7th Pay Commission/HBA Interest Rates: ಕೇಂದ್ರ ಉದ್ಯೋಗಿಗಳಿಗೆ ಸರ್ಕಾರವು ಮಹತ್ವದ ಘೋಷಣೆ ಮಾಡಿದೆ. ಬಿಲ್ಡಿಂಗ್ ಅಡ್ವಾನ್ಸ್  ಅಂದರೆ ಬ್ಯಾಂಕ್‌ನಿಂದ ಪಡೆದ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಉದ್ಯೋಗಿಗಳಿಗೆ  7.9 ಪ್ರತಿಶತದಿಂದ 7.1 ಪ್ರತಿಶತಕ್ಕೆ ಇಳಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ನೌಕರರಿಗೆ ಹೆಚ್ಚಿನ ಲಾಭವಾಗಲಿದೆ.


COMMERCIAL BREAK
SCROLL TO CONTINUE READING

ಉದ್ಯೋಗಿಗಳಿಗೆ ಬಿಗ್ ರಿಲೀಫ್ ! :
ಈ ನಿರ್ಧಾರದ ಪ್ರಕಾರ, ಏಪ್ರಿಲ್ 1, 2022 ರಿಂದ ಮಾರ್ಚ್ 31, 2023 ರವರೆಗೆ ಸರ್ಕಾರವು ಉದ್ಯೋಗಿಗಳಿಗೆ ಮನೆ ನಿರ್ಮಿಸಲು, ಮನೆ ಖರೀದಿಸಲು ಬ್ಯಾಂಕ್‌ನಿಂದ ಪಡೆದ ಗೃಹ ಸಾಲವನ್ನು ಮರುಪಾವತಿಸಲು ನೀಡುವ ಅಡ್ವಾನ್ಸ್ ಗೆ 80 ಬೇಸಿಸ್ ಪಾಯಿಂಟ್‌ಗಳ ಬಡ್ಡಿ ದರವನ್ನು  ಇಳಿಸಿದೆ.  ಅಂದರೆ, ಬಡ್ಡಿದರವನ್ನು 0.8 ರಷ್ಟು ಕಡಿತಗೊಳಿಸಲಾಗಿದೆ.  ಉದ್ಯೋಗಿಗಳು ಈಗ 31 ಮಾರ್ಚ್ 2023 ರವರೆಗೆ ಇದರ ಪ್ರಯೋಜನವನ್ನು ಪಡೆಯಬಹುದು.


ಇದನ್ನೂ ಓದಿ : Stock market: ಹೂಡಿಕೆದಾರರನ್ನು ಕೋಟ್ಯಾಧಿಪತಿ ಮಾಡಿದ 5 ರೂ. ಷೇರು..!


ಯಾವ ದರದಲ್ಲಿ ಸಿಗುತ್ತದೆ ಅಡ್ವಾನ್ಸ್ :
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಜಾರಿಗೊಳಿಸಿರುವ ಮೆಮರಾಂಡಂ ನಲ್ಲಿ ಮುಂಗಡದ ಬಡ್ಡಿದರಗಳಲ್ಲಿ ಕಡಿತದ ಬಗ್ಗೆ ತಿಳಿಸಲಾಗಿದೆ. ಇದರ ಪ್ರಕಾರ ನೌಕರರು ಮಾರ್ಚ್ 31, 2023 ರವರೆಗೆ ವಾರ್ಷಿಕ ಶೇಕಡಾ 7.1 ರ ದರದಲ್ಲಿ  ಅಡ್ವಾನ್ಸ್ ತೆಗೆದುಕೊಳ್ಳಬಹುದು. 


ಎಷ್ಟು ಅಡ್ವಾನ್ಸ್ ತೆಗೆದುಕೊಳ್ಳಬಹುದು? :
ಸರ್ಕಾರವು ನೀಡುವ ಈ ವಿಶೇಷ ಸೌಲಭ್ಯದ ಅಡಿಯಲ್ಲಿ, ಕೇಂದ್ರ ನೌಕರರು ತಮ್ಮ ಮೂಲ ವೇತನದ ಪ್ರಕಾರ 34 ತಿಂಗಳವರೆಗೆ ಅಥವಾ ಗರಿಷ್ಠ 25 ಲಕ್ಷದವರೆಗೆ ಎರಡು ರೀತಿಯಲ್ಲಿ  ಅಡ್ವಾನ್ಸ್ ಪಡೆಯಬಹುದು. ಅಲ್ಲದೆ, ಮನೆಯ ವೆಚ್ಚ ಅಥವಾ ಪಾವತಿಸುವ ಸಾಮರ್ಥ್ಯದಿಂದ ಉದ್ಯೋಗಿಗಳಿಗೆ ಯಾವುದು ಕಡಿಮೆಯೋ, ಆ ಮೊತ್ತವನ್ನು  ಅಡ್ವಾನ್ಸ್ ಆಗಿ ತೆಗೆದುಕೊಳ್ಳಬಹುದು. 


ಇದನ್ನೂ ಓದಿ : PM Kisan: ಪಿಎಂ ಕಿಸಾನ್ ನಿಧಿಯ 12ನೇ ಕಂತಿಗೆ ಸಂಬಂಧಿಸಿದಂತೆ ಬಿಗ್ ನ್ಯೂಸ್


HBA ಎಂದರೇನು? :
ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಮನೆ ನಿರ್ಮಿಸಲು   ಅಡ್ವಾನ್ಸ್ ನೀಡುತ್ತದೆ ಎಂಬುದು ಉಲ್ಲೇಖನೀಯ. ಇದರಲ್ಲಿ ಉದ್ಯೋಗಿ ಸ್ವಂತ ಅಥವಾ ಪತ್ನಿಯ ನಿವೇಶನದಲ್ಲಿ ಮನೆ ಕಟ್ಟಲು ಮುಂಗಡ ಹಣ ತೆಗೆದುಕೊಳ್ಳಬಹುದು. ಈ ಯೋಜನೆಯನ್ನು 1 ಅಕ್ಟೋಬರ್ 2020 ರಿಂದ ಪ್ರಾರಂಭಿಸಲಾಯಿತು. ಇದರ ಅಡಿಯಲ್ಲಿ, 31 ಮಾರ್ಚ್ 2023 ರವರೆಗೆ, ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ 7.1% ಬಡ್ಡಿ ದರದಲ್ಲಿ ಮನೆ ನಿರ್ಮಾಣ ಮುಂಗಡವನ್ನು ನೀಡುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.