹೊಸ ಸೂತ್ರದಡಿ ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳ, ಪ್ರತಿವರ್ಷ ಮೂಲವೇತನದಲ್ಲಿ ಪರಿಷ್ಕರಣೆ!

ಕನಿಷ್ಠ ಮೂಲ ವೇತನದ ಮೇಲೆ ಲೆಕ್ಕಾಚಾರ ಹೀಗಿರಲಿದೆ
1. ಉದ್ಯೋಗಿಯ ಮೂಲ ವೇತನ: ರೂ 18,000
2. ಹೊಸ ತುಟ್ಟಿಭತ್ಯೆ (38%): ರೂ.6840/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%): ರೂ.6120/ತಿಂಗಳು
4. ತುಟ್ಟಿಭತ್ಯೆಯಲ್ಲಿ ಒಟ್ಟು ಹೆಚ್ಚಳ: 6840-6120 = ರೂ.720/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ: 720 X12 = 8,640 ರೂ


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.